ಬಿಎಸ್ವೈ ಕಷ್ಟಜೀವಿ ಶ್ರಮದಿಂದ ಮೇಲೆ ಬಂದವರು ಜನರಿಗಾಗಿ ದುಡಿಯುತ್ತಿರುವವರು -ಗವಿಶ್ರೀ

ಕೊಪ್ಪಳ : ಸಿಂದಗಿ ಚುನಾವಣೆಯ ಪ್ರಚಾರಕ್ಕಾಗಿ ತೆರಳುತ್ತಿದ್ದ ಬಿನೆಪಿ ರಾಜ್ಯ ಉಪಾಧ್ಯಕ್ಷರ ಬಿ.ವೈ ವಿಜಯೇಂದ್ರ, ಕೊಪ್ಪಳದ ಶ್ರೀಗವಿಸಿದ್ದೇಶ್ವರ ಮಠಕ್ಕೆ ಭೇಟಿ‌ ನೀಡಿ ಅಭಿನವಶ್ರೀಗಳ ಆಶೀರ್ವಾದ ಪಡೆದರು, ಈ ಸಂದರ್ಭದಲ್ಲಿ ಮಠ ವಸತಿ ನಿಲಯದ ಮಕ್ಕಳ ಬಗ್ಗೆ ಕಾಳಜೀಯಿಂದ ಶ್ರೀಗಳನ್ನು ವಿಚಾರಿಸಿ ಶ್ರೀಗಳ ಮನಗೆದ್ದರು.ಸಿಂದಗಿ ಚುನಾವಣೆಯ ಪ್ರಚಾರಕ್ಕೆ ತೆರಳುವಾ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿನವಶ್ರೀಗಳ ಆಶೀರ್ವಾದ ಹಾಗೂ ಗವಿಸಿದ್ದೇಶ್ವರ ಶ್ರೀಗಳ ದರ್ಶನ ಪಡೆದು, ಶ್ರೀಗಳೊಂದಿಗೆ ಕೆಲಕಾಲ ಚರ್ಚೆ ನಡೆಸಿದ್ರು. ಈ ಸಂದರ್ಭದಲ್ಲಿ ವಿಜೆಯೇಂದ್ರ ನಾನು ಅಪ್ಪಾಜಿ ಅವರಿಗೆ ಮಠಕ್ಕೆ ಹೋಗುವುದಾಗಿ ಹೇಳಿದಾಗ ಅವರು ಬಹಳ ಖುಷಿ ಪಟ್ಟರು ಎಂದು ಶ್ರೀಗಳಿಗೆ ಹೇಳಿದರು ಇದೇ ವೇಳೆ ಶ್ರೀಗಳು ಈ ವಯಸ್ಸಿನಲ್ಲೂ ಅವರು ಬಹಳ ಗಟ್ಟಿಯಾಗಿದ್ದಾರೆ. ಪ್ರವಾಸ ಮಾಡುತ್ತಲೇ ಇರುತ್ತಾರೆ, ಅವರ ವಯಸ್ಸು 80 ಇರಬಹುದಾ? ಎಂದು ವಿಜಯೇಂದ್ರ ಅವರಿಗೆ ಕೇಳಿದರು, ವಿಜಯೇಂದ್ರ 79 ಬುದ್ದಿ ಅಂತಾ ಹೇಳಿದಾಗ ಶ್ರೀಗಳು, ಅವರನ್ನು ಸುಮ್ನೆ ಕೂಡಿಸುವುದಕ್ಕೆ ಆಗುವುದಿಲ್ಲ, ಅವರು ಕಷ್ಟಜೀವಿ ಶ್ರಮದಿಂದ ಮೇಲೆ ಬಂದವರು ಜನರಿಗಾಗಿ ದುಡಿಯುತ್ತಿರುವವರ ಎಂದು ಅಭಿನವ ಶ್ರೀಗಳು ಯಡಿಯೂರಪ್ಪ ಅವರನ್ನು ಅಭಿಮಾನದಿಂದ ಗುಣಗಾನ ಮಾಡಿದರು.

ಇನ್ನು ವಿಜಯೇಂದ್ರ ಒಂದುವರೆ ವರ್ಷ ಅವರನ್ನು ಕೊರೊನಾ ಕೈಕಟ್ಟಿಹಾಕಿತು ಇಲ್ಲಂದ್ರೆ ಸಾಕಷ್ಟು ಕೆಲಸ ಮಾಡುವವರು ಎಂದು ಶ್ರೀಗಳಿಗೆ ಹೇಳಿದರು. ಇನ್ನು ಶ್ರೀಗಳು ನಾವು ಮಠದಲ್ಲಿ ಕೋವಿಡ್ ಆಸ್ಪತ್ರೆ ಮಾಡಿದಾಗ ನಮ್ಮ ಕಾರ್ಯಕ್ಕೆ ಸಾಕಷ್ಟು ಸ್ಪೂರ್ತಿ ನೀಡಿದರು, ನಿಮ್ಮ ಅಪ್ಪಾಜಿ ಎಂದು ವಿಜಯೇಂದ್ರ ಅವರಿಗೆ ಹೇಳಿದರು. ಚರ್ಚೆಯ ನಂತರ ಮಠದ ದಾಸೋಹ ಮಂಟಪದಲ್ಲಿ ಭಕ್ತರಂತೆ ಸರಳವಾಗಿ ಪ್ರಸಾದವನ್ನು ವಿಜೇಯಂದ್ರೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು, ಉಣ್ಣೆ ಮತ್ತು ಕುರಿ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳಿಕೇರಿ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್,ಅಮರೇಶ ಕರಡಿ ಇನ್ನಿತರರು ಇದ್ದರು.

Please follow and like us: