ಭೂಮಿ ಕರಾಟೆ ಪೌಂಡಷನ ಕರಾಟೆ ಬೆಲ್ಟ್ ಪರಿಕ್ಷೆ


ನಗರದ ಹುಡ್ಕೋ ಕಾಲೋನಿಯ ಪಾರ್ಕನಲ್ಲಿ ಭೂಮಿ ಕರಾಟೆ ಪೌಂಡಷನರವರು ಟ್ರೇಡಿಷನಲ್ ಶೋಟೋಕಾನ ಕರಾಟೆ ಅಕಾಡೇಮಿ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಕರಾಟೆ ಬೆಲ್ಟ್ ಪರಿಕ್ಷೆ ಹಮ್ಮಿಕೊಳ್ಳಲಾಗಿತ್ತು.
ಈ ಪರೀಕ್ಷೆಯಲ್ಲಿ ೧೮ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಲ್ಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಬೆಲ್ಟ್ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ, ಸಂಸ್ಥೆಯ ಮುಖ್ಯಸ್ಥ ಮೌನೇಶ ಎಸ್ ವಡ್ಡಟ್ಟಿ ಕಾಲೋನಿಯಲ್ಲಿ ಸುಮಾರು ೬ತಿಂಗಳಿಂದ ಕರಾಟೆ ತರಬೆತಿಯನ್ನು ಪ್ರಾರಂಭಿಸಿದ್ದು, ನಮಗೆ ಖುಷಿ ತಂದಿದೆ ಏಕೆಂದರೆ ನಗರದಲ್ಲಿ ಬೇರೆ ಬೇರೆ ಸುಮಾರು ಕಾಲೋನಿಗಳಿದ್ದು ಪಾಲಕರು ತಮ್ಮ ಮಕ್ಕಳನ್ನು ಕರಾಟೆ ಕ್ರೀಡೆಗಳಂತಹ ಅನೇಕ ಚಟುವಟಿಕೆಗಳಿಗೆ ಮಕ್ಕಳು ಭಾಗವಹಿಸದಂತೆ ಓದಿನಲ್ಲಿಯೇ ಮಕ್ಕಳು ಕಾಲ ಕಳೆಯಬೇಕಾಗಿದೆ. ಹಿಂದಿನ ದಿನಗಳಲ್ಲಿ ಓದು ಬರಹದ ಜೊತೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವವನ್ನು ಪಾಲಕರು ನೀಡಬೇಕೆಂದು ಮನವಿ ಮಾಡಿದರು.
ಇತ್ತೀಚಿನ ದಿನಗಲ್ಲಿ ಕೋರೋನಾದಂತಹ ಹಲವಾರು ರೋಗಗಳು ಬರುತ್ತಿದ್ದು, ಇಂತಹ ರೋಗಗಳನ್ನು ಎದುರಿಸಲು ಮಕ್ಕಳಿಗೆ ಹಾಗೂ ಎಲ್ಲರಿಗೂ ಕರಾಟೆ, ಯೋಗ, ಅನೇಕ ಕ್ರೀಡೆಗಳಾದಂತಹ ದೈಹಿಕ ಚಟುವಟಿಕೆ ಅತೀ ಅವಶ್ಯವಿದ್ದು, ಮಕ್ಕಳು ಭಾಗವಹಿಸಿದರೆ ಅವರ ಆರೋಗ್ಯ ದೇಹದ ಅಂಗಾಗಳು ಗಟ್ಟಿಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಓದಿನಲ್ಲೂ ಹೆಚ್ಚಿನ ಆಸಕ್ತಿಯನ್ನು ವಹಿಸುವರು. ದಯವಿಟ್ಟು ನಗರ ಹಾಗೂ ಹಳ್ಳಿಗಳಲ್ಲಿ ವಾಸಿಸುವ ಪಾಲಕರು ತಮ್ಮ ಮಕ್ಕಳನ್ನು ಕರಾಟೆ ಕ್ರೀಡೆಗಳ ತರಬೇತಿಯನ್ನು ಪಡೆದುಕೊಳ್ಳಲು ಸಲಹೆ ನಿಡಿದರು.ನಂತರ ಬಳ್ಳಾರಿಯಿಂದ ಪರೀಕ್ಷರಾಗಿ ಆಗಮಿಸಿದ ಕಟ್ಟೆಸ್ವಾಮಿ ಮಾತನಾಡಿ, ಕರಾಟೆ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಿ ಸರಕಾದ ವತಿಯಿಂದ ಸರ್ಕಾರ ಏರ್ಪಡಿಸುವ ಸ್ಕೂಲ್ ಗೇಮ್ಸ್ ಫೆಡರೇಷನ್ ಸ್ಪರ್ಧೇಯಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನ ಪಡೆದರೆ ಮಕ್ಕಳಿಗೆ ಸ್ಕಾಲರ್ ಶೀಪ್ ದೊರೆಯುವುದು ಮುಂದೆ ಸರ್ಕಾರಿ ನೌಕರಿ ಪಡೆಯುವ ಸಂದರ್ಭದಲ್ಲಿ ಸ್ಪೋಟ್ಸ್ ಕೋಟಾದಡಿ ನೌಕರಿಯನ್ನು ಪಡೆಯಲು ಅನುಕೂಲವಾಗುವುದು ಎಂದು ಹೇಳಿದರು.
ನಂತರ ಚಲನಚಿತ್ರ ನೀರ್ದೇಶಕರಾದ ಬಸವರಾಜ ಕೊಪ್ಪಳ ಮಾತನಾಡಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳು ಕಿನ್ನತೆಗೆ ಒಳಗಾಗುತ್ತಿದ್ದು, ಇಂತಹ ಕರಾಟೆಯ ಅಭ್ಯಾಸ ಮಾಡುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುವುದು ಆದುದರಿಂದ ಪ್ರತಿಯೊಂದು ಮನೆಯ ಹೆಣ್ಣು ಮಕ್ಕಳು ಕರಾಟೆ ಕಲಿಯಬೇಕಾಗಿದೆ ಎಂದು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಹುಡ್ಕೋ ಕಾಲೋನಿಯ ಮುಖಂಡರಾದ ಚಂಪಲಾಲಜೀ, ಮಾರುತಿ, ಅಮರೇಶ ಮುರಳಿ, ಮಹೇಶ, ಬಸವರಾಜ, ಶರಣಬಸವರಾಜ ಗದಗ, ಪರೀಕ್ಷಕರಾದ ಕಟ್ಟೇಸ್ವಾಮಿ, ಸುಭಾಸ, ಜಡೇಶ, ದೇವಪ್ಪ ಕಲ್ಲನವರ, ವಿಠ್ಠಲ್ ಹೆಚ್, ಅಶೋಕ ನರಗುಂದ, ಉಪಸ್ಥಿತರಿದ್ದರು.
ಬೆಲ್ಟ್ ಪರೀಕ್ಷೆಯಲ್ಲಿ ಪಾಲ್ಗೊಂಡಂತಹ ವಿದ್ಯಾರ್ಥಿಗಳಾದ ವಿವೇಕ, ವಿಶ್ರೂತ್, ಜಯದೀಪ್‌ಗುರು, ನಮೀತ್‌ಮುರಳಿ, ಕರಣ್‌ಜೈನ್, ತನ್ಮಯಿ, ಕ್ರೀತಿಕಾ ಗದಗ, ಸಂಜೀತ್ ಎಂ, ವಿವೇಕಾನಂದಗೌಡ, ರಂಗನಾಥ, ಶಕ್ತಿವರ್ಧನ, ಸುಹಾನಿ ಶರ್ಮ, ತೇಜವೀರ ಶರ್ಮಾ, ವೇದಕನಯ್ಯ ಶರ್ಮ, ಮನನ ಮುರಳಿ, ಅಭಿನವ, ಪ್ರತೀಕ್ಷಾ, ರೇಣುಕಾ ಕಲ್ಲಣ್ಣನವರ ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

Please follow and like us: