ನಿಜವಾದ ಪತ್ರಕರ್ತನ ಸ್ಥಿತಿ ಕರುಣಾಜನಕವಾಗಿದೆ : ಗವಿಶ್ರೀ

Kannadanet Suddi ನಿಜವಾದ, ನೈತಿಕತೆ ಮತ್ತು ಬದ್ಧತೆ ಇರುವ ಪತ್ರಕರ್ತನ ಪರಿಸ್ಥಿತಿ ಕರುಣಾಜನಕವಾಗಿದೆ ಎಂದು ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.


ಅವರು ನಗರದ ಗವಿಮಠದ ಆವರಣದಲ್ಲಿ ಶ್ರೀಧರ್ ಮಾನವಿ ಅವರು ಬರೆದು, ಅಭಿನಯಿಸಿ, ಚಿತ್ರೀಕರಿಸಿದ ಪತ್ರಕರ್ತರು ಮತ್ತು ಭ್ರಷ್ಟಾಚಾರಿಗಳು ಕಿರು ಚಿತ್ರವನ್ನು ಬಿಡುಗಡೆಗೊಳಿಸಿ, ಅದನ್ನು ವೀಕ್ಷಿಸಿ ಒಳ್ಳೆಯ ಸಂದೇಶವನ್ನು ನೈಜವಾಗಿ ಪ್ರತಿಬಿಂಬಿಸಿದ್ದಾರೆ, ಶ್ರೀಧರ್ ಶ್ರಮ ಸಮಾಜಕ್ಕೆ ಉಪಯುಕ್ತ, ಇಂತಹ ಕೆಲಸಕ್ಕೆ ಬೆಂಬಲವಾಗಿ ನಿಂತವರೆಲ್ಲರೂ ಅಭಿನಂದನಾರ್ಹ ಎಂದ ಸ್ವಾಮೀಜಿ. ಪತ್ರಕರ್ತರಿಗೆ ಸಮಾಜ ಮತ್ತು ಸರಕಾರ ಆಸರೆಯಾಗಬೇಕು ಎಂದರು.ಈ ವೇಳೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಇಂದಿನ ದೃಶ್ಯ ಮಾಧ್ಯಮಗಳ ಅಬ್ಬರದಲ್ಲಿ ಅಕ್ಷರಕ್ಕೆ ಬೆಲೆ ಕಡಿಮೆ ಆಗುತ್ತಿದೆ ಎಂಬ ಆತಂಕವಿದೆ, ಜನರು ಸಹ ಸಾವಧಾನವಾಗಿ ಯೋಚಿಸುವ ಮನಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ, ಕಿರು ಚಿತ್ರ ಎನ್ನುವದು ಈಗ ಸಾಮಾಜಿಕ ಚಿಂತನೆಯ ಭಾಗವಾಗಿದೆ ಎಂದು ಅವರು ಹೇಳಿದರು.
ಕಿರು ಚಿತ್ರದ ನಿರ್ದೇಶಕ, ನಟ ಶ್ರೀಧರ್ ಮಾನವಿ, ಹೊಸಳ್ಳಿ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಖಾಜಾ ಹುಸೇನನ ದೊಡ್ಡಮನಿ, ಅಮ್ಮ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಸದ್ದಾಂ ಹುಸೇನ್ ಕಳ್ಳಿಮನಿ, ಮುಖಂಡರಾದ ಶರಣಪ್ಪ ಸಜ್ಜನ್, ಅಬ್ದುಲ್ ವಾಹೀದ್ ಇತರರು ಇದ್ದರು.

Please follow and like us:
error