ಹಕ್ಕಬುಕ್ಕರು ಸ್ಥಾಪಿಸಿದ ಮೈಸೂರು ದಸರಾ ಹಾಲುಮತ ಮಹಾಸಭಾದಿಂದ ಸಂಸ್ಥಾಪನಾ ದಿನಾಚರಣೆ

ಕೊಪ್ಪಳ: :- ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು, ಹಾಲುಮತ ಸಮಾಜದ ಹಕ್ಕ ಬುಕ್ಕರು ಪ್ರಥಮವಾಗಿ ಮೈಸೂರು ದಸರಾವನ್ನು  ಪ್ರಾರಂಭಮಾಡಿದ್ದು ಅದನ್ನು  ಯದುವಂಶದವರು ಮುಂದುವರೆಸುತ್ತಿದ್ದಾರೆ ಎಂದು ಕೊಪ್ಪಳ ನಗರದ  ಮಹಾಸಭಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸಭೆಯ ಅಧ್ಯಕ್ಷತೆವಹಿಸಿದ್ದ ಹಾಲುಮತ ಮಹಾಸಭಾದ ಜಿಲ್ಲಾಅಧ್ಯಕ್ಷ ಹನುಮಂತಪ್ಪ ಎಮ್ ಕೌದಿ ಯವರು ಹಕ್ಕ ಬುಕ್ಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಸ್ಮರಿಸಿದರು.

ಅಂದು ಹಕ್ಕ ಬುಕ್ಕರು ಪ್ರಾರಂಭಿಸಿದ ಮೈಸೂರು ದಸರಾ ಇಂದು ವಿಶ್ವವಿಖ್ಯಾತಿ ಪಡೆದು ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ .ಈ ಸಂದರ್ಭದಲ್ಲಿ ಹಾಲುಮತದ ಹಕ್ಕ ಬುಕ್ಕಬುಕ್ಕರನ್ನು ಸ್ಮರಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ ಮತ್ತು ಪ್ರತಿವರ್ಷ ಎಲ್ಲ ತಾಲೂಕು ಮತ್ತು ಗ್ರಾಮ ಘಟಕದಲ್ಲಿ ದಸರಾ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲು ಭಾಗವಹಿಸಿದ ಎಲ್ಲಾ ಪದಾಧಿಕಾರಿಗಳು ಹಕ್ಕಬುಕ್ಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಮಾಡಿದರು.

ಈ ಸಭೆಯಲ್ಲಿ ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ, ಮಹಾಸಾಭಾದ ಜಿಲ್ಲಾ ಕಾರ್ಯಧ್ಯಕ್ಷ  ಗ್ಯಾನಪ್ಪ ತಳಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುದ್ದಪ್ಪ ಬೇವಿನಳ್ಳಿ, ಜಿಲ್ಲಾ ಉಪಾಧ್ಯಕ್ಷ ಕುಬೇರ್ ಮಜ್ಜಿಗಿ, ಜಿಲ್ಲಾ ಸಂಚಾಲಕರಾದ ಲಿಂಗರಾಜ್ ಚಳಗೇರಿ ಅಗಳಕೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಗುರಿಕಾರ ಲೇಬಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಪ್ಪ ಚೌಡ್ಕಿ ಲಾಚನಕೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಜಡಿಯಪ್ಪ ಬಂಗಾಳಿ, ನಿಂಗರಾಜ್ ಮೂಗಿನ್, ಕರಿಯಪ್ಪ ಬೂದಗುಂಪಾ ಮತ್ತಿತರರು ಇದ್ದರು…

Please follow and like us: