ಕನ್ನಡನೆಟ್ ಸುದ್ದಿ : ತಮ್ಮ ಕಂಚಿನ ಕಂಠದಿಂದ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದ , ಚಿಂತನೆ, ಬರಹಗಳಿಂದ ಇಡೀ ನಾಡಿನಾದ್ಯಂತ ಖ್ಯಾತರಾಗಿದ್ದ ಜಿ.ಕೆ.ಗೋವಿಂದರಾವ್ ನಿಧನರಾಗಿದ್ದಾರೆ. ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ಕೊನೆಯುಸಿರೆಳೆದ ಗೋವಿಂದರಾವ್ ರವರಿಗೆ 86 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು
ಪ್ರೊ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.
ಹಿರಿಯ ಲೇಖಕ,
ಚಿಂತಕ, ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.ನನ್ನ ಹಿತೈಷಿ,
ಮಾರ್ಗದರ್ಶಕ ಮತ್ತು
ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು.ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/d3RDgJqyll
— Siddaramaiah (@siddaramaiah) October 15, 2021
ವಯಸ್ಸು,ಅನಾರೋಗ್ಯದಿಂದ ದೇಹ ಬಳಲಿದ್ದರೂ ಆಗಾಗ ತಮ್ಮ ಕಂಚಿನ ಕಂಠದಿಂದ ನಮ್ಮನ್ನೆಲ್ಲ ಬಡಿದೆಚ್ಚರಿಸುತ್ತಿದ್ದ, ಕೊನೆ ಉಸಿರಿನ ವರೆಗೆ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳದೆ ನೇರ-ನಿಷ್ಠುರ ಮಾತು, ಬರಹಗಳ ಮೂಲಕ ನಾಡಿನ ನಿಜವಾದ ಸಾಕ್ಷಿಪ್ರಜ್ಞೆಯಂತಿದ್ದ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ.
ಹಳೆಮರಗಳು ಉರುಳಿ ಬೀಳಲಿವೆ ಎನ್ನುವುದು ಅವರಿಗೆ ಗೊತ್ತಿತ್ತು, ಇದಕ್ಕಾಗಿಯೇ ಹೊಸ ಚಿಗುರು ಹುಟ್ಟಿಸುವ ಸತತ ಪ್ರಯತ್ನದಲ್ಲಿದ್ದರು.
ಅವರ ನಿರೀಕ್ಷೆಯ ಹೊಸ ಕಾಲವನ್ನು ಕಾಣಲಾಗದೆ ಅಗಲಿ ಹೋದರು.
ಈ ನಿರ್ವಾತ ಬಹಳ ದಿನ ನಮ್ಮನ್ನು ಕಾಡಲಿದೆ.
ಹಿರಿಯ ಜೀವಕ್ಕೆ ಒಂದು ನಮಸ್ಕಾರ, ಇನ್ನೊಂದು Sorry.
(ಹುಬ್ಬಳ್ಳಿಯ ಮಗಳ ಮನೆಯಲ್ಲಿ ಜಿಕೆಜಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಅಲ್ಲಿಯೇ ನಡೆಯಬಹುದು)-ದಿನೇಶ್ ಅಮೀನಮಟ್ಟು