ಶ್ರೀಮತಿ ಅನಸೂಯ ಜಹಗೀರದಾರರ ಕವನಸಂಕಲನಗಳ ಲೋಕಾರ್ಪಣೆ


ಕನ್ನಡನೆಟ್ ಸುದ್ದಿ : ಗುರು ಪ್ರಕಾಶನ ಕೋಟೆ ಕೊಪ್ಪಳ,*ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) , ಬೆಂಗಳೂರು ಜಿಲ್ಲಾ ಘಟಕ ಕೊಪ್ಪಳ, ಕನ್ನಡ ಚಂಪೂ ಬಳಗ ಕೊಪ್ಪಳ ಇವರ ವತಿಯಿಂದ ದಿ. 16ರಂದು ಕೊಪ್ಪಳದ ಕವಯತ್ರಿ ಶ್ರೀಮತಿ ಅನಸೂಯ ಜಹಗೀರದಾರ ಅವರ ಆತ್ಮಾನುಸಂಧಾನ (ಗಜಲ್) ,ನೀಹಾರಿಕೆ (ಹನಿಗವಿತೆ) ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಪ್ಪಳದ ಶ್ರೀ ರಾಘವೇಂದ್ರಸ್ವಾಮಿಗಳವರ ಕಲ್ಯಾಣ ಮಂಟಪ ಸ್ಟೇಷನ್ ರಸ್ತೆಯಲ್ಲಿ ದಿ16-10-2021. ಬೆಳಿಗ್ಗೆ:10:30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎಮ್.ಬಡಿಗೇರ.ಭಾಗ್ಯನಗರ. ಕೊಪ್ಪಳ, ಉದ್ಘಾಟನೆಯನ್ನು ಡಾ.ಹೇಮಾ ಪಟ್ಟಣಶೆಟ್ಟಿ.ಧಾರವಾಡ. ಆತ್ಮಾನುಸಂಧಾನ : ಅಲ್ಲಾಗಿರಿರಾಜ ಕನಕಗಿರಿ. ಮತ್ತು ನೀಹಾರಿಕೆ : ಡಾ. ಸಿ.ಬಿ.ಚಿಲ್ಕರಾಗಿ.ಸಿಂಧನೂರು. ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಪುಸ್ತಕಕದ ಕುರಿತು ಆತ್ಮಾನುಸಂಧಾನ ಡಾ. ದಸ್ತಗೀರಸಾಬ ದಿನ್ನಿ.ರಾಯಚೂರ ,ನೀಹಾರಿಕೆ ಪವನಕುಮಾರ ಗುಂಡೂರು.ಗಂಗಾವತಿ ಮಾತನಾಡುತ್ತಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಂತಾದೇವಿ ಹಿರೇಮಠ.ಕೊಪ್ಪಳ ಭಾಗವಹಿಸಲಿದ್ದಾರೆ. ಎಲ್ಲ ಕನ್ನಡ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅನಸೂಯ ಜಹಗೀರದಾರ ಕೋರಿದ್ದಾರೆ.

Please follow and like us:
error