ಕಲ್ಲು ಗಣಿಗಾರಿಕೆಗೆ ರೈತ ಸಂಘ ಆಕ್ಷೇಪ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ. ಪರಿಶೀಲನೆ

Kannadanet ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಸರ್ವೇ ನಂಬರ್ 51 ರಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಕೆಲವರು ಪರವಾನಿಗೆ ಕೆಳಿದ್ದರು ಆದರೆ ಸದರಿ ಸ್ಥಳವು ಪ್ರಸಿದ್ಧ ಐತಿಹಾಸಿಕ ಸ್ಥಳ ಆಗಿರುವುದರಿಂದ ಅಲ್ಲಿ ಯಾವುದೆ ಕಾರಣಕ್ಕೂ ಗಣಿಗಾರಿಕೆ ನಡೆಸಲು ಯಾವುದೆ ಪರವಾನಿಗೆ ಕೊಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಅಧ್ಯಕ್ಷ ಶ್ರೀನಿವಾಸನ ಭೋವಿ ನೇತೃತ್ವದಲ್ಲಿ ಜಿಲ್ಲಾ ಅಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರಿಗೆ ತಕರಾರು ನೀಡಿದ್ದರು.ದೂರಿನಲ್ಲಿ ಒಂದು ವೇಳೆ ಗಣಿಗಾರಿಕೆ ಪ್ರಾರಂಭವಾದರೆ ಇರುವ ಐತಿಹಾಸಿಕ ಸ್ಥಳವು ನಶಿಸಿ ಹೋಗುತ್ತದೆ. ಪರವಾನಿಗೆ ಕೊರಿರುವ ಸ್ಥಳದ ಅಕ್ಕಪಕ್ಕದಲ್ಲಿ ರೈತರ ಕೃಷಿ ಜಮೀನುಗಳಿದ್ದು. ರೈತರಿಗೆ ತುಂಬಾ ತೊಂದರೆಯಾಗುತ್ತದೆಂದು ಹೇಳಿದ್ದರು.


ಸ್ಥಳಕ್ಕೆ ಕೊಪ್ಪಳ ತಹಸಿಲ್ದಾರ್ ಅಮರೇಶ ಬಿರಾದಾರ ಬಂದು ಅಕ್ಕಪಕ್ಕದ ಜಮೀನಿನ ರೈತರ ಜೊತೆ ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿದರು.


ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಮಲ್ಲಿಕಾರ್ಜುನ. ಕಂದಾಯ ನಿರೀಕ್ಷಕ ಮೊಹಿನುದ್ದಿನ್. ಗ್ರಾಮ ಲೆಕ್ಕಾಧಿಕಾರಿ ರಮೇಶ ನಾಯ್ಕ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಪ್ಪಳ ತಾಲೂಕ ಅಧ್ಯಕ್ಷ ಶ್ರೀನಿವಾಸ ಭೋವಿ. ರಾಮಣ್ಣ ಹೊಸೂರ. ನಾಗಲಿಂಗಪ್ಪ ಹೊಸಪೇಟೆ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಬ್ಬಲಗುಡ್ಡ ಗ್ರಾಮ ಘಟಕದ ಅಧ್ಯಕ್ಷ ಸುರೇಶ ಈಳಿಗೆರ. ಕುಮ್ಮಟ ದುರ್ಗ ರಕ್ಷಣ ಸಮಿತಿ ಅಧ್ಯಕ್ಷ ವೆಂಕಟೇಶ ಈಳಿಗೆರ. ಮುಖಂಡ ಮದ್ದಾನೆಪ್ಪ ಕಬ್ಬೆರ ಮುಂತಾದವರು ಉಪಸ್ಥಿತರಿದ್ದರು.

Please follow and like us: