ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾಗಿ ಚಂದ್ರಕಾಂತ ಸಿಂಗೆ ಆಯ್ಕೆ


ವಿಜಯಪುರ :
ಸುರೇಶ ಮಣ್ಣೂರ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ನಾಗವಾರ ಬಣ) ಜಿಲ್ಲಾ ಸಂಚಾಲಕ ಸ್ಥಾನಕ್ಕೆ ಸಿಂದಗಿ ತಾಲೂಕು ಸಂಚಾಲಕರಾಗಿದ್ದ ಚಂದ್ರಕಾAತ ಸಿಂಗೆ ಅವರನ್ನು ಆಯ್ಕೆ ಮಾಡಲಾಗಿದ್ದು, ಇದರ ಜೊತೆಗೆ ಜಿಲ್ಲಾ ಸಮಿತಿಯನ್ನು ಪುನರ‍್ರಚನೆ ಮಾಡಲಾಗಿದೆ.
ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ರಾಜ್ಯ ಸಂಚಾಲಕರಾದ ಲಕ್ಷಿö್ಮನಾರಾಯಣ ನಾಗವಾರ ಅವರು ಮುಖಂಡರ ಅಭಿಪ್ರಾಯದಂತೆ ಚಂದ್ರಕಾಂತ ಸಿಂಗೆ ಅವರನ್ನು ಜಿಲ್ಲಾ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ಈ ಹಿಂದೆ ಜಿಲ್ಲಾ ಸಂಘಟನಾ ಸಂಚಾಲಕರಾಗಿದ್ದ ರಾವುತ ತಳಕೇರಿ ಮತ್ತು ದೇವೇಂದ್ರ ಹಾದಿಮನಿ ಅವರನ್ನು ಬೆಳಗಾವಿ ವಿಭಾಗೀಯ ಸಂಘಟನಾ ಸಂಚಾಲಕರಾಗಿ ಭಡ್ತಿ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕರಾಗಿ ಗುರು ಗುಡಿಮನಿ, ಹುಯೋಗಿ ತಳ್ಳೊಳ್ಳಿ, ಚೆನ್ನು ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಗಿದ್ದು, ಸಂತೋಷ ತಳಕೇರಿ ಅವರು ಜಿಲ್ಲಾ ಖಜಾಂಚಿ ಹಾಗೂ ಕರ‍್ಯಕಾರಿ ಸದಸ್ಯರಾಗಿ ಈಶ್ವರ ಚಲವಾದಿ, ಈಶ್ವರ ಬಡಿಗೇರ ಅವರು ಆಯ್ಕೆಯಾಗಿದ್ದಾರೆ. ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ನಾಗೇಶ ಕಟ್ಟಿಮನಿ ಅವರು ಪುನರಾಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಲಕ್ಷಿö್ಮನಾರಾಯಣ ನಾಗವಾರ ಅವರು, ಉಳಿದಂತೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತಾಲೂಕುಗಳಿಗೂ ಶೀಘ್ರವೇ ಪದಾಧಿಕಾರಿಗಳನ್ನು ನೇಮಕ ಮಾಡಿ ಸಂಘಟನೆಯನ್ನು ಬಲಗೊಳಿಸಬೇಕೆಂದು ಸೂಚಿಸಿದರಲ್ಲದೆ, ತಮ್ಮ ಸಂಘಟನೆಯು ನೈತಿಕ ತಳಹದಿಯ ಮೇಲೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಮುಂದುವರೆಸಿಕೊAಡು ಬರುತ್ತಿದ್ದು, ಪ್ರಜಾಸತ್ತಾತ್ಮಕವಾಗಿ ದಲಿತರು ಮಾತ್ರವಲ್ಲ, ಎಲ್ಲ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸುವತ್ತ ಹೋರಾಟ ಮಾಡುತ್ತಿದೆ. ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಯಾವುದೇ ವಿವಾದಗಳಿಗೆ ಎಡೆಮಾಡದೆ ಶೋಷಿತ ಸಮುದಾಯಗಳಿಗೆ ನ್ಯಾಯಸಮ್ಮತವಾದ ಹಕ್ಕುಗಳನ್ನು ಕೊಡಿಸಲು ಶ್ರಮಿಸಬೇಕು ಎಂದು ಹೇಳಿದರು.
ಮುಖಂಡರಾದ ಎಂ.ಎನ್. ಪಾಟೀಲ್, ಹರೀಶ ನಾಟಿಕಾರ, ರಾವುತ ತಳಕೇರಿ, ದೇವೇಂದ್ರ ಹಾದಿಮನಿ, ಅನಿಲ ಹೊಸಮನಿ ಮತ್ತಿತರರು ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ಸಂಗಮೇಶ ನಾಗರದಿನ್ನಿ, ಮಹೇಶ ಚಲವಾದಿ, ರವಿ ಅಲಹಳ್ಳಿ, ಮಹಾಂತೇಶ ಕಟ್ಟಿಮನಿ, ಚಂದ್ರಶೇಖರ ನಡಗೇರಿ, ಪರಶುರಾಮ ಕೂಡಗಿ, ಕಾಮೇಶ ಬಜಂತ್ರಿ, ಚಂದ್ರಶೇಖರ ನಾಗೂರ, ಶ್ರೀಶೈಲ ಬೂದಿಹಾಳ, ಮಹೇಶ ಜವಳಗಿ, ರವಿ ಸಿಂಗೆ, ಬಸವರಾಜ ತಳಕೇರಿ, ಶಿವಾನಂದ ಇಂಗಳಗಿ, ಶಿವಾನಂದ ಹೊಸಮನಿ, ಮಲ್ಲಿಕಾರ್ಜುನ ಸಿಂಗೆ, ಬಸವರಾಜ ಬಳಗಾನೂರ, ಉಮೇಸ ಹೊಸಮನಿ, ಯಲ್ಲಪ್ಪ ಚಲವಾದಿ, ಪರಶುರಾಮ ಕುಬಕಡ್ಡಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Please follow and like us:
error