ಸೋಮವಾರದಂದು ಭಾರತ್ ಬಂದ್ : ಸ್ವಯಂಪ್ರೇರಿತ ಬಂದ್ ಗೆ ಸಂಘಟನೆಗಳ ಕರೆ


ಕೊಪ್ಪಳ : ಸಂಯುಕ್ತ ಕಿಸಾನ್‌ ಮೋರ್ಚಾ ಸೆಪ್ಟೆಂಬರ್‌ 27 ಕ ಭಾರತ ಬಂದ್‌ಗೆ ಕರೆ ನೀಡಿದೆ. ಅದರನ್ವಯ ಕೊಪ್ಪಳ ಜಿಲ್ಲೆಯಲ್ಲೂ ಸಹ ಬಂದ್ ಗೆ ಕರೆ ನೀಡಲಾಗಿದ್ದು 27ರ ಬೆಳಿಗ್ಗೆ 10.30 ಕೈ ಗಂಚ್‌ ಸರ್ಕಲ್‌, ಸಾಲರ ಜಂಗ್‌ ರಸ್ತೆ, ಗಡಿಯಾರ ಕ೦ಬ ಅಶೋಕ ಸರ್ಕಲ್‌ ಮೂಲಕ ತೆರಳುವ ‘ ಮೆರವಣಿಗೆ ಬಸ್‌ ನಿಲ್ದಾಣದ ಹತ್ತಿರ ಸಮಾವೇಶಗೊಳ್ಳಲಿದೆ. ನಗರದ ಎಲ್ಲಾ ವ್ಯಾಪಾರಸ್ಥರು ಸ್ವಯಂ ಇಚ್ಚೆಯಿಂದ ತಮ್ಮ ವ್ಯಾಪಾರವನ್ನು ಬಂದ್‌ ಮಾಡಬೇಕೆಂದು ಕೋರಲಾಗಿದೆ.
ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸಿರುವ ಹೋರಾಟ 10 ನೇ ತಿಂಗಳಲ್ಲಿ ಮುಂದುವರೆದಿದೆ. 509 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನು ಚಳುವಳಿಗೆ ಸಮರ್ಪಿಸಿಕೊಂಡಿದ್ದಾರೆ. ಆದರೆ ಮೋದಿ ಸರ್ಕಾರ ಅಂಬಾನಿ, ಅದಾನಿ ಕಂಪನಿಗಳ ನಿವ್ಯೆಯನ್ನು ಬಿಟ್ಟುಕೊಡುತ್ತಿಲ್ಲ. ರೈತ ಚಳುವಳಿಗೆ ಅಪಮಾನ ನತ, ಕಳೆದ ಆಗಷ್ಟ್‌ 10 ರಂದು ವಿದ್ಯುತ್‌ ತಿದ್ದುಪಡಿ ಮಸೂ ಯನ್ನು ಅಧಿವೇಶನದಲ್ಲಿ ಮಂಡಿಸಲು ಮುಂದಾಗಿತ್ತು. ದೇಶದಾದ್ಯಂತ ಹೋರಾಟ ತೀವಗೊಂಡ ಕಾರಣ ಸರಕಾರವು ಮಸೂದೆಯನ್ನು ಸಧ್ಯಕ್ಕೆ ಕೈ ಬಿಟ್ಟಿದೆ. ರೈತರ ಒಡೆತನದ ಕೃಷಿ ವ್ಯವಸ್ಥೆಯನ್ನು ಕೊಲ್ಲುವ ಸರ್ಕಾರದ ನೀತಿಯಿ೦ದ ರೈತ ಕುಟುಂಬಗಳು ದಿವಾಳಿ ಅಂಚಿನಲ್ಲಿವೆ. `ಕೃಷಿ ಉತ್ಪನ್ನಗಳಿಗೆ ನ್ಯಾಯಾಯುತ ಬೆಲೆ ಸಿಗದ ಕಾರಣ ಪ್ರತಿ ವರ್ಷ ರೈತರು ನಪ್ಪ ಅನುಭವಿಸುತ್ತಿದ್ದಾರೆ. ಬಡ್ಡಿ ಚಕ್ರಬಡ್ಡಿಗೆ ಬಲಿಯಾಗಿರುವ ರೈತರು ತಮ್ಮ ಭೂಮಿ ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ ಪೆಟ್ರೋಲ್‌,ಡೀಸೆಲ್‌ ಮತ್ತು ಅಡಿಗೆ ಅನಿಲ ಬೆಲೆ ಹೆಚ್ಚಿಸಿದ್ದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ರಾಮೀಣ ಭಾಗದ ಜನರು ಅಡುಗೆ ಅನಿಲ ಸಿಲೆಂಡರ್‌ ಗ್ಯಾಸ್‌, ಮೂಲೆಗೆಸೆದು ಪುನಃ ಕಟ್ಟಿಗೆ ಮೊರೆ ಹೋಗಿದ್ದಾರೆ. ಹಾಗಾಗಿ ಸರ್ಕಾರ ಸಾಮಾನ್ಯ ಜನರನ್ನು ಬಲಿಕೊಟ್ಟು ಅಂಬಾನಿ, ಅದಾನಿ ಕ೦ಪನಿಗಳಿಗೆ’ಲಕ್ಷಾಂತರ ಕೋಟಿ ಲಾಭ ಮಾಡುವ ನೀತಿಯನ್ನು ಕೈ ಬಿಡಬೇಕು. ಮೊಂಡುವಾದವನ್ನು ಮುಂದುವರೆಸಿದರೆ ರೈತರ ಸಾಲು ಸಾಲು ಹೆಣಗಳನ್ನು ನೋಡಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ ಸೆಪ್ಟೆಂಬರ್‌ 27 ಕ ಭಾರತ ಬಂದ್‌ಗೆ ಕರೆ ನೀಡಿದೆ. ಈ ಭಾಗವಾಗಿ ಕೊಪ್ಪಳ ಜಲ್ಲೆಯನ್ನು ಬಂದ್‌ ಮಾಡುವ ಮೂಲಕ ದೆಹಲಿ ರೈತರ ಹೋರಾಟಕ್ಕೆ ಬೆಂಬಲಿಸಬೇಕೆಂದು ನೇತೃತ್ವವನ್ನು ವಹಿಸಿರುವ ರೈತಸಂಘದ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ, ಹೋರಾಟಗಾರರಾದ ಅಲ್ಲಮಪ್ರಬು ಬೆಟ್ಟದೂರು, ಎಐಕೆಕೆಎಸ್ ನ ಡಿ.ಎಚ್.ಪೂಜಾರ್, ಸಿಪಿಐ, ಬಸವರಾಜ್ ಶೀಲವಂತರ, ತಿಪ್ಪಯ್ಯ ಹಿರೇಮಠ , ಭೀಮಸೇನ ಕಲಕೇರಿ, ಸೂಕಿ, ಎಐಟಿಯುಸಿ, ಆಮ್ ಆದ್ಮಿ ಪಾರ್ಟಿ, ಹಲವಾರು ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳವರು ಸೇರಿದಂತೆ ಇನ್ನಿತರ ಸಂಘಟನೆಗಳವರು ವಿನಂತಿಸಿಕೊಂಡಿದ್ದಾರೆ. ಬೆಳಿಗ್ಗೆ 10.30 ಕೈ ಗಂಚ್‌ ಸರ್ಕಲ್‌, ಸಾಲರ ಜಂಗ್‌ ರಸ್ತೆ, ಗಡಿಯಾರ ಕ೦ಬ ಅಶೋಕ ಸರ್ಕಲ್‌ ಮೂಲಕ ತೆರಳುವ ‘ ಮೆರವಣಿಗೆ ಬಸ್‌ ನಿಲ್ದಾಣದ ಹತ್ತಿರ ಸಮಾವೇಶಗೊಳ್ಳಲಿದೆ. ನಗರದ ಎಲ್ಲಾ ವ್ಯಾಪಾರಸ್ಥರು ಸ್ವಯಂ ಇಚ್ಚೆಯಿಂದ ತಮ್ಮ ವ್ಯಾಪಾರವನ್ನು ಬಂದ್‌ ಮಾಡಬೇಕೆಂದು ಕೋರಲಾಗಿದೆ.
ಹಕ್ಕೊತ್ತಾಯಗಳು
* ಎಂ.ಎಸ್‌.ಸ್ವಾಮಿನಾಥನ್‌ ದರದಿಯ ಮಾನದಂಡದ ಪ್ರಕಾರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು ಮತ್ತು ಭತ್ತ, ಹತ್ತಿ, ತೊಗರೆ, ಸಜ್ಟೆ,ಮೆಕ್ಕೆ ಜೋಳ ಆತರೆ ಕೃಷಿ ಉತ್ಪನ್ನಗಳು ಕಟಾವಿಗೆ ಬರುವ ಒಂದು ತಿಂಗಳು ಮುಂಚಿತವಾಗಿ ಸರ್ಕಾರವು ಖರೀದಿ ಕೇಂದ್ರಗಳನ್ನು ತೆರೆಯಬೇಕು.
* ಸರ್ಕಾರ ನಿಗದಿ ಮಾಡಿದ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಖಾಸಗಿ ವರ್ತಕರು ಮತ್ತು ದಲ್ಲಾಳಿಗಳು, ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
* ದೇಶಕ್ಕೆ ಮಾರಕವಾಗಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಾಸ್‌ ಪಡೆಯಬೇಕು ‘
* ಎಂ.ಎಸ್‌.ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸಬೇಕು
* ಉದ್ದೇಶಿತ ವಿದ್ಯುತ್‌ ತಿದ್ದುಪಡಿ ಮಸೂದೆಯನ್ನು ಕೈ ಬಿಡಬೇಕು
* ಪ್ರತಿದಿನ ಮೂರು ಫೇಸ್‌ ವಿದ್ಯುತ್‌ ಸರಬರಾಜು ಮಾಡಬೇಕು. |
* ಪೆಟ್ರೋಲ್‌ ಡೀಸೆಲ್‌, ಅಡುಗೆ ಆಗಿಲ ದುತ್ತು ಇತರೆ ಆಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಬೇಕು

Please follow and like us:
error