ಭಾರತ್ ಬಂದ್‌ಗೆ ಅಖಿಲ ಭಾರತ ವಕೀಲರ ಒಕ್ಕೂಟ ( AILU ) ದ ಸಂಪೂರ್ಣ ಬೆಂಬಲ

ಕನ್ನಡನೆಟ್ ನ್ಯೂಸ್ :

ದಿ. 27-09-2021ರ ಭಾರತ್ ಬಂದ್‌ಗೆ ಅಖಿಲ ಭಾರತ ವಕೀಲರ ಒಕ್ಕೂಟ ( AILU ) ದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ರೈತ ಸಮುದಾಯಕ್ಕೆ ಮಾರಕವಾಗಿರುವ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಪೂರಕವಾಗಿರುವೆ ಕೃಷಿ ಕಾನೂನುಗಳನ್ನು ಜಾರಿ ಮಾಡುತ್ತಿರುವ ಸರ್ಕಾರದ ರೈತ ವಿರೋದಿ ಕಾನೂನುಗಳನ್ನು ವಿರೋಧಿಸಿ ದೇಶದ ರೈತಾಪಿ ಸಮುದಾಯವು ಕಳೆದ ಹತ್ತು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿರುವುದು ಸರಿಯಷ್ಟೆ ಆದರೆ ಸರ್ಕಾರ ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದೇ ತನ್ನ ರೈತ ವಿರೋಧಿ ನಿಲುವನ್ನು ಮುಂದುವರಿಸುತ್ತಿರುವುದು ದುರಾದೃಷ್ಟಕರವಾದುದಾಗಿರುತ್ತದೆ . ಸರ್ಕಾರದ ಈ ರೈತ ವಿರೋದಿ ಕಾನೂನುಗಳನ್ನು ಹಾಗೂ ರೈತವಿರೋಧಿ ನಿಲುವನ್ನು ಪ್ರತಿಭಟಿಸಿ ರೈತರ ಪರವಾಗಿರುವ ರೈತ ಸಂಘಟನೆಗಳು ದಿ 27-09-2021ರಂದು ದೇಶವ್ಯಾಪಿ ಭಾರತ್ ಬಂದ್‌ಗೆ ಕರೆ ನೀಡಿದ್ದು , ಅಖಿಲ ಭಾತರ ವಕೀಲರ ಒಕ್ಕೂಟವು ರೈತರ ಭಾರತ್ ಬಂದ್‌ಅನ್ನು ಸಂಪೂರ್ಣವಾಗಿ ಬೆಂಬಲಿಸಿ ದಿನಾಂಕ 27 09-2021ರ ಬಂದ್ ನಲ್ಲಿ ಸಕ್ರೀಯವಾಗಿ ಭಾಗವಹಿಸುತ್ತದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಎಐಎಲ್ ಯು ರಾಜ್ಯ ಸಮಿತಿ ಅಧ್ಯಕ್ಷರಾದ

ಎಸ್ . ಶಂಕರಪ್ಪ , ಶ್ರೀನಿವಾಸ್ ಕುಮಾರ್ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error