ಮಾಧ್ಯಮ ಯಾವತ್ತೂ ನಿರ್ಲಿಪ್ತ ಅಲ್ಲ ಅದರಲ್ಲಿ ಅವರ ದೃಷ್ಟಿಕೋನ ಇದೆ- ರಹಮತ್ ತರಿಕೇರಿ

ಹಂಪಿ : ಸಾಂಸ್ಕೃತಿಕ ವರದಿಗಾರಿಕೆ ಮಾಡುವ ಪತ್ರಕರ್ತರೇ ಇಲ್ಲದಂತಹ ಪರಿಸ್ಥಿತಿ ಇದೆ ಇದು ಬದಲಾಗಬೇಕಿದೆ ಮುಖ್ಯ ವಾಹಿನಿಗಳು ನಿರಾಕರಿಸಿದ ಸುದ್ದಿಯನ್ನು ಮಾಡಬೇಕು. ಇದು ನಿಜವಾದ ಪತ್ರಕರ್ತ ಮಾಡಬೇಕಾದ ಕೆಲಸ ಎಂದು ಹಂಪಿ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ರಹಮತ್ ತರಿಕೇರಿಯವರು ಹೇಳಿದರು. ಅವರು ಹಂಪಿ ವಿಶ್ವವಿದ್ಯಾಲಯ ಯದ ಸಭಾ ಮಂಟಪದಲ್ಲಿ ನಡೆದ ದೂರ ಶಿಕ್ಷಣ ವಿಭಾಗದ ಸಂಪರ್ಕ ತರಗತಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೂರ ಶಿಕ್ಷಣದಲ್ಲಿ ದೂರ ಎನ್ನುವ ಶಬ್ದ ಯಾವತ್ತೂ ಕಾಡುತ್ತದೆ. ಇದು ಎಲ್ಲರಿಗೂ ಶಿಕ್ಷಣ ಒದಗಿಸಲಾದ ವ್ಯವಸ್ಥೆಯ ವೈಪಲ್ಯವನ್ನು ತೋರಿಸುತ್ತದೆ. ವಿಶ್ವವಿದ್ಯಾಲಯ ಯ ಈ ಕಾರ್ಯಕ್ರಮ ಶಿಕ್ಷದಿಂದ ದೂರದಲ್ಲಿರುವರನ್ನು ಹತ್ತಿರ ತರುವ ಕೆಲಸ ಮಾಡುತ್ತದೆ. ಪತ್ರಿಕೋಧ್ಯಮದಲ್ಲಿ ಪೋಟೋಗೆ ಸಹ ಭಾಷೆ ಇದೆ. ಅರ್ಥ ಇದೆ. ಪೋಟೊ ಮತ್ತು ಪೇಂಟಿಂಗ್ಸ್ ಗಳ ಮೇಲೆ ಹೆಚ್ಚಿನ ಕೆಲಸವಾಗಿಲ್ಲ. ಪೋಟೋ ಭಾಷೆಯಾದಂತೆ ನಮ್ಮ ದೇಹಕ್ಕೂ ಒಂದು ಭಾಷೆ ಇದೆ. ಅದು ಕೇವಲ ಮಾತು ಮತ್ತು ಅಕ್ಷರಗಳಲ್ಲಿ ಬರುವುದಿಲ್ಲ .ಎಲ್ಲರೂ ತಮ್ಮ ಆಕರಗಳನ್ನು, ಭಾಷೆಯನ್ನು ಗಮನಿಸಬೇಕು. ಶಿಕ್ಷಣದಿಂದ ಜನಸಾಮಾನ್ಯರನ್ನು ದೂರ ಮಾಡುವ ನಾನಾ ವ್ಯವಸ್ಥೆ ಗಳಿವೆ. ನ್ಯಾಯಬದ್ದವಾಗಿ ಸಿಗಬೇಕಾದ ಶಿಕ್ಷಣ ಸಿಕ್ಕಿಲ್ಲ ಇದು ಸಾಧ್ಯವಾದರೆ ದೂರ ಶಿಕ್ಷಣ ಬೇಕಿಲ್ಲ. ವೃದ್ದಾಶ್ರಮಗಳು, ಅನಾಥಾಶ್ರಮಗಳು ನಮ್ಮ ಸಮಾಜದಲ್ಲಿರುವ ಕೊರತೆಯನ್ನು ಸೂಚಿಸುತ್ತವೆ. ಒಂದೇ ಒಂದು ಸುದ್ದಿ ಹಲವಾರು ಟೈಟಲ್ ಯಾಕೆ? ಇದು ಆಯಾ ಪತ್ರಿಕೆಗಳ ದೃಷ್ಟಿಕೋನವನ್ನು ಹೇಳುತ್ತದೆ. ಮಾಧ್ಯಮ ಯಾವತ್ತೂ ನಿರ್ಲಿಪ್ತ ಅಲ್ಲ. ಅದರಲ್ಲಿ ದೃಷ್ಟಿಕೋನ ಇದೆ. ಭಾಷೆಯು ದೃಷ್ಟಿಕೋನವನ್ನು ಹೇಳುತ್ತದೆ. ಭಾಷೆ ಮನುಷ್ಯರ ತಲ್ಲಣಗಳನ್ನು ಅರ್ಥ ಮಾಡಿಸುತ್ತೆ. ಅತ್ಯುತ್ತಮ ಸಂವೇದನಾಶೀಲ ಭಾರತೀಯನಾಗಬೇಕು. ಮಾರ್ಕ್ಸ್ ಕಾರ್ಡಗಳಿಂದ ಲೌಕಿಕ ಜೀವನದಲ್ಲಿ ಪ್ರಯೋಜನವಾಗಬಹುದು ಆದರೆ . ನಾವು ಜಗತ್ತಿನ ಎಲ್ಲ ಬೇರೆ ಬೇರೆ ಸಂಗತಿಗಳಿಗೆ ತೆರೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಿ.ಆರ್.ಗೋವಿಂದರಾವ್, ಸಮೀ ಉಲ್ಲಾ ಖಾನ್,ರಮೇಶ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ಎಂಜೆ ಎಂಸಿ ಸ್ನಾತಕೋತ್ತರ ಪದವಿ ಸಂಪರ್ಕ ತರಗತಿಗಳ ಸಂಚಾಲಕರು, ಡಾ.ಬಿ.ಟಿ.ಮುದ್ದೇಶ್, ಹೆಚ್.ಡಿ.ಪ್ರಶಾಂತ ವೇದಿಕೆಯ ಮೇಲಿದ್ದರು. ಪ್ರೋ ಎನ್. ಚಿನ್ನಸ್ವಾಮಿ ಸೋಸಲೆ ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ವಿಶ್ವವಿದ್ಯಾಲಯ ದ ಅದ್ಯಾಪಕರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error