ಅ.1ರ ಒಳಗೆ ಸಿಎಂ ಬೊಮ್ಮಾಯಿ ಮೀಸಲಾತಿ ಘೋಷಿಸದಿದ್ದರೆ ಉಗ್ರಹೋರಾಟ -ಜಯ ಮೃತ್ಯುಂಜಯ ಸ್ವಾಮೀಜಿ

ಅಕ್ಟೋಬರ್ 1 ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಜಯ ಮೃತ್ಯುಂಜಯ ಸ್ವಾಮೀಜಿ

ಕೊಪ್ಪಳ : ಅಕ್ಟೋಬರ್ 1 ರಿಂದ ಸತ್ಯಾಗ್ರಹ ಆರಂಭಕ್ಕೆ ಪಂಚಮಸಾಲಿ ಸಮುದಾಯ ತೀರ್ಮಾನಿಸಿದೆ. ಅದರ ಒಳಗೆ ಸಿಎಂ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಘೋಷಿಸಬೇಕು.ಇಲ್ಲವಾದರೆ ಬೆಂಗಳೂರಿನಲ್ಲೇ ಹೋರಾಟ ಆರಂಭಿಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.‌ ರವಿವಾರದಂದು ಕೊಪ್ಪಳದಲ್ಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಸಮಾವೇಶ ಆರಂಭಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಪಂಚಮಸಾಲಿ ಪೀಠದಿಂದ ಮಾಡಿದ ಪ್ರತಿಭಟನೆಯಿಂದ ಇಡೀ ರಾಜ್ಯದ ‌ಪಂಚಮಸಾಲಿ ಸಮುದಾಯ ಒಂದಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ‌ಪ್ರತಿಭಟನೆ ಮಾಡಲಾಗಿತ್ತು.
ಈ ವೇಳೆ ಆಗಿನ ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ 6 ತಿಂಗಳ ಸಮಯ ಕೇಳಿತ್ತು.
ಸರ್ಕಾರ ಕೇಳಿದ್ದ ಸಮಯ ಮೀರಿದ್ದು,‌‌ ಬೇಡಿಕೆ ಈಡೇರಿಲ್ಲ. ಈ ಕಾರಣಕ್ಕೆ ಸರ್ಕಾರಕ್ಕೆ ನಮ್ಮ ಬೇಡಿಕೆ ನೆನಪಿಸಲು ಮತ್ತೇ ಅಭಿಯಾನ ಆರಂಭಿಸಲಾಗಿದೆ. ಒಂದು ವೇಳೆ ಈಗಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರು‌ 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ ಇಡೀ‌‌ ಸಮುದಾಯವೇ ಸತ್ಯಾಗ್ರಹ ಹಮ್ಮಿಕೊಳ್ಳುತ್ತೆ ಎಂದು ಎಚ್ಚರಿಸಿದರು.

Please follow and like us:
error