ಪೇಂಟರ್ ಕಾರ್ಮಿಕರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಒದಗಿಸಲು ಶಾಸಕ ಹಿಟ್ನಾಳಗೆ ಮನವಿ


ಕನ್ನಡನೆಟ್ ನ್ಯೂಸ್ : ಸಂಘದ ಅರ್ಹ ಪೇಂಟರ್ ಕಾರ್ಮಿಕರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನೀಡಲು ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘವು ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಮನವಿ ಮಾಡಿಕೊಂಡಿದೆ.
ಬಾಡಿಗೆ ಮನೆಗಳಲ್ಲಿರುವ ಪೇಂಟರ್ ಕಾರ್ಮಿಕರಿಗೆ ಮನೆಗಳನ್ನು ನೀಡುವುದಾಗಿ ಆಶ್ವಾಸನೆ ನೀಡಿದಂತೆ ಆದಷ್ಟು ಬೇಗ ಮನೆಗಳನ್ನು ನೀಡಿ ಎಂದು ಪೇಂಟರ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಜಾಕ್ ಪೇಂಟರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ. ಜಿಲ್ಲಾ ಖಜಾಂಚಿ ಆಸಿಫ್ ಕಿಲ್ಲೇದಾರ್., ಎಸ್ ನೂರುಲ್ಲಾ ಖಾದ್ರಿ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್. ಎ. ಗಫಾರ್ ಮುಂತಾದವರ ನೇತೃತ್ವದಲ್ಲಿ ನೂರಾರು ಪೇಂಟರ್ ಕಾರ್ಮಿಕರ ನಿಯೋಗದಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಗವಿಸಿದ್ದಪ್ಪ ಚಿನ್ನೂರು ಪೇಂಟರ್ ಕಾರ್ಮಿಕರ ಬಾಡಿಗೆ ಮನೆಗಳ ಸಮಸ್ಯೆ ಕರಿತು ಶಾಸಕ ಕೆ, ರಾಘವೇಂದ್ರ ಹಿಟ್ನಾಳ ಸವಿಸ್ತಾರವಾಗಿ ವಿವರಿಸಿದರು.
ಮನವಿ ಸ್ವೀಕರಿಸಿದ ಶಾಸಕ ಕೆ. ರಾಘವೇಂದ್ರ ಬಿ. ಹಿಟ್ನಾಳ್ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಮನೆಗಳು ಹಂಚಿಕೆ ಸಾಧ್ಯತೆ ಕಡಿಮೆ ಇದ್ದು. ಚಿಕ್ ಸಿಂದೋಗಿ ರಸ್ತೆಯಲ್ಲಿ ಅಥವಾ ಇನ್ನಿತರ ಕಡೆ ನಿವೇಶನಗಳನ್ನು ಖಚಿತವಾಗಿ ಒದಗಿಸಲು ನಾನು ಮತ್ತು ನಗರಸಭೆ ಅಧ್ಯಕ್ಷರು ಪ್ರಯತ್ನ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮನೆಗಳು ನಿರ್ಮಿಸಿಕೊಡುವ ಬಗ್ಗೆ ಪ್ರಯತ್ನ ಮಾಡೋಣ ಎಂದು ಹೇಳಿದರು.

Please follow and like us: