ಐಎಎಸ್ ಅಧಿಕಾರಿ ವಿರುದ್ದ ಕೊಲೆ ಮೊಕದ್ದಮೆ ದಾಖಲಿಸಲು ಅನೀಸ್ ಪಾಷಾ ಒತ್ತಾಯ

Kannadanet : ಐ.ಎ.ಎಸ್ ಅಧಿಕಾರಿಯನ್ನು ಈ ತಕ್ಷಣ ಕೆಲಸದಿಂದ ಅಮಾನತ್ತು ಮಾಡಿ ಅವರ ಮೇಲೆ ಕೊಲೆ ಪ್ರಯತ್ನದ ಪ್ರಕರಣವನ್ನು ದಾಖಲು ಮಾಡುವಂತೆ ಪ್ರಧಾನ ಮಂತ್ರಿಗಳಿಗೆ ಹಿರಿಯ ವಕೀಲರಾದ ಅನೀಸ್ ಪಾಷ ಮನವಿ ಸಲ್ಲಿಸಿದ್ದಾರೆ. ಸಂಯುಕ್ತ ರೈತ ಮೋರ್ಚಾ ರೈತ ಸಂಘಟನೆಗಳು ಸೇರಿ ಮಹಾ ಪಂಚಾಯತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಐ.ಎ.ಎಸ್ ಅಧಿಕಾರಿ ಆಯುಶ್ ಸಿನ್ನ ರವರು ರೈತ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹುದ್ದೆಯ ದರ್ಪದಿಂದ ಪೊಲೀಸ್ ಇಲಾಖೆ ಸಿಬ್ಬಂಧಿಗಳಿಗೆ ಪ್ರಚೋಧನಾತ್ಮಕವಾಗಿ ಹೇಳಿಕೆಯನ್ನು ನೀಡುತ್ತಾ ರೈತ ಹೋರಾಟಗಾರರು ಒಂದುವೇಳೆ ನಿಗಧಿಪಡಿಸಿರುವ ಜಾಗಕ್ಕಿಂತ ಮುಂದೆ ಬಂದರೆ ರೈತ ಹೋರಾಟಗಾರರ ತಲೆಗಳನ್ನು ಹೊಡೆದು ಅವರನ್ನು ತಡೆಹಿಡಿಯಿರಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹಲ್ಲೆ ಮಾಡಲು ಪ್ರಚೋಧನಾತ್ಮಕ ಹೇಳಿಕೆಯನ್ನು ನೀಡಿರುತ್ತಾರೆ , ಅದೇ ರೀತಿ ಮಹಾ ಪಂಚಾಯತ ಸಂದರ್ಭದಲ್ಲಿ ದಿ : 28/08/2021 ರಂದು ಐ.ಪಿ.ಎಸ್ ಅಧಿಕಾರಿ ಆಯುಶ್ ಸಿನ್ನ ರವರ ಹೇಳಿಕೆಯಂತೆ ಪ್ರಚೋಧನೆಗೆ ಒಳಗಾಗಿ ಪೊಲೀಸ್ ಅಧಿಕಾರಿಗಳು ಸುಮಾರು 10 ಜನ ರೈತರ ತಲೆಯ ಹಾಗೂ ಇತರೆ ಜಾಗಗಳ ಮೇಲೆ ಲಾಠಿ ಮತ್ತು ಕೋಲಗಳಿಂದ ಹಲ್ಲೆಯನ್ನು ಮಾಡಿ ರಕ್ತಗಾಯಪಡಿಸಿದ್ದಾರೆ ಹಾಗೂ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ , ಈ ಪ್ರಚೋದನಾತ್ಮಕ ಹೇಳಿಕೆಯು ಸಂವಿಧಾನ ಬಾಹಿರ ಹಾಗೂ ಭಾರತ ದಂಡ ಸಂಹಿತೆ ( ಐ.ಪಿ.ಸಿ ) ಕಲಂ 307 ಅಡಿಯಲ್ಲಿ ಈ ವಿಚಾರದ ಬಗ್ಗೆ ರೈತ ಮುಖಂಡರು ಮೇಲಾಧಿಕಾರಿಗಳಿಗೆ ಪಿರ್ಯಾದನ್ನು ಸಲ್ಲಿಸಿದರೂ ಕೂಡ ಮೇಲಾಧಿಕಾರಿಗಳು ಐ.ಎ.ಎಸ್ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ . ಸುಮಾರು 500 ಕ್ಕು ಹೆಚ್ಚು ರೈತ ಸಂಘಟನೆಗಳು 9 ತಿಂಗಳಿನಿಂದ ಜಾರಿಮಾಡಿರುವಂತಹ 3 ರೈತ ಕಾನೂನುಗಳನ್ನು ವಿರೋಧಿಸಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುತ್ತಾರೆ . ಆದರೆ ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ . ಈ ರೀತಿ ಸಂವಿಧಾನ ಬದ್ಧವಾಗಿ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಯನ್ನು ಆಲಿಸಿ ಅವರ ಸಮಸ್ಯೆಗಳನ್ನು ಸ್ಪಂದಿಸುವ ಬದಲಿಗೆ ಅವರ ವಿರುದ್ಧವೇ ಕಾನೂನು ಬಾಹಿರವಾಗಿ ಹೋರಾಟಗಳನ್ನು ಹತ್ತಿಕ್ಕಲು ರೈತರನ್ನು ರಕ್ಷಣೆ ಮಾಡಬೇಕಾಗಿರುವ ಸರ್ಕಾರವೇ ಎದುರು ನಿಂತರೆ ದೇಶದ ರೈತರು ಹೇಗೆ ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ . ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮೌನ ವಹಿಸಿದ್ದು , ಐ.ಎ.ಎಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ , ಜನಸಾಮಾನ್ಯರಿಗೆ ಒಂದು ಐ.ಎ.ಎಸ್ ಅಧಿಕಾರಿಗಳಿಗೆ ಒಂದು ಕಾನೂನು ಮಾಡಿದಂತೆ ಸಮಾಜಕ್ಕೆ ಮಾಹಿತಿ ರವಾನೆಯಾಗುತ್ತದೆ . ಆದ್ದರಿಂದ ಕಾನೂನು ಕೈಗೆತ್ತಿಕೊಂಡು ಕಾನೂನು ಬಾಹಿರವಾಗಿ ಪ್ರಚೋಧನಾತ್ಮಕ ಹೇಳಿಕೆಯನ್ನು ನೀಡಿರುವ ಆಯುಶ್ ಸಿದ್ದ ಎಂಬ ಐ.ಎ.ಎಸ್ ಅಧಿಕಾರಿಯ ವಿರುದ್ಧ ಪ್ರಕರಣವನ್ನು ದಾಖಲಿಸಲು ನಿರ್ದೇಶನ ನೀಡಿ ಈ ಕೂಡಲೇ ಅವರನ್ನು ಅಮಾನತ್ತಿನಲ್ಲಿಡಲು ಮೇಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ರೈತ ಪರ ಹೋರಾಟಗಾರ ಹಿರಿಯ ವಕೀಲರಾದ ಅನೀಸ್ ಪಾಷ ಒತ್ತಾಯಿಸಿದ್ದಾರೆ.

Please follow and like us:
error