ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ-ಆರ್.ಬಿ.ಪಾನಘಂಟಿ

Kannadanet : ಕೊಪ್ಪಳ ತಾಲೂಕಾ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಕುಸುಮ) ವತಿಯಿಂದ ಶ್ರೀ ಶಂಕರಾಚಾರ್ಯಮಠ ಶ್ರೀ ಶಾರದಾಂಬಾ ಶಾಲೆ ಭಾಗ್ಯನಗರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಘವೇಂದ್ರ ಪಾನಘಂಟಿ ಹಿರಿಯ ನ್ಯಾಯವಾದಿಗಳು ಹಾಗೂ ಜಿಲ್ಲಾ ಗೌರವಾಧ್ಯಕ್ಷರು (ಕುಸುಮ)ರವರು ಸಮಾಜದಲ್ಲಿ ಅನೇಕ ರಂಗಗಳಿವೆ. ಅದರಲ್ಲಿ ಶಿಕ್ಷಣರಂಗ ಅತ್ಯಂತ ಮಹತ್ವದ್ದು, ಈ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿವೆ. ಅಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತನು ಮನ ಧನದಿಂದ ಅತ್ಯಂತ ಪರಿಶ್ರಮವಹಿಸಿ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದಕ್ಕೆ ಸರಕಾರ ಮತ್ತು ಶಿಕ್ಷಣ ಇಲಾಖೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಸಹಕರಿಸಬೇಕು ಹಾಗೂ ಡಾ|| ಸರ್ವಪಲ್ಲಿ ರಾಧಾಕೃಷ್ಣನ್‌ರವರು ಈ ದೇಶದ ಶ್ರೇಷ್ಠ ಶಿಕ್ಷಕರು ಅವರ ಆದರ್ಶಗಳು ಇಂದಿನ ಯುವ ಶಿಕ್ಷಕ ಬಂಧುಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವರಾಜ ಬಳ್ಳೊಳ್ಳಿ ಅಧ್ಯಕ್ಷರು ಸ್ವಾಮಿ ವಿವೇಕಾನಂದ ಶಾಲೆ ಕೊಪ್ಪಳ, ಮಹಾಂತೇಶ ಎಸ್. ಪಾಟೀಲ್ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ವಿ.ಎಮ್.ಭೂಸನೂರಮಠ ಹಿರಿಯ ನ್ಯಾಯವಾದಿಗಳು, ಕೆ.ಎಮ್.ಸೈಯ್ಯದ್ ಉದ್ಯಮಿಗಳು, ದಾನಪ್ಪ ಕವಲೂರು ಉದ್ಯಮಿಗಳು, ಬಿ.ಕಲ್ಲೇಶ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಗದಗ, ನಾಗರಾಜ ಕೊಪ್ಪಳ ತಾಲೂಕ ಕಾರ್ಯದರ್ಶಿ ಯಲಬುರ್ಗಾ ಇವರೆಲ್ಲರೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಆದರ್ಶಗಳ ಬಗ್ಗೆ ಹಾಗೂ ಪ್ರಚಲಿತ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮೊಹಮ್ಮದ್ ಅಲೀಮುದ್ದೀನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶಾಹಿದ್ ತಹಶೀಲ್ದಾರ ತಾಲೂಕ ಅಧ್ಯಕ್ಷರು (ಕುಸುಮ)ರವರು ಮಾತನಾಡಿದರು. ಪರಮಹಂಸ ಶ್ರೀ ಶಿವಪ್ರಕಾಶಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಮೊದಲಿಗೆ ಆರ್.ಹೆಚ್.ಅತ್ತನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಕೆ.ಮುಲ್ಲಾನವರು ಸ್ವಾಗತಿಸಿದರು. ಫಕೀರಪ್ಪ ಎಮ್ಮಿ ನಿರೂಪಿಸಿದರು. ಶಿವನಗೌಡ ಪೊಲೀಸ್ ಪಾಟೀಲ್ ವಂದಿಸಿದರು.

Please follow and like us: