ಕನ್ನಡನೆಟ್ : ರಾಜ್ಯದಲ್ಲಿಯೇ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ಸಾಮಾನ್ಯರಂತೆ ಜಮೀನಿನಲ್ಲಿ ಕುರಿಗಾರರ ಹಾಕಿರುವ ಹಟ್ಟಿಯಲ್ಲಿ ಕುಳಿತು ಭಾನುವಾರ ಊಟ ಮಾಡಿದ್ದಾರೆ.

ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್ ರಾಜಕುಮಾರ ಕೋವಿಡ್ ಹಿನ್ನೆಲೆ ದರ್ಶನಕ್ಕೆ ನಿಷೇಧ ಇರುವುದರಿಂದ ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪುರ, ಬಂಡಿ ಹರ್ಲಾಪುರ, ನಾರಾಯಣ ಪೇಟೆ ಊರುಗಳಿಗೆ ಭೇಟಿ ನೀಡಿದ್ದಾರೆ.


ಗಂಗಾವತಿ ಸುತ್ತಾಟ ನಡೆಸಿ ವಿಜಯನಗರಕ್ಕೆ ಹೋಗುವ ವೇಳೆ ದಾರಿಯ ಜಮೀನಿನಲ್ಲಿ ಕುರಿಗಾರರು ಹಾಕಿರುವ ಕುರಿ ಹಟ್ಟಿಗೆ ಭೇಟಿ ನೀಡಿದ್ದಾರೆ. ಕುರಿಗಾರರ ಜೊತೆ ಮಾತುಕತೆ ನಡೆಸಿದ ಪುನೀತ್ ಅವರ ಕಂಬಳಿ ಮೇಲೆ ಕುಳಿತು, ಕುರಿಗಾರರು ಊಟ ಮಾಡುವ ಸಂಗಟಿ, ಹಾಲು ಊಟ ಮಾಡಿ ಸರಳತೆಯನ್ನು ಮೆರೆದಿದ್ದಾರೆ. ನಂತರ ಕುರಿಗಾರರ ಮಕ್ಕಳ ಹಾಗೂ ಕುರಿಗಾರರ ಜೊತೆಗೆ ತಮ್ಮ ಐಶಾರಾಮಿ ಕಾರಿನ ಮುಂದೆ ನಿಂತುಕೊಂಡು ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ
Please follow and like us: