ಮುದಗಲ್ ಹಜರತ್ ಇಮಾಮ್ ಎ ಹುಸೇನ್ ದರ್ಗಾಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಭೇಟಿ

ಕನ್ನಡನೆಟ್ ನ್ಯೂಸ್ :

ಐತಿಹಾಸಿಕ ಮುದಗಲ್ ಹಜರತ್ ಇಮಾಮ್ ಎ ಹುಸೇನ್ ದರ್ಗಾಕ್ಕೆ ಭೇಟಿ ನೀಡಿದ ಮಾಜಿ ಸಚಿವ ಅನ್ಸಾರಿ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಐತಿಹಾಸಿಕ ಪ್ರಸಿದ್ದ ಮುದಗಲ್ ಪಟ್ಟಣದ ಅಂದ್ರೋನಿ ಕಿಲ್ಲಾದ ಮೊಹರಂ ಹತ್ತನೆಯ ದಿವಸ ಹಜರತ್ ಇಮಾಮ್ ಎ ಹುಸೇನ್ ಆಶೂರ್ ಖಾನಾಕ್ಕೆ ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಕ್ತಾರರಾದ ಇಕ್ಬಾಲ್ ಅನ್ಸಾರಿ ಅವರು ಭೇಟಿ ಕೊಟ್ಟು ದರ್ಶನ ಪಡೆದರು. ನಂತರ ಕಮಿಟಿ ವತಿಯಿಂದ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರ ಪರವಾಗಿ ಮುಖಂಡ ಮಹೆಬೂಬ ಬಾರಿಗಿಡ ಅವರು ಸನ್ಮಾನಿಸಿ ಗೌರವಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಐತಿಹಾಸಿಕ ಹಿನ್ನೆಲೆ ಇರುವಂತಹ ಮುದಗಲ್ ಮೊಹರಂ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಪ್ರಸಿದ್ದಿ ಪಡೆದಿದೆ ಮುದಗಲ್ ಮೊಹರಂ ವೀಕ್ಷಿಸಲು ಲಕ್ಷಾಂತರ ಜನ ಬರುತ್ತಾರೆ ಭಕ್ತಾದಿಗಳು ತಮ್ಮ ಇಷ್ಟಾರ್ಥ ಈಡೇರಿದ ನಂತರ ಹರಕೆಗಳನ್ನು ತೀರಿಸುತ್ತಾರೆ. ನಾನು ಇಲ್ಲಿ ಸುಮಾರು ವರ್ಷಗಳಿಂದ ಬಂದು ದರ್ಶನ ಮಾಡಿ ಒಳಿತನ್ನು ಪಡೆದಿರುತ್ತೇನೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಕಾರ್ಯದರ್ಶಿ ಸಾದಿಕ್ ಅಲಿ, ಅನೀಸ್ ಬಾಬು, ಕ ರ ವೇ ಅಧ್ಯಕ್ಷ ಎಸ್.ಎ.ನಯೀಮ್, ಮಾಸೂಮ್ ಷರೀಫ್ ರೆಹಮಾನ್ ಧೂಲಾ, ಖಾದ್ರಿ, ನಾಗರಾಜ ದಫೇದಾರ, ಮುಂತಾದವರು ಉಪಸ್ಥಿತರಿದ್ದರು.

Please follow and like us:
error