‘ಗವಿಸಿದ್ಧ ಎನ್ ಬಳ್ಳಾರಿ – ಕಾವ್ಯ ಪ್ರಶಸ್ತಿ – ೨೦೨೧’ – ಫೈಜ್ ನಟರಾಜ್ ರಿಗೆ

ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ಕಾವ್ಯದ ಹಸ್ತಪ್ರತಿಗೆ ಕೊಡಮಾಡುವ
ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿಯು
ಈ ವರ್ಷ (೨೦೨೧ ನೇ ಸಾಲಿನ) ಸಂತೆಬೆನ್ನೂರಿನ ಕವಿ ಫೈಜ್ ನಟರಾಜ್ ರ
‘ಮತ್ತೆ ಮತ್ತೆ ಹೇಗೆ ಹಾಡಲಿ’ ಹಸ್ತಪ್ರತಿಗೆ ಲಭಿಸಿದೆ.

ಈ ವರ್ಷ ಒಟ್ಟು ಬಂದ ಹಸ್ತಪ್ರತಿಗಳು ೭೧. ಇವುಗಳಲ್ಲಿ – ೧೨ ಹಸ್ತಪ್ರತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಕವಿಗಳಾದ ಹರಿನಾಥ ಬಾಬು ಮತ್ತು ಬಿ. ಶ್ರೀನಿವಾಸ ಅವರು ಕೊನೆಯ ಸುತ್ತಿನ ತೀರ್ಪುಗಾರರಾಗಿದ್ದರು.

ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಕೊಪ್ಪಳದಲ್ಲಿ ಮುಂದಿನ ತಿಂಗಳು ನಡೆಯುವ ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ
ದಲ್ಲಿ ವಿತರಿಸಲಾಗುವುದು ಎಂದು
ಗವಿಸಿದ್ಧ ಎನ್. ಬಳ್ಳಾರಿ ವೇದಿಕೆಯ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೈಜ್ ನಟರಾಜ್: ಪರಿಚಯ

ಹೆಸರು ಸೈಯದ್ ಫೈಜುಲ್ಲಾ.
‘ಸಂತೆಬೆನ್ನೂರು ಫೈಜ್ನಟ್ರಾಜ್’ ಕಾವ್ಯನಾಮದಿಂದ ಪರಿಚಿತರು. ಊರು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು.
ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು.

ಈ ವರೆಗೆ : ‘ಎದೆಯೊಳಗಿನ ತಲ್ಲಣ’, ‘ಬುದ್ಧನಾಗ ಹೊರಟು’, “ಬುದ್ಧನಿಗೆ ಕೊರೋನಾ ಸೋಂಕಿಲ್ಲ’ ಎನ್ನುವ ಕವನ ಸಂಕಲನಗಳನ್ನು, ‘ಕೇಳದೇ ನಿಮಗೀಗ’ – ಪ್ರೇಮಕಾವ್ಯ,
‘ಮಂತ್ರದಂಡ’, ‘ಸ್ನೇಹದ ಕಡಲಲ್ಲಿ’ ಎನ್ನುವ ಮಕ್ಕಳ ಕೃತಿಗಳನ್ನು ‘ಹಬ್ಬಿದಾ ಮಲೆ ಮಧ್ಯದೊಳಗೆ’ – ಕಥಾ ಸಂಕಲನ, ‘ಲೋಕದ ಡೊಂಕು’ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ.

ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪುರಸ್ಕಾರ, ಸ್ನೇಹಶ್ರೀ ಪ್ರಶಸ್ತಿಗಳು ಇವರ ಸಾಹಿತ್ಯಕ್ಕೆ ಸಂದ ಗೌರವಗಳು. ಇದೀಗ
ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಗೆ ಇವರ ಹಸ್ತಪ್ರತಿ
ಮತ್ತೆ ಮತ್ತೆ ಹೇಗೆ ಹಾಡಲಿ’ ಆಯ್ಕೆಯಾಗಿದೆ.

Please follow and like us:
error