ಕುಕನೂರ ತಾಲೂಕ ಜೆಡಿಎಸ್ ಅಧ್ಯಕ್ಷರಾಗಿ ಸುರೇಶ ಗುರಿಕಾರ ನೇಮಕ

ಕೊಪ್ಪಳ : ಆ.೦೨, ರಂದು ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ಜರುಗಿತು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ. ಕೆ. ಕುಮಾರಸ್ವಾಮಿ ಯವರ ಹಾಗೂ ವೀಕ್ಷಕರಾದ ವೆಂಕಟರಾವ್ ನಾಡಗೌಡ್ರು, ವಿರೇಶ ಮಾಹಾಂತಯ್ಯನಮಠ ಇವರುಗಳ ಶಿಫಾರಸ್ಸ್ಸಿನ ಮೇರೆಗೆ ಜಿಲ್ಲಾ ಅಧ್ಯಕ್ಷರಾದ ಅಮರೇಗೌಡ ಪಾಟೀಲ್ ರವರು ಕುಕನೂರ ತಾಲೂಕ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನಾಗಿ ಸುರೇಶ ನಾಗಪ್ಪ ಗುರಿಕಾರ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಗವಿಸಿದ್ದಯ್ಯ ಲಕಮಾಪೂರ, ಉಪಾಧ್ಯಕ್ಷರನ್ನಾಗಿ ಬಸವರಾಜ ಹನುಮಪ್ಪ ಹಿರೇಮನಿ ರವರನನ್ನು ನೇಮಕ ಮಾಡಿ ಆದೇಶಿಸಿದ್ದಾರೆ.


ಪಕ್ಷದ ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ ನೂತನ ಪದಾಧಿಕಾರಿಗಳಿಗೆ ಸ್ವಾಗತವನ್ನು ಕೋರಿ ಆದೇಶ ಪ್ರತಿಯನ್ನು ನೀಡಿ ಮಾತನಾಡಿದ ಅವರು ಮುಂಬರುವ ತಾಲೂಕ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರ ಜನಪರ ಆಡಳಿತವನ್ನು ನಡೆಸಿ, ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರ ಸಾಲವನ್ನು ಮನ್ನಾ ಮಾಡಿ ರೈತರ ಕಷ್ಟಕ್ಕೆ ನೆರವಾಗಿದ್ದರು, ಇನ್ನೂ ಅನೇಕ ಯೋಜನೆಗಳನ್ನು ಮಾಡಿದ್ದನ್ನು ಜನರಿಗೆ ಮನವರಿಕೆ ಮಾಡಿ ಮುಂಬರಲಿರುವ ತಾಲೂಕ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವನ್ನು ಸಾಧಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನವನ್ನು ಮಾಡಿರಿ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಸೊರಟೂರು, ವೀರನಗೌಡ ಹಿರೇಗೌಡ್ರು, ಕೆಂಚಪ್ಪ ಹಳ್ಳಿ, ದೇವೇಂದ್ರಗೌಡ ಜಿರ್ಲಿ ಉಪಸ್ಥಿತರಿದ್ದರು.

Please follow and like us:
error