ಸಾಮಾಜಿಕ ಕಳಕಳಿಯ ಪುಸ್ತಕ -ಡಾ. ಸಿದ್ಧರಾಮ ಮಹಾಸ್ವಾಮಿಗಳು

ಕೊಪ್ಪಳ : . ಸಾಂಸ್ಕೃತಿಕ ನಗರಿ ಮೈಸೂರಿನ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜರುಗಿದ ಅಖಿಲ ಭಾರತ ಶರಣ ಸಾಹಿತ್ಯ ಪರಿ?ತ್ತಿನ ಗೋ.ರು.ಚ.ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೊಪ್ಪಳದ ಲೇಖಕ ಜಿ.ಎಸ್.ಗೋನಾಳರ ಸ್ವರಚಿತ ‘ಸಂಸಾರದಲ್ಲಿ ಸಾಮರಸ್ಯ’ ಪುಸ್ತಕವನ್ನು ಶರಣ ಸಾಹಿತ್ಯ ಪರಿ?ತ್ತಿನ ಗೌರವಾಧ್ಯಕ್ಷರಾದ ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಬಿಡುಗಡೆ ಮಾಡಿ ಮಾತನಾಡಿ ‘ಪುಸ್ತಕಳು ಸಮಾಜದ ದಾರಿ ದೀಪಗಳು ಇದ್ದ ಹಾಗೆ’. ಜಿ.ಎಸ್.ಗೋನಾಳರ ಕೃತಿಯು ನಾಗರಿಕ ಸಮಾಜಕ್ಕೆ ಅತ್ಯುತ್ತಮವಾದ ಕೈಗನ್ನಡಿಯಾಗಿದೆ ಎಂದು ಆಶಿವ?ಚನ ನೀಡಿದರು.

ಇದೇ ಸಂಧಭ?ದಲ್ಲಿ ಹಿರಿಯ ಚಿಂತಕ ಚಲನಚಿತ್ರ ನಟರಾದ ನಾಗರಾಜ ಮೂತಿ?ಯವರು ಪುಸ್ತಕ ಕುರಿತು ಮಾತನಾಡಿ ‘ಸಂಸಾರದಲ್ಲಿ ಸಾಮಾರಸ್ಯ’ ಪುಸ್ತಕವು ಪ್ರತಿಯೊಬ್ಬ ನಾಗರಿಕರು ಓದಲೇಬೇಕಾದ ಕೃತಿ ಈ ಕೃತಿಯ ಆಶಯದಂತೆ ನೆಡೆದುಕೊಂಡಲ್ಲಿ ಸದಾ ಹಸನ್ಮುಖಿಯಾಗಿರಲು ಸಾಧ್ಯವಿದೆ. ಅಂತಹ ಮಹತ್ವದ ವಿಚಾರ ಧಾರೆಗಳು ಪುಸ್ತಕದಲ್ಲಿ ಸಂಕೀಣ?ಗೊಂಡು ಅತ್ಯುತ್ತಮವಾದ ಕೃತಿಯಾಗಿದೆ. ಜಿ.ಎಸ್.ಗೋನಾಳರಿಂದ ಇನ್ನೂ ಹೆಚ್ಚು ಚಿಂತನಾಶೀಲಾ ಬರಹಗಳು ಪ್ರಕಟವಾಗಲಿ ಎಂದು ಆಶಿಸಿ ಶುಭಕೋರಿದರು.
ಈ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿ?ತ್ತಿನ ಗೌರವಾಧ್ಯಕ್ಷರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಾಹಾಸ್ವಾಮಿಗಳು, ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಗೋ.ರು.ಚನ್ನಬಸಪ್ಪನವರು ಉಪಾಧ್ಯಕ್ಷರಾದ ಶ್ರೀ ಕೊಂಡಜ್ಜಿ ಬ.?ಣ್ಮೂಖಪ್ಪ, ಡಾ.ಸಿ.ರಾ ವನ್ನಲಿಂಗಯ್ಯ ಪ್ರಧಾನ ಕಾಯ?ದಶಿ? ಎಸ್.ಬಿ.ಅಂಗಡಿ, ಕಾಯ?ದಶಿ? ಶ್ರೀಶೈಲ ಪಟ್ಟಣಶೆಟ್ಟಿ, ಕೋಶಾಧ್ಯಕ್ಷ ಎಸ್.ಎಂ.ಹಂಪಯ್ಯ ಮೈಸೂರು ಜಿಲ್ಲಾಧ್ಯಕ್ಷರಾದ ಮ.ಗು. ಸದಾನಂದಯ್ಯ, ಕದಳಿ ವೇದಿಕೆಯ ಗಣ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error