ಪೋಲಿಸ್ ಅಧಿಕಾರಿ, ಸಿಬ್ಬಂದಿಗಳಿಗೆ ಕಾರ್ಯಾಗಾರ

ದಿ.30-07-2021 ರಿಂದ 31-07-2021 ರವರೆಗೆ 2 ದಿನಗಳ ಕಾಲ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಸುರಕ್ಷಿತ ವಾಹನ ಚಾಲನೆ . ವಾಹನಗಳ ನಿರ್ವಹಣೆ ಮತ್ತು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ವಿಚಾರಣೆ ಸಮಯದಲ್ಲಿ ಎದುರಾಗುವ ಕಾನೂನು ಸಮಸ್ಯೆಗಳ ವಿಷಯವಾಗಿ ಉಪಯುಕ್ತವಾದ ಕಾರ್ಯಾಗಾರವನ್ನು ಕೈಗೊಳ್ಳಲಾಯಿತು . ಕಾರ್ಯಾಗಾರದಲ್ಲಿ ಸುರಕ್ಷತೆ , ಕಾನೂನಾತ್ಮಕ ವಿಷಯಗಳ ಕುರಿತು ಅಧಿಕಾರಿ / ಸಿಬ್ಬಂದಿಯವರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಲಾಯಿತು . ಕಾರ್ಯಾಗರದಲ್ಲಿ ಜಿಲ್ಲೆಯ ಅಧಿಕಾರಿಗಳು , ಪೊಲೀಸ್ ವಾಹನಗಳ ಚಾಲಕರು ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು . ಲಕ್ಷ್ಮೀಕಾಂತ ನಾಲ್ಕಾರ್ , ಪ್ರಾದೇಶಿಕ ಸಾರಿಗೆ ಅಧಿಕಾರಿಗಳು , ಕೊಪ್ಪಳ , ಕೃಷ್ಣಗೌಡ , ಜಯರಾಜ , ತ್ಯಾಗರಾಜ ಮತ್ತು ಜಿ.ಎಮ್ ಸುರೇಶ , ಮೋಟಾರು ವಾಹನ ಇಲಾಖೆ ಇನ್ಸ್ಪೆಕ್ಟರ್ ರವರುಗಳು ರಸ್ತೆ ಸುರಕ್ಷತೆ , ಸುರಕ್ಷಿತ / ಸುಗಮ ವಾಹನ ಚಾಲನೆ ಮತ್ತು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ವಿಚಾರಣೆ ಸಮಯದಲ್ಲಿ ಎದುರಾಗುವ ಕಾನೂನು ಸಮಸ್ಯೆಗಳ ವಿಷಯವಾಗಿ ಕಾರ್ಯಾಗಾರದಲ್ಲಿ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿದರು .

Please follow and like us:
error