ಪೋಲಿಸರ ನೇತೃತ್ವದಲ್ಲಿ ಸೀಮಂತ ಕಾರ್ಯ

ಮಹಿಳಾ ಪೊಲೀಸ್ ಪೇದೆಗೆ, ಪೊಲೀಸ್ ಠಾಣೆ ಸಿಬ್ಬಂದಿಗಳಿಂದ ಸೀಮಂತ ಕಾರ್ಯಕ್ರಮ

ಕೊಪ್ಪಳ : ಸದಾ ಒತ್ತಡದಲ್ಲಿರುವ ಪೋಲಿಸರ ಬಗ್ಗೆ ಹತ್ತಾರು ಮಾತುಗಳು ಜನರ ಬಾಯಲ್ಲಿ, ಅವರ ವರ್ತನೆಯ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಒತ್ತಡಗಳ ನಡುವೆಯೂ ಕರ್ತವ್ಯ ನಿರ್ವಹಿಸುತ್ತಲೇ ಇರುತ್ತಾರೆ. ಸಾಮಾನ್ಯ ಜೀವನದ ಸಂಭ್ರಮ ಅವರಲ್ಲೂ ಇರುತ್ತೆ ಎನ್ನುವುದಕ್ಕೆ ಅಳವಂಡಿ ಪೊಲಿಸ್ ಠಾಣೆ ಸಾಕ್ಷಿಯಾಯಿತು. ಇಂದು ಕೊಪ್ಪಳ ತಾಲೂಕು ಅಳವಂಡಿ ಪೊಲೀಸ್ ಠಾಣೆ ಯ ಸಿಬ್ಬಂದಿ ಸರಳ ರೀತಿಯಲ್ಲಿ ಸಂಭ್ರಮಿಸಿದರು. ಅಳವಂಡಿ ಪೊಲೀಸ್ ಠಾಣೆಯಲ್ಲಿ ಇಂದು ಹಬ್ಬದ ವಾತಾವರಣ ಕಂಡು ಬಂತು. ಏನಿದು ಎಂದು ಪ್ರಶ್ನಿಸಿದ ಜನರಿಗೆ ಅಲ್ಲಿನ ಸಿಬ್ಬಂದಿ ಸೀಮಂತ ಕಾರಣ ನಡೆಯುತ್ತಿದೆ ಅಂತಾ ಹೇಳಿದ್ದು ಅಚ್ಚರಿ ಮೂಡಿಸಿತ್ತು., ಅಳವಂಡಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ವೇತಾ ಅವರಿಗೆ ಪೊಲೀಸ್ ಠಾಣೆಯ ಸಿಬ್ಬಂದಿಯೇ ಮುಂದೆ‌ ನಿಂತು ಸೀಮಂತ ಕಾರ್ಯಕ್ರಮ ‌ಮಾಡಿದರು. ಶ್ವೇತ ಅವರ ಪತಿಯೂ ಕೂಡ ಪೊಲೀಸ್‌ ಇಲಾಖೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು, ಅವರ ತಂದೆ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ‌ಈ ಹಿನ್ನೆಲೆಯಲ್ಲಿ ಠಾಣೆ ಸಿಬ್ಬಂದಿಯೇ ಕುಟುಂಬದಂತೆ ನಿಂತುಕೊಂಡು ಸೀಮಂತ ಮಾಡಿ ಕೊಟ್ಟಿದ್ದು ಪ್ರಶಂಶೆಗೆ ಪಾತ್ರವಾಗಿದೆ.

Please follow and like us:
error