ಕರೋನಾ 3ನೇ ಅಲೆ – ಅಂಜನಾದ್ರಿ ದರ್ಶನಕ್ಕೆ ನಿಷೇಧಿಸಿ ಎಸಿ ನಾರಾಯಣರೆಡ್ಡಿ ಆದೇಶಕೊಪ್ಪಳ : ಕರೋನಾ ವೈರಸ್ ನ ಮೂರನೇಯ ಅಲೆಯ ಆತಂಕ ಮನೆಮಾಡಿದ್ದು, ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತದ ಆಂಜನೇಯಾ ದೇವಸ್ಥಾನ ದರ್ಶನವನ್ನು 15 ದಿನಗಳ ಕಾಲ ನಿಷೇಧಿಸಿ ಕೊಪ್ಪಳ ಸಹಾಯಕ ಆಯುಕ್ತರಾದ ನಾರಾಯಣರೆಡ್ಡಿ ಕನಕರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.


ಲಾಕ್ಡೌನ್ ಸಡಲಿಕೆ ಆದಾಗಿನಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ದೇವಸ್ಥಾನದ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೆ ಇದೀಗ 3ನೇ ಅಲೆ ಪ್ರಾರಂಭವಾಗುತ್ತಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು, ಜನಸಂದಣಿಯಾಗದಂತೆ ನಿಯಂತ್ರಿಸಲು ಅಗಸ್ಟ್ 2(ಸೋಮವಾರ) ದಿಂದ ಅಗಸ್ಟ್ 17 ರ (ಮಂಗಳವಾರ)ವರೆಗೆ 15 ದಿನಗಳ ಕಾಲ ಅಂಜನಾದ್ರಿ ದೇವಸ್ಥಾನ ಹಾಗೂ ಅಂಜನಾದ್ರಿ ಪರ್ವತದ ಸುತ್ತಲು 2 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲು ಎಸಿಯವರು ಆದೇಶ ಹೊರಡಿಸಿದ್ದಾರೆ. ಇನ್ನು ಸಾರ್ವಜನಿಕರ ಹಾಗೂ ಭಕ್ತಾಧಿಗಳ ಆರೋಗ್ಯದ ದೃಷ್ಟಿಯಿಂದ ಕೋಡ್-19 (ಕರೋನಾ ವೈರಾಣು ಕಾಯಿಲೆ) ಹರಡುವಿಕೆ ತಡೆಯುವ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಈ ಆದೇಶ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗ ದಂಡಾಧಿಕಾರಿಯಾದ ನಾರಾಯಣರಡ್ಡಿ, ಕನಕರಡ್ಡಿ ತಿಳಿಸಿದ್ದಾರೆ.ಇದರ ಜೊತೆಗೆ ದೇವಸ್ಥಾನ ಆಡಳಿತ ಮಂಡಳಿಯವರು ಈ ದೇವಸ್ಥಾನದಲ್ಲಿ ನಡೆಯುವ ದಿನನಿತ್ಯದ ಧಾರ್ಮಿಕ ವಿಧಿ-ವಿಧಾನಗಳನ್ನು ಎಲ್ಲ ಮುಂಜಾಗ್ರತಾ ಕ್ರಮವಹಿಸಿ ನಡೆಸಲು ವಿನಾಯತಿ ನೀಡಲಾಗಿದೆ


Please follow and like us:
error