ಖಾಸಗಿ ಸಂಸ್ಥೆಗೆ ನೀಡಿದ್ದ ಉದ್ದಿಮೆಗಳ ಸರ್ವೆ ಕಾರ್ಯದ ಆದೇಶ ಹಿಂಪಡೆದ ನಗರಸಭೆ

ಕೊಪ್ಪಳ : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ತರಹದ ವಿವಿಧ ಉದ್ದಿಮೆಗಳ ಸರ್ವೆ ಕಾರ್ಯವನ್ನು ಕೈಗೊಳ್ಳಲು ಖಾಸಗಿ ಸಂಸ್ಥೆಗೆ ನೀಡಲಾಗಿರುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ತರಹದ ವಿವಿಧ ಉದ್ದಿಮೆಗಳನ್ನು ವಾರ್ಡ್ವಾರು, ಉದ್ದಿಮೆವಾರು ಸರ್ವೆ ಕಾರ್ಯವನ್ನು ಕೈಗೊಳ್ಳಲು ಕೊಪ್ಪಳ ನಗರಸಭೆ ಕಾರ್ಯಾಲಯದಿಂದ ಈ ಹಿಂದೆ ಅಂದರೆ ಏಪ್ರಿಲ್ 01 ರಂದು ಶ್ರೀಭೀಮಜ್ಯೋತಿ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ(ರಿ) ಕೊಪ್ಪಳ, ಇವರಿಗೆ ನಗರಸಭೆಯಿಂದ ಕಛೇರಿ ಆದೇಶವನ್ನು ನೀಡಲಾಗಿತ್ತು. ಆದರೆ ಸಾರ್ವಜನಿಕ ಹಿತದೃಷ್ಠಿಯಿಂದ, ನಗರಸಭೆ ಅಧ್ಯಕ್ಷರು ಆದೇಶದನ್ವಯ ಹಾಗೂ ಇತ್ತೀಚೆಗೆ (ಜುಲೈ 07 ರಂದು) ಜರಗಿದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಒಪ್ಪಿ ತೀರ್ಮಾನಿಸಿದಂತೆ, ನಗರಸಭೆಯ ಸಿಬ್ಬಂದಿಗಳಿAದಲೇ ಉದ್ದಿಮೆಗಳ ಸರ್ವೆ ಕಾರ್ಯವನ್ನು ಸರ್ವೆ ಕಾರ್ಯವನ್ನು ಮಾಡಲು ತೀರ್ಮಾನಿಸಲಾಗಿದೆ. ಶ್ರೀಭೀಮಜ್ಯೋತಿ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ(ರಿ) ಕೊಪ್ಪಳ, ಈ ಸಂಸ್ಥೆಗೆ ಉದ್ದಿಮೆಗಳ ಸರ್ವೇ ಕಾರ್ಯವನ್ನು ಮಾಡಲು ನೀಡಿದಂತಹ ಆದೇಶವನ್ನು ಇಂದು (ಜು. 30) ಹಿಂಪಡೆಯಲಾಗಿದ್ದು, ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ವಿವಿಧ ಉದ್ದಿಮೆದಾರರಗೆ ಹಾಗೂ ಸಾರ್ವಜನಿಕರಿಗೆ ಈ ಮಾಹಿತಿಯನ್ನು ತಿಳಿಸಲಾಗಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು ತಾವು ನಡೆಸುತ್ತಿರುವ ಉದ್ದಿಮೆಗೆ ಪ್ರತಿ ವರ್ಷ ಪರವಾನಿಗೆ ಪಡೆದುಕೊಳ್ಳುವ ಹಾಗೂ ನವೀಕರಿಸಿಕೊಳ್ಳುವಾಗ ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ನಗರಸಭೆ ಕಚೇರಿಗೆಯೇ ಭೇಟಿ ನೀಡಿ, ಅರ್ಜಿ ಸಲ್ಲಿಸಿ ಲೈಸನ್ಸ್ ಪಡೆದುಕೊಳ್ಳಲು ಹಾಗೂ ನವೀಕರಿಸಿಕೊಳ್ಳುವಂತೆ ಈ ಮೂಲಕ ಕೋರಲಾಗಿದೆ

Please follow and like us:
error