ಭಾಗ್ಯನಗರ ಪಟ್ಟಣದ ಪ್ರಮುಖ ರಸ್ತೆ,ವೃತ್ತಕ್ಕೆ ವಿಠ್ಠಪ್ಪ ಗೊರಂಟ್ಲಿಯವರ ಹೆಸರಿಡಲು ಆಗ್ರಹ

Koppal ಭಾಗ್ಯನಗರ ಪಟ್ಟಣದ ಯಾವುದಾದರೂ ಪ್ರಮುಖ ರಸ್ತೆ ಹಾಗೂ ವೃತ್ತಕ್ಕೆ ದಿ|| ವಿಠ್ಠಪ್ಪ ಗೊರಂಟ್ಲಿ ಅವರ ಹೆಸರು ಇಡಬೇಕೆಂದು ಅಪರ ಜಿಲ್ಲಾಧಿರಿಗಳು & ಅಪರ ಜಿಲ್ಲಾ ದಂಢಾಧಿಕಾರಿಗಳರವರಿಗೆ ಮನವಿಯನ್ನು ಸಲ್ಲಿಸಲಾಯಿತು..

ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣದ ಜನಪರ ಹೋರಾಟಗಾರರು, ಸಾಹಿತಿ, ಚಿಂತಕ, ಶಿಕ್ಷಣ ಪ್ರೇಮಿ, ಸಮಾಜ ಸುಧಾರಕ, ಹಿರಿಯ ಪತ್ರಕರ್ತ, ಕವಿ, ಬರಹಗಾರ, ನಾಟಕಕಾರರಾಗಿ ನಾಡಿನಾಧ್ಯಂತ ದಿನದಲಿತರ, ಅಲ್ಪ ಸಂಖ್ಯಾತರ, ಕಾರ್ಮಿಕರ, ಬಡ ವರ್ಗದವರ ಪರವಾಗಿ ಹಗಲಇರುಳು ಶ್ರಮಿಸಿ ನಾಡಿನಾದ್ಯಂತ ಜನಪ್ರಿಯತೆ ಪಡೆದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದವರು ದಿ|| ವಿಠ್ಠಪ್ಪ ತಂದೆ ರುಕ್ಮಪ್ಪ ಗೋರಂಟ್ಲಿರವರು. ಹಾಗೇ ಇನ್ನೂ ಅನೇಕ ಸಂಘ ಸಂಸ್ಥೆಗಳ ಮುಖಾಂತರ ಅನೇಕ ಪ್ರಶಸ್ತಿ ಪಡೆದು ಕೊಪ್ಪಳದ ಭಾಗ್ಯನಗರ ಪಟ್ಟಣದ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ್ದಾರೆ. ಇಂತಹ ಮೇರು ವ್ಯಕ್ತಿಯನ್ನು ಕಳೆದುಕೊಂಡ ಕೊಪ್ಪಳ ಜಿಲ್ಲೆ ಬಡವಾಗಿದೆ. ಆದ್ದರಿಂದ ಶ್ರೀಯವರ ಹೆಸರು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯಲು ಕೊಪ್ಪಳದಲ್ಲಿನ (ಭಾಗ್ಯನಗರ ಪಟ್ಟಣದ) ಯಾವುದಾದರೂ ಪ್ರಮುಖ ರಸ್ತೆ ಹಾಗೂ ವೃತ್ತಕ್ಕೆ ದಿ|| ವಿಠ್ಠಪ್ಪ ಗೊರಂಟ್ಲಿ ಅವರ ಹೆಸರು ನೀಡಬೇಕೆಂದು ದಲಿತ ಬಹುಜನ ಚಳುವಳಿ, ದಲಿತ ಕಲಾ ಮಂಡಳಿ ಗದಗ, ಅಭಿನವ ಶ್ರೀ ಗವಿಸಿದ್ದೇಶ್ವರ ಯುವ ಕ್ಷೇಮಾಭಿವೃದ್ಧಿ ಸಂಘ, ಡಾ|| ಬಿ.ಆರ್ ಅಂಬೇಡ್ಕರ್ ಯುವಚೇತನ ಸಂಘ, ಡಾ|| ಬಿ.ಆರ್ ಅಂಬೇಡ್ಕರ್ ಯವಕ ಸಂಘ ಭಾಗ್ಯನಗರ, ಹಾಗೂ ಕೊಪ್ಪಳ ಜಿಲ್ಲೆಯಾದ್ಯಂತ ಎಲ್ಲ ಸಂಘ ಸಂಸ್ಥೆಗಳ ವತಿಯಿಂದ ಕರ್ನಾಟಕ ಕ್ರಾಂತಿ ಸೇನೆ ರಾಜ್ಯ ಯುವ ಘಟಕ ಅಧ್ಯಕ್ಷರು ಪರುಶುರಾಮ ಯಲ್ಲಪ್ಪ ಹುಬ್ಬಳ್ಳಿ, ಭಾರತೀಯ ಬೀಮ ಸೇನಾ ಅಧ್ಯಕ್ಷರು ಕಾಶೇಪ್ಪ ಚಲವಾದಿ, ರಮೇಶ ಕೋಳುರು, ಹೆಮಣ್ಣ ಬಿಸರಳ್ಳಿ, ಸಚಿನ್ ಹುಬ್ಬಳ್ಳಿ, ಬಾಲಾಜಿ ಕಲಾಲ, ರವರು ಮಾನ್ಯ ಅಪರ ಜಿಲ್ಲಾಧಿರಿಗಳು & ಅಪರ ಜಿಲ್ಲಾ ದಂಢಾಧಿಕಾರಿಗಳರವರಿಗೆ ಮನವಿಯನ್ನು ಸಲ್ಲಿಸಲಾಯಿತು.

Please follow and like us:
error