ಡಿಕೆಶಿ ಪೇಸ್ ಬುಕ್ ಪೋಸ್ಟ್ ಎಡವಟ್ಟು : ಸಂಸದ ಸಂಗಣ್ಣ ಕರಡಿ ತಿರುಗೇಟುಕೊಪ್ಪಳ : ಸಾಮಾಜಿಕ ಜಾಲತಾಣದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಡವಟ್ಟು ಮಾಡಿದ್ದು, ಬಿಜೆಪಿಯವರ ಆಕ್ರೋಶಕ್ಕೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಕೊಪ್ಪಳ-ಬಳ್ಳಾರಿ- ರಾಯಚೂರು ಭಾಗದ ಕಾಂಗ್ರೆಸ್ ಪಕ್ಷದ ಶಾಸಕರು,ಮಾಜಿ ಸಚಿವರು ಡಿಕೆಶಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಆದರೆ ಅದೇ ಪೋಟೋಗಳನ್ನು ಬಳಸಿಕೊಂಡಿರುವ ಡಿ.ಕೆ ಶಿವಕುಮಾರ್ ತಮ್ಮದೆ ಆದ ಅಧಿಕೃತ ಫೇಸ್ಬುಕ್ ಪೇಜ್ಬಲ್ಲಿ ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ,ಶಾಸಕರಾದ ಬಸನಗೌಡ ದದ್ದಲ್,ಮಾಜಿ ಮಂತ್ರಿಗಳಾದ ಮಲ್ಲಿಕಾರ್ಜುನ ನಾಗಪ್ಪ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಚರ್ಚೆ ನಡೆಸಿದೆವು ಎಂದು ಬರೆದುಕೊಂಡಿದ್ದಾರೆ.


ಪೋಟೋದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಇಲ್ಲದಿದ್ದರೂ ಅವರ ಹೆಸರು ಬಳಸಿಕೊಂಡಿರುವುದಕ್ಕೆ ಸ್ವತಃ ಸಂಸದ ಕರಡಿ ಅವರು ತಿರುಗೇಟು ನೀಡಿದ್ದು, ನಾನು ದೆಹಲಿಯಲ್ಲಿದ್ದೇನೆ. ನಾನು ಪೋಟೋದಲ್ಲಿ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ.ಶಿವಕುಮಾರ್ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಪೋಸ್ಟ್ ಹಾಕಿ ಟಾಂಗ್ ನೀಡಿದ್ದಾರೆ. ಒಟ್ನಲ್ಲಿ ಪೋಟೋದಲ್ಲಿ ಸಂಗಣ್ಣ ಕರಡಿ ಇರದೆ ಹೋದ್ರು ಹೆಸರು ಹಾಕಿದ್ದ ಡಿ.ಕೆ.ಶಿವಕುಮಾರ್ ಅವರ ಪೋಸ್ಟ್ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ನಂತರ ಈ ಪೋಸ್ಟ್ ನ್ನು ತೆಗೆದು ಹಾಕಲಾಗಿದೆ.


Please follow and like us:
error