ಪತ್ರಿಕೆ ವಿತರಕರ ಕಲ್ಯಾಣ ಮಂಡಳಿ ರಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ತೀರ್ಮಾನ – ಎಸ್. ಎ. ಗಫಾರ್

ಕೊಪ್ಪಳ . ಸರ್ಕಾರ ಪತ್ರಿಕೆ ವಿತರಕರ ಕಲ್ಯಾಣ ಮಂಡಳಿ ರಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕರ್ನಾಟಕ ರಾಜ್ಯ ವೃತ್ತಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಎಸ್. ಎ. ಗಫಾರ್ ತಿಳಿಸಿದ್ದಾರೆ.

ಮಂಡಳಿ ರಚಿಸಿ ಅದರಡಿ ಪತ್ರಿಕೆ ವಿತರಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಷ್ಯವೇತನ (ಸ್ಕಾಲರ್ಶಿಪ್). ವಿತರಕರ ಮದುವೆಗೆ ಹಾಗೂ ಅವರ ಮಕ್ಕಳ ಮದುವೆಗೆ ಸಹಾಯ ಧನ. 60 ವರ್ಷ ಪೂರೈಸಿದವರಿಗೆ ಪಿಂಚಣಿ. ಅಪಘಾತದಿಂದ ಆಗುವ ಗಾಯ ಅಥವಾ ಸಾವಿಗೆ ಪರಿಹಾರ ಧನ ನೀಡಿಕೆ. ಅಲ್ಲದೆ ಸಹಜ ಸಾವಿಗೆ ಪರಿಹಾರ ಧನ. ಅನಾರೋಗ್ಯದಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಚಿಕಿತ್ಸೆ ಭತ್ಯೆ ಮುಂತಾದ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಚರ್ಚೆ ನಡೆದು ತೀರ್ಮಾನಿಸಿದಂತೆ ಸಂಘಟನೆ ಬಲಪಡಿಸಲು ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸುವುದು. ಸಂಘಟಿತರಾಗದ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು ಎಂದು ಜಿಲ್ಲಾ ಅಧ್ಯಕ್ಷ ಎಸ್. ಎ. ಗಫಾರ್ ತಿಳಿಸಿದ್ದಾರೆ. ಸಭೆಯಲ್ಲಿ ಕರ್ನಾಟಕ ರಾಜ್ಯ ವೃತ್ತಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಕಲಾಲ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಟಪಾಲ್. ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕಲಾಲ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೆಬೂಬ್ ಸಾಬ್ ಜಿವಿಟಿ. ಜಿಲ್ಲಾ ಖಜಾಂಚಿ ಗವಿರಾಜ್ ಈ. ಕಂದಾರಿ. ಪರಶುರಾಮ್ ಶ್ಯಾವಿ. ಯಲಬುರ್ಗಾ ತಾಲೂಕ ಸಮಿತಿಯ ಅಧ್ಯಕ್ಷ ಮಹದೇವಪ್ಪ ಪತ್ತಾರ್. ಕುಕನೂರು ತಾಲೂಕ ಸಮಿತಿಯ ಉಪಾಧ್ಯಕ್ಷ ರವೀಂದ್ರ ಕೆ. ತೋಟದ್. ಗೌರವಾಧ್ಯಕ್ಷ ವೀರಣ್ಣ ಪತ್ತಾರ. ಸಹ ಕಾರ್ಯದರ್ಶಿ ರವಿ ಹಳ್ಳಿಕೇರಿ. ರವಿ ಚಕ್ರಸಾಲಿ. ಮರಿಸ್ವಾಮಿ. ವೆಂಕಟೇಶ್ ಪುಣ್ಯ ಮೂರ್ತಿ ಮುಂತಾದವರು ಭಾಗವಹಿಸಿ ಸಲಹೆ ಸೂಚನೆ ನೀಡಿದರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಿಳಿಸಿದ್ದಾರೆ.

Please follow and like us:
error