ಕೋವಿಡ್ ನಿಂದ ಮೃತಪಟ್ಟ
ಐವರು ಪತ್ರಕರ್ತರಿಗೆ ಪರಿಹಾರ ಮಂಜೂರು

Kuwj ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸತತ ಪ್ರಯತ್ನ

ಕೋವಿಡ್ ನಿಂದ ಮೃತಪಟ್ಟ
ಐವರು ಪತ್ರಕರ್ತರಿಗೆ ಪರಿಹಾರ ಮಂಜೂರು ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೇರೆಗೆ, ಇತ್ತೀಚೆಗೆ ಕೋವಿಡ್ ಗೆ ಬಲಿಯಾಗಿದ್ದ
ಐವರು ಪತ್ರಕರ್ತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.

೧.ಕಲಬುರ್ಗಿ ಜಿಲ್ಲೆಯ
ಗುಣಶೇಖರ ಸ್ವಾಮಿ,
೨.ಮಂಡ್ಯ ಜಿಲ್ಲೆಯ ಚಲುವರಾಜು,
೩.ಕೋಲಾರ ಜಿಲ್ಲೆ
ಮಾಲೂರಿನ ರವೀಂದ್ರ,
೪.ವಿಜಯಪುರ ಜಿಲ್ಲೆಯ ಶಂಸುದ್ದೀನ್ ಸೈಯದ್
೫.ಕೊಪ್ಪಳ ಜಿಲ್ಲೆಯ ತಿಪ್ಪನಗೌಡ ಮಾಲಿ ಪಾಟೀಲ
ಅವರುಗಳು ಕೋವಿಡ್ ಗೆ ಬಲಿಯಾಗಿದ್ದರು.
ಗುಣಶೇಖರ ಸ್ವಾಮಿ ಅವರಿಗೆ ಪರಿಹಾರ ಕೊಡಿಸುವಂತೆ ಕಲಬುರ್ಗಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ,
ಚಲುವರಾಜು ಅವರಿಗೆ ಪರಿಹಾರ ಕೊಡಿಸುವಂತೆ ಮಂಡ್ಯ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ರವೀಂದ್ರ ಅವರಿಗೆ ಪರಿಹಾರ ಮಂಜೂರು ಮಾಡುವಂತೆ ಕೋಲಾರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಶಂಸುದ್ದೀನ್ ಸೈಯದ್ ಅವರಿಗೆ ಪರಿಹಾರ ನೀಡುವಂತೆ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ತಿಪ್ಪನಗೌಡ ಮಾಲಿ ಪಾಟೀಲ ಅವರಿಗೆ ಪರಿಹಾರ ಕೊಡಿಸುವಂತೆ ಕೊಪ್ಪಳ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘಗಳು, ರಾಜ್ಯ ಸಂಘಕ್ಕೆ ಮನವಿ ಮಾಡಿದ್ದವು.

ಕೆಯುಡಬ್ಲ್ಯೂಜೆ ಮನವಿ ಪರಿಗಣಿಸಿ ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Please follow and like us: