ಮಂಡ್ಯ ಸೊಗಡಿನ ಅಸ್ಮಿತೆ

-ಶಿವಾನಂದ ತಗಡೂರು

ರೈತ ಹೋರಾಟಗಾರ ಜಿ.ಮಾದೇಗೌಡ ಅವರ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆಯಿಲ್ಲ.
ಕಾವೇರಿ ವಿವಾದ ಶುರುವಾದ ಸಂದರ್ಭಗಳಲ್ಲಿ ಜಿ.ಮಾದೇಗೌಡರ ಹೆಸರು ಮುನ್ನೆಲೆಗೆ ಬಂದು ನಿಲ್ಲುತಿತ್ತು. ಸರ್ಕಾರ ಕೂಡ ಮಾದೇಗೌಡರನ್ನು ಒಂದು ಮಾತು ಕೇಳಬೇಕು ಎನ್ನುವ ನಿಲುವಿನಿಂದ ಯಾವತ್ತು ಹಿಂದೆ ಸರಿದ ಘಟನೆಗಳಿಲ್ಲ. ಅವರೊಂದಿಗೆ ಮಾತನಾಡಿಯೇ ಮುಂದುವರಿದ ಮುಖ್ಯಮಂತ್ರಿಗಳ ಪಟ್ಟಿ ದೊಡ್ಡದಿದೆ.

ತೊಂಬತ್ತರ ದಶಕದಲ್ಲಿ ಕಾವೇರಿ ಚಳವಳಿ ಕಾವೇರಿದ್ದ ಕಾಲ. ನಾನಾಗ ಹಾಸನ ಜಿಲ್ಲೆ ರೈತ ಹಿತ ರಕ್ಷಣಾ ಸಮಿತಿ ಸಂಚಾಲಕನಾಗಿದ್ದೆ. ಆ ಸಂದರ್ಭದಲ್ಲಿ ಅವರ ಕರೆಗೆ ಓಗೊಟ್ಟು ಚಳವಳಿ ಮಾಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ನೀಡುತ್ತಿದ್ದ ಕಾಯಕ ಮಾಮೂಲಾಗಿತ್ತು. ಹೋರಾಟದ ವಿಷಯದಲ್ಲಿ ಮಾರ್ಗದರ್ಶನ ಮಾಡಿ, ಬೆನ್ನು ತಟ್ಟಿ ಪ್ರೋತ್ಸಾಯಿಸಿದ ರೈತ ಧ್ವನಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರನ್ನು ಮರೆಯುವಂತಿಲ್ಲ. ಹಾಗೆ ಕಾವೇರಿ ವಿಷಯದಲ್ಲಿ ಜಿ.ಮಾದೇಗೌಡರನ್ನು ಮರೆಯಲಾಗದು. ಕನ್ನಡ ನಾಡು ಎಂದೂ ಮರೆಯಬಾರದ ನಾಯಕ ಅವರು.

ರಾಜಕೀಯ ಏಳು ಬೀಳು ಏನೇ ಇರಲಿ, ವಾದ ವಿವಾದ ಒತ್ತಟ್ಟಿಗಿರಲಿ, ಜಿ.ಮಾದೇಗೌಡರಂತ ನಾಯಕತ್ವ ಬಲು ಅಪರೂಪ. ಮಂಡ್ಯ ನೆಲದ ಅಸ್ಮಿತೆ ಎಂದರೂ ಖಂಡಿತವಾಗಿ ಅತಿಶೋಯಕ್ತಿ ಅಲ್ಲ. ಜಿ.ಮಾದೇಗೌಡರ ಆತ್ಮಕ್ಕೆ ಶಾಂತಿ ಸಿಗಲಿ

Please follow and like us: