ಕಾಲುವೆಗಳಿಗೆ ನೀರುಹರಿಸುವ ಕಾರ್ಯಕ್ಕೆ ಚಾಲನೆ

Koppal ಇಂದು ತುಂಗಭದ್ರ ಎಡದಂಡೆಯ ಹಾಗೂ ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಇತ್ತೀಚಿಗೆ ನಡೆದಿದ್ದ ಐಸಿಸಿ ಸಭೆಯಲ್ಲಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ೧೮ರಿಂದ ನೀರು ಬಿಡಲು ನಿರ್ಧರಿಸಲಾಗಿತ್ತು. ೪೬ ಟಿಎಂಸಿ ನೀರು ಈಗ ಸದ್ಯ ಜಲಾಶಯದಲ್ಲಿದೆ. ನೀರನ್ನು ಬಿಡುವುದರ ಕುರಿತು ತೀವ್ರವಾದ ಚರ್ಚೆ ನಡೆದಿತ್ತು. ಜಲಾಶಯಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ,

ತಾಲೂಕ ಪಂಚಾಯತ್ ಅದ್ಯಕ್ಷ ಬಾಲಚಂದ್ರ, ಕೆಡಿಪಿ ಸದಸ್ಯ ಅಮರೇಶ ಕರಡಿ, ಕನಕಗಿರಿ ಶಾಸಕ ಬಸವರಾಜ ದಡೇಸೂಗರ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಪ್ರಮುಖರಾದ ಪಾಲಕ್ಷಪ್ಪ ಗುಂಗಾಡಿ, ಬಸವಾರಜ ಭೋವಿ, ಪ್ರದೀಪ ಹಿಟ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: