ಲಕ್ಷಾಂತರ ಮೌಲ್ಯದ ನಿಷೇಧಿತ ಆಫ್ರಿಕನ್ ಕ್ಯಾಟಫೀಶ್ ಜಪ್ತಿ

ನಿಷೇಧಿತ ಆಫ್ರಿಕನಕ್ಯಾಟಫೀಶ್ 12 ಟನ್ ತೂಕದಷ್ಟು ಸುಮಾರು 7,20,000/- ರೂ ಮೌಲ್ಯದ ಮೀನುಗಳು ಜಪ್ತಿ.

ಕೊಪ್ಪಳ : ನಿಷೇಧಿತ ಆಫ್ರಿಕನಕ್ಯಾಟಫೀಶ್ 12 ಟನ್ ತೂಕದಷ್ಟು ಸುಮಾರು 7,20,000/- ರೂ ಮೌಲ್ಯದ ಮೀನುಗಳು ಜಪ್ತಿ ಮಾಡಲಾಗಿದೆ.

ದಿ 17-07-2021 ರಂದು ಮದ್ಯಾಹ್ನ 1-30 ಸುಮಾರಿಗೆ ಆಫ್ರಿಕನಕ್ಯಾಟಫೀಶ್ (ಕ್ಲೇರಿಯಸ್ಗ್ಯಾರಿಪಿನಿಯಸ್) ಮೀನುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಗೀತಾ ಬೇನಹಾಳ ಪೊಲೀಸ್ ಉಪಾಧೀಕ್ಷಕರು ಕೊಪ್ಪಳ ರವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಸಮೇತ  Copy and paste this code on your site. ಹೋಗಿ ದಾಳಿ ಮಾಡಿ ಲಾರಿ ಮತ್ತು ಆರೋಪಿತರಾದ 1. ಮೊಹಮ್ಮದ ಖಾನ್ @ ಮೈನು ತಂದೆ ಬಾಬು ಖಾನ್ ಸಾ: ಚೆನ್ನಪಟ್ಟಣ 2. ಇರ್ಫಾನ ಖಾನ್ ತಂದೆ ರಿಜ್ವಾನ ಖಾನ್ ಸಾ:ಚಿಂತಾಮಣಿ 3. ಜಗಲಿ ದುರ್ವೆ ತಂದೆ ಜೀವನಲಾಲ ಲಾರಿ ಚಾಲಕ ಸಾ: ಮದ್ಯ ಪ್ರದೇಶ ಇವರು ತಮ್ಮ ಲಾರಿ ನಂಬರ್ ಕೆ.ಎ-16/ಸಿ-9244 ನೇದ್ದರಲ್ಲಿ ಸುಮಾರು 12 (ಹನ್ನೆರಡು) ಟನ ತೂಕದಷ್ಟು ಅಂದಾಜು 7,20,000=00 ರೂಪಾಯಿ (1 ಕೆ.ಜಿಮೀನುಅಂ.ಕಿ 60=00 ರೂರಂತೆ) ಮೌಲ್ಯದ ಮೀನುಗಳು ಇಂತಹ ಮೀನುಗಳಿಂದ ಪರಿಸ ರ ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂದು ಸರಕಾರ ಈ ಮೀನುಗಳನ್ನು ಪಾಲನೆ (ಸಾಕುವ), ಮಾರಾಟ ಹಾಗೂ ಸಾಗಾಣಿಕೆ ಮಾಡುವುದನ್ನು ನಿಷೇಧ ಮಾಡಿದ್ದರೂ

ಮೀನುಗಳನ್ನು ಕಳ್ಳತನದಿಂದ ಲಾರಿಯಲ್ಲಿ ತುಂಬಿಕೊಂಡು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಅಂತಾ ಫೀರ್ಯಾದಿ ನೀಡಿದ್ದರಿಂದ ಆರೋಪಿತರ ಮೇಲೆ ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆನಂ. 170/2021 ಕಲಂ 379, 188 ಐ.ಪಿ.ಸಿ ಹಾಗೂ ಕಲಂ 15 ಫಿಶರೀಸ್ ಕಾಯ್ದೆ-2018 ಹಾಗೂ ಕಲಂ 15 ಪರಿಸರ ಸಂರಕ್ಷಣ ಕಾಯ್ದೆ 1986 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು 3 ಜನ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಪ್ರಕರಣವನ್ನು ತನಿಖೆ ಕೈ ಗೊಂಡಿರುತ್ತಾರೆ.

Please follow and like us: