ದಾನಿಷ್ ಸಿದ್ದೀಕಿ….ಆ ಕ್ಯಾಮರಾಗೆ ಕಣ್ಣು ಇತ್ತು…..

Rajaram Tallur
– – – – – – – – – –
ದಾನಿಷ್ ಸಿದ್ದೀಕಿ, ದೇಶದ ಏಕೈಕ ಪುಲಿಟ್ಝರ್ ಬಹುಮಾನ (2017) ವಿಜೇತ ಫೋಟೋ ಜರ್ನಲಿಸ್ಟ್ ಇನ್ನಿಲ್ಲ.
ರಾಯಿಟರ್ಸ್ ಸುದ್ದಿಸಂಸ್ಥೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಸಿದ್ದಿಕಿ, ನಿನ್ನೆ ಅಫ್ಘಾನಿಸ್ತಾನದಲ್ಲಿ ಅಲ್ಲಿನ ಮಿಲಿಟರಿ ಮತ್ತು ತಾಲಿಬಾನ್ ಪಡೆಗಳ ನಡುವಿನ ಕಾದಾಟದ ನಡುವೆ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಲೇ ಜೀವ ತೆತ್ತರು.

(https://www.reuters.com/…/reuters-journalist-killed…/ )


ರೋಹಿಂಗ್ಯಾಗಳು ಬಾಂಗ್ಲಾ-ಮಯನ್ಮಾರ್ ನಡುವೆ ಅತಂತ್ರರಾಗಿರುವ ಸ್ಥಿತಿಯನ್ನು ತನ್ನ ಮಾತನಾಡುವ ಚಿತ್ರಗಳ ಮೂಲಕ ಜಗತ್ತಿಗೆ ತೆರೆದುಕೊಟ್ಟ ದಾನಿಷ್ ಅವರ ಚಿತ್ರಗಳು ತೀರಾ ಇತ್ತೀಚೆಗೆ ಸುದ್ದಿ ಮಾಡಿದ್ದೆಂದರೆ, CAA ಚಳುವಳಿಯ ಸಮಯದಲ್ಲಿ ಪಿಸ್ತೂಲು ತೋರಿಸಿ ಸುದ್ದಿ ಮಾಡಿದ ವ್ಯಕ್ತಿಯ ಎದುರು ನಿಂತು ಚಿತ್ರ ಕ್ಲಿಕ್ಕಿಸಿ ತನ್ನ ಕ್ಯಾಮರಾಗೆ ಕಣ್ಣು ಮಾತ್ರವಲ್ಲ, ಗುಂಡಿಗೆಯೂ ಇದೆ ಎಂದು ತೋರಿಸಿದಾಗ.


ಅದಕ್ಕಿಂತಲೂ ಇತ್ತೀಚೆಗೆ ಅಂದರೆ, ಕೊರೊನಾ ಎರಡನೆಯ ಅಲೆಯ ಕಾಲದಲ್ಲಿ ದಿಲ್ಲಿಯಲ್ಲಿ ಸಾಮೂಹಿಕ ಶವಸಂಸ್ಕಾರದ ಚಿತ್ರಗಳು ಮತ್ತು ಆಮ್ಲಜನಕಕ್ಕಾಗಿ ಚಡಪಡಿಸುತ್ತಿದ್ದ ಜೀವಗಳ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒಂದೂ ಮಾತಿಲ್ಲದೆ ದೇಶಕ್ಕೆ ಮತ್ತು ಜಗತ್ತಿಗೆ ಅರ್ಥ ಮಾಡಿಸುವ ಮೂಲಕ.
ಹೋಗಿಬನ್ನಿ ದಾನಿಷ್.🙏 ನಿಮ್ಮಂತಹ ಕಸುಬುದಾರರು ಸಿಗುವುದು ಬಹಳ ಬಹಳ ಅಪರೂಪ.
(ಆಸಕ್ತರು ನಮ್ಮ ಕಾಲದ ಮಹತ್ವದ ಫೋಟೋ ಜರ್ನಲಿಸ್ಟ್ ದಾನಿಷ್ ಅವರ ಕಸುಬುದಾರಿಕೆಯನ್ನು ಅವರ ವೆಬ್‌ಸೈಟಿನಲ್ಲಿ ಕಾಣಬಹುದು: (https://www.danishsiddiqui.net/)

Please follow and like us:
error