ಪಿಎಂ ನರೇಂದ್ರ ಮೋದಿಯವರನ್ನು ಭೇಟಿಯಾದ ಶರದ್ ಪವಾರ್


ನವದೆಹಲಿ : ರಾಜ್ಯಸಭಾ ಸದಸ್ಯ ಹಿರಿಯ ನಾಯಕ ಶರದ್ ಪವಾರ್ ಇಂದು ಪ್ರದಾನಿ ನರೇಂದ್ರ ಮೋದಿವಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರು ನಾಯಕರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.


ನಾನು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಲ್ಲ ಎಂದು ಇತ್ತೀಚಿಗಷ್ಟೇ ಶರದ್ ಪವಾರ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಭೇಟಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋವನ್ನು ಪಿಎಂಓ ಕಚೇರಿ ಟ್ವಟರ್ ನಲ್ಲಿ ಪ್ರಕಟಿಸಿದೆ.
Please follow and like us:
error