ಸಮಾಜದ ವಿರುದ್ದ ರಾಜಕಾರಣ ಮಾಡುವುದು ಸರಿಯಲ್ಲ- ರಾಜಶೇಖರ ಹಿಟ್ನಾಳ

 

ಕೊಪ್ಪಳ :  ಈ ಹಿಂ

ದೆ ಹಲವಾರು ಸಲ ಸಂಸದರು ಅಲ್ಲಿಯೇ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಆಗ ಇಲ್ಲದ  ವಿಚಾರ ಈಗ ಯಾಕೆ? . ಅನಾವಶ್ಯಕ ಗೊಂದಲ ಮಾಡುವ ವಿಚಾರ ಇಟ್ಟುಕೊಂಡು ಮಾಡಬಾರದು. ಅದನ್ನು ನಿಲ್ಲಿಸಬೇಕು ಎನ್ನುವ ಉದ್ದೇಶದಿಂದ ಮಾಡಬಾರದು ಎಂದು ಜಿಲ್ಲಾ ಪಂಚಾಯತ್ ಮಾಜಿ  ಅಧ್ಯಕ್ಷ ರಾಜಶೇಖರ ಹಿಟ್ನಾಳ ಸಂಸದ ಕರಡಿ ಸಂಗಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Watch  video

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಸಂಗಣ್ಣ ಕರಡಿಯವರೂ ಸಂಸದರಿದ್ದಾರೆ ಅಧಿಕಾರದಲ್ಲಿದ್ಧಾರೆ.  ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ನೋಡಬಹುದು. ನಗರಸಭೆಯ ಅಧಿಕಾರಿಗಳು ಕಾನೂನು ಪ್ರಕಾರ ಪರ್ಮಿಷನ್ ತೆಗೆದುಕೊಂಡೇ ಡೆಮಾಲಿಷನ್ ಮಾಡಿದ್ದಾರೆ.   ಅವರು ಯಾಕೆ ವಿರೋಧ ಮಾಡುತ್ತಿದ್ಧಾರೋ ಗೊತ್ತಿಲ್ಲ. ಅವರಿಗೆ ನಾವೂ ಸಹ ಮನವಿ ಮಾಡುತ್ತೇವೆ. ಈ ತರ ಸಮಾಜದ ವಿರುದ್ದ ರಾಜಕಾರಣ ಮಾಡುವುದು ಸರಿ ಅಲ್ಲ. ಅವರೂ ಕೂಡ ಬಂದು ನೋಡಲಿ. ಈಗಾಗಲೇ ಕಾಂಪ್ಲೆಕ್ಸ್ ಗೆ ಟೆಂಡರ್ ಕರೆದಿದ್ದಾರೆ. ಅನಾವಶ್ಯಕ ಗೊಂದಲ ಮಾಡುವ ವಿಚಾರ ಇಟ್ಟುಕೊಂಡು ಮಾಡಬಾರದು. ಅದನ್ನು ನಿಲ್ಲಿಸಬೇಕು ಎನ್ನುವ ಉದ್ದೇಶದಿಂದ ಮಾಡಬಾರದು . ದಾರ್ಶನಿಕರ ಸರ್ಕಲ್ ಮಾಡುವುದನ್ನು ವಿರೋಧ ಮಾಡಿದರೆ ಸಮಾಜ ಇದನ್ನು ಕಠೋರವಾಗಿ ವಿರೋಧ ಮಾಡುತ್ತದೆ ಎಂದು ಹೇಳಿದರು.  ಕನಕದಾಸರು ಒಂದು  ಸಮುದಾಯಕ್ಕೆ ಸೀಮಿತರಾದವರಲ್ಲ. ಸಂಸದರು ತಪ್ಪು ಮಾಡಿದ್ದರೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

Please follow and like us: