ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬೆಣಕಲ್‌ನ ಶಿಲಾಸಮಾಧಿಗಳು

-ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್

ಮೊನ್ನೆ ವಿಶ್ವಸಂಸ್ಥೆಯ ಯುನೆಸ್ಕೋ ಅಂಗ ಸಂಸ್ಥೆಯು ವಿಶ್ವಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯಿಂದ ಭಾರತದ ಒಂಬತ್ತು ಪ್ರಮುಖ ಸ್ಥಳಗಳನ್ನು ಗುರುತಿಸಿ UಓಇSಅಔ (ಯುನೆಸ್ಕೋ) ಸಂಸ್ಥೆಗೆ ಸಲ್ಲಿಸಲಾಗಿತ್ತು. ಅದರಲ್ಲಿ ಆರು ಪ್ರಮುಖ ಸ್ಥಳಗಳಿಗೆ ಮಾತ್ರ ತಾತ್ಕಾಲಿಕ ಮಾನ್ಯತೆಯನ್ನು ನೀಡಿದೆ. ಇದರೊಂದಿಗೆ ಈಗಾಗಲೇ ಭಾರತದಲ್ಲಿದ್ದ ೩೦ ವಿಶ್ವಪಾರಂಪರಿಕ ಸ್ಥಳಗಳ ಜೊತೆಗೆ ಈಗಿನ ಆರು ತಾಣಗಳನ್ನು ಸೇರಿಸಿ ಒಟ್ಟು ೩೬ ತಾಣಗಳಿಗೆ ಮಾನ್ಯತೆ ನೀಡಿದಂತಾಗುತ್ತದೆ.

ಪ್ರಸ್ತುತ ಆ ಆರು ತಾಣಗಳನ್ನು ಹೆಸರಿಸುವುದಾದರೆ, ಮಧ್ಯಪ್ರದೇಶದ ಎರಡು ಸ್ಥಳಗಳಾದ ಸಾತ್ಪುರ ಹುಲಿ ಸಂರಕ್ಷಣಾ ಪ್ರದೇಶ ಹಾಗೂ ನರ್ಮದಾ ನದಿ ಕಣಿವೆಯ ಬೇಡಾಘಾಟ್-ಲಾಮ್ತಾಘಾಟ್, ಉತ್ತರ ಪ್ರದೇಶದ ವಾರಣಾಸಿಯ ಗಂಗಾನದಿಯ ದಡದಲ್ಲಿರುವ ಘಾಟ್‌ಗಳು, ಮಹಾರಾಷ್ಟçದ ಮರಾಠಾ ಮಿಲಿಟರಿ ಪಾರಂಪರಿಕ ಕಟ್ಟಡದ ವಾಸ್ತುಶಿಲ್ಪ, ತಮಿಳುನಾಡಿನ ಕಾಂಚಿಪುರAನ ದೇವಾಲಯಗಳು ಹಾಗೂ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್‌ನ ಬೆಟ್ಟದ ಮೇಲಿರುವ ಶೀಲಾಸಮಾಧಿಗಳು. ಹೀಗೆ ಒಟ್ಟು ಆರು ಪ್ರಮುಖ ಸ್ಥಳಗಳಿಗೆ ತಾತ್ಕಾಲಿಕ ಮಾನ್ಯತೆಯನ್ನು ನೀಡಿದೆ. ಮುಂದೆ ಅವುಗಳಿಗೆ ಖಾಯಂ ಆಗಿ ವಿಶ್ವಪಾರಂಪರಿಕ ಸ್ಥಾನ-ಮಾನ ನೀಡಿದರೆ ಅವುಗಳ ಘನತೆಯನ್ನು ವಿಶ್ವಕ್ಕೆ ಪರಿಚಯಿಸಿದಂತಾಗುತ್ತದೆ.
ಕರ್ನಾಟಕದ ಹಿರೇಬೆಣಕಲ್ ಶಿಲಾಸಮಾಧಿಗಳು ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದರೆೆ, ಕರ್ನಾಟಕದಲ್ಲಿ ಒಟ್ಟು ಇಲ್ಲಿಯವರೆಗೆ ನಾಲ್ಕು ಪ್ರಮುಖ ಸ್ಥಳಗಳು ವಿಶ್ವಮಾನ್ಯತೆಯನ್ನು ಪಡೆದಂತಾಗುತ್ತದೆ. ೧೯೮೬ರಲ್ಲಿ ಹಂಪಿ, ೧೯೮೭ರಲ್ಲಿ ಪಟ್ಟದಕಲ್ಲು, ೨೦೧೨ರಲ್ಲಿ ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟçದ ಗಡಿಯಲ್ಲಿ ವಿಶಾಲವಾಗಿ ಹರಡಿಕೊಂಡಿಕೊAಡಿರುವ ಪಶ್ಚಿಮ ಘಟ್ಟಗಳು ಮತ್ತು ಪ್ರಸ್ತುತವಾಗಿ ೨೦೨೧ರಲ್ಲಿ ಹಿರೇಬೆಣಕಲ್ ಬೆಟ್ಟದ ಮೇಲಿರುವ ಶಿಲಾಸಮಾಧಿಗಳು. ಹೀಗೆ ಕರ್ನಾಟಕದ ಒಟ್ಟು ನಾಲ್ಕು ಪ್ರಮುಖ ಸ್ಥಳಗಳಿಗೆ ವಿಶ್ವಪಾರಂಪರಿಕ ಸ್ಥಾನ-ಮಾನ ದೊರಕುವುದು ಅಭಿಮಾನದ ಸಂಗತಿ. ಮಧ್ಯಪ್ರದೇಶ ಮತ್ತು ಮಹಾರಾಷ್ಟçದಲ್ಲಿ ತಲಾ ಐದು ಸ್ಥಳಗಳಿಗೆ ಮಾನ್ಯತೆ ದೊರಕಿದರೆ; ತಮಿಳುನಾಡು ಮತ್ತು ಕರ್ನಾಟಕದ ಪ್ರಮುಖ ನಾಲ್ಕು ಸ್ಥಳಗಳು ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆಯತ್ತಿರುವುದು ಅಭಿಮಾನದ ಸಂಗತಿಯಾಗಲಿದೆ.
ಬೆಣಕಲ್ ಎಂಬ ಗ್ರಾಮನಾಮದ ಮೇಲೆ ಕರ್ನಾಟಕದಲ್ಲಿ ಅನೇಕ ಸ್ಥಳಗಳನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲಾ ಕೊಪ್ಪಳ ಜಿಲ್ಲೆಯಲ್ಲಿಯೇ ನಾಲ್ಕು ಗ್ರಾಮಗಳು ದೊರೆಯುತ್ತವೆ. ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಒಂದು ಬೆಣಕಲ್ ಗ್ರಾಮವಿದ್ದರೆ; ಗಂಗಾವತಿ ತಾಲ್ಲೂಕಿನಲ್ಲೇ ಮೂರು ಬೆಣಕಲ್ ಗ್ರಾಮಗಳಿವೆ. ಹಿರೇಬೆಣಕಲ್, ಚಿಕ್ಕಬೆಣಕಲ್ ಹಾಗೂ ಹೊಸಹಿರೇಬೆಣಕಲ್ ಎಂಬ ಮೂರು ಗ್ರಾಮಗಳನ್ನು ಕಾಣಬಹುದಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿರುವ ಈ ಮೂರೂ ಗ್ರಾಮಗಳು ಸುಮಾರು ೪-೫ ಕಿ.ಮೀ ಸುತ್ತಳತೆಯಲ್ಲೇ ಹರಡಿಕೊಂಡಿವೆ. ಜಿಲ್ಲೆಯಲ್ಲಿರುವ ಆ ಎಲ್ಲಾ ಬೆಣಕಲ್ ಗ್ರಾಮಗಳಲ್ಲಿ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿರುವ ಗ್ರಾಮವೆಂದರೆ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮ ಎನ್ನಬಹುದು. ಬಹುಶಃ ಪ್ರಾಚೀನ ಕಾಲದಲ್ಲಿ ಆದಿಮಾನವರು ಬೆಣಕಲ್ ಬೆಟ್ಟದ ಮೇಲೆ ವಾಸವಾಗಿದ್ದರು. ನಂತರ ಕಾಲ ಬದಲಾದಂತೆ ಬೆಟ್ಟದ ಮೇಲಿಂದ ಕೆಳಗೆ ಬಂದು ನೆಲಸಿದ್ದಾರೆ. ಪ್ರಾಕೃತಿಕವಾಗಿ ಮತ್ತು ಬೇರೆ-ಬೇರೆ ಕಾರಣಗಳಿಂದಾಗಿ ಈ ಬೆಣಕಲ್ ಗ್ರಾಮದಿಂದ ಸುಮಾರು ೨-೩ ಕಿ.ಮೀ ದೂರದಲ್ಲಿ ಹೋಗಿ ನೆಲೆಸಿದ್ದಾರೆ. ಆ ಗ್ರಾಮವು ಚಿಕ್ಕಬೆಣಕಲ್ ಗ್ರಾಮವಾಗಿ, ಮೂಲದ್ದು ಹಿರೇಬೆಣಕಲ್ ಗ್ರಾಮವಾಗಿರಬೇಕು. ಅದಕ್ಕೆ ಸರಿಯಾದ ಸಾಕ್ಷಾö್ಯಧಾರಗಳು ದೊರೆಯುತ್ತಿಲ್ಲಾ. ರಾಜ್ಜದಲ್ಲಿ ಈ ರೀತಿಯ ಬಹುತೇಕ ಗ್ರಾಮಗಳನ್ನು ಕಾಣಬಹುದಾಗಿದೆ. ಆದರೂ ಹಿರೇಬೆಣಕಲ್ ಮತ್ತು ಚಿಕ್ಕಬೆಣಕಲ್ ಎರಡೂ ಗ್ರಾಮಗಳು ಪ್ರಾಚಿನತೆಯನ್ನು ಹೊಂದಿದ ಗ್ರಾಮಗಳಾಗಿವೆ. ತೀರಾ ಇತ್ತೀಚಗೆ ಹಿರೇಬೆಣಕಲ್ ಗ್ರಾಮದಿಂದ ಕೆಲ ಗ್ರಾಮಸ್ಥರು ಸ್ಥಳಾಂತರಗೊAಡು ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯ ಹತ್ತಿರ ಹೊಸಹಿರೇಬೆಣಕಲ್ ಗ್ರಾಮವನ್ನು ನಿರ್ಮಿಸಿಕೊಂಡಿದ್ದಾರೆ.
ಈ ಹಿರೇಬೆಣಕಲ್ ಗ್ರಾಮವು ಕೊಪ್ಪಳ ಜಿಲ್ಲಾ ಕೇಂದ್ರದಿAದ ಸುಮಾರು ೪೦ ಕಿ.ಮೀ ದೂರದಲ್ಲಿದ್ದರೆ; ತಾಲ್ಲೂಕು ಕೇಂದ್ರವಾದ ಗಂಗಾವತಿಯಿAದ ಸುಮಾರು ೯-೧೦ ಕಿ.ಮೀ ಅಂತರದಲ್ಲಿದೆ. ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಿಂದ ಸುಮಾರು ೩-೪ ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. ಈ ಹಿರೇಬೆಣಕಲ್ ಗ್ರಾಮದಿಂದ ಸುಮಾರು ೧-೨ ಕಿ.ಮೀ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಎತ್ತರವಾದ ಬೆಟ್ಟದಲ್ಲೇ ಪ್ರಾಗೈತಿಹಾಸದ ಶಿಲಾಸಮಾಧಿಗಳಿವೆ. ಅಲ್ಲಿ ಸುಮಾರು ೬೦೦ಕ್ಕೂ ಅಧಿಕ ಶಿಲಾಸಮಾಧಿಗಳಿದ್ದವೆಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತವಾಗಿ ಸುಮಾರು ೫೦೦ ಶಿಲಾಸಮಾಧಿಗಳು ಮಾತ್ರ ಉಳಿದಿರಬಹುದೆಂದು ಅಂದಾಜಿಸಲಾಗಿದೆ. ಉಳಿದಿರುವ ಅವುಗಳಲ್ಲಿಯೇ ಬಹುತೇಕ ಬಿದ್ದುಹೋದ, ಒಡೆದ, ಹಾಳಾದ ವಿನಾಶದ ಸ್ಥಿತಿಯಲ್ಲಿರುವಂತೆ ಆ ಶಿಲಾಸಮಾಧಿಗಳು ಕಂಡುಬರುತ್ತವೆ.
ಪ್ರಾಚೀನ ಕಾಲದಲ್ಲಿ ಆದಿಮಾನವರು ಈ ಬೆಟ್ಟದ ಮೇಲೇಯೇ ವಾಸವಾಗಿದ್ದರೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಅವರು ವಾಸವಾಗಿದ್ದ ಗುಹೆಗಳನ್ನು ಇಂದಿಗೂ ಸಹ ಕಾಣಬಹುದಾಗಿದೆ. ಕ್ರಿ. ಪೂ ಸುಮಾರು ೧೦೦೦ ರಿಂದ ೨೦೦ಕ್ಕೆ ಸಂಬAಧಿಸಿದ ಶಿಲಾ-ತಾಮ್ರಯುಗಕ್ಕೆ ಸಂಬAಧಪಟ್ಟ ಸಂಸ್ಕೃತಿಯ ಬೂದಿದಿಬ್ಬ, ಗುಹಾಚಿತ್ರಗಳು ದೊರಕಿವೆ. ಇವುಗಳಲ್ಲದೇ ಆದಿಮಾನವರು ಉಪಯೋಗಿಸುತ್ತಿದ್ದ ಮಡಕೆ ಭಾಗದ ಚೂರುಗಳು, ನೀಳಚಕ್ಕೆ, ಶಿಲಾಗಟ್ಟಿಗಳು ದೊರಕಿವೆ. ವಿಶೇಷವಾಗಿ ಅನೇಕ ಗವಿವರ್ಣ ಚಿತ್ರಗಳನ್ನೂ ಸಹ ಕಾಣಬಹುದಾಗಿದೆ. ೧೯೨೫ರಲ್ಲಿ ಈ ಗವಿ ಚಿತ್ರಗಳನ್ನು ಮೊಟ್ಟ ಮೊದಲ ಬಾರಿಗೆ ಶೋಧಿಸಿದವರು ಆಂಗ್ಲ ಭೂರ್ಗಭಶಾಸ್ತçಜ್ಞರಾದ ಲಿಯೋನಾರ್ಡ್ಮನ್ ಅವರು. ನಂತರ ೧೯೯೯ ರಲ್ಲಿ ಪುರಾತತ್ವ ಸಂಶೋಧಕರಾದ ಡಾ. ಅ.ಸುಂದರ ಅವರು ಸಂಶೋಧಿಸಿದ್ದಾರೆ. ಆನಂತರದಲ್ಲಿ ಡಾ.ಶರಣಬಸಪ್ಪ ಕೋಲ್ಕಾರ್ ಅವರೂ ಸಹ ಈ ಪರಿಸರದಲ್ಲಿರುವ ಅನೇಕ ಗವಿವರ್ಣ ಚಿತ್ರಗಳ ಮೇಲೆ ವಿಸ್ತಾರವಾದ ಅಧ್ಯಯನ ಮಾಡಿ, ಅವುಗಳನ್ನು ಹೊರಜಗತ್ತಿಗೆ ಪರಿಚಯಿಸುವ ಕೆಲಸಮಾಡಿದ್ದಾರೆ. ಈ ಗವಿಗಳಲ್ಲಿ ಆದಿಮಾನವರು ತಮ್ಮ ಸಾಂಸ್ಕೃತಿಕ ಬದುಕುಗಳನ್ನು ಈ ಚಿತ್ರಗಳ ಮೂಲಕ ಅನಾವರಣಗೊಳಿಸಿದ್ದಾರೆ. ಅವುಗಳಲ್ಲಿ ಬಹಳ ಮುಖ್ಯವಾಗಿ ಭೇಟೆಯಾಡುವ, ನೃತ್ಯಮಾಡುವ ಮುಂತಾದ ಜೀವನ ಶೈಲಿಯ ಅನಾವರಣದ ಚಿತ್ರಗಳಾಗಿವೆ. ಅಲ್ಲದೆ ಹಂದಿ, ಹುಲಿ, ಗೂಳಿ, ನವಿಲು ಮುಂತಾದ ಪ್ರಾಣಿಗಳ ಚಿತ್ರಗಳನ್ನೂ ಸಹ ಬಿಡಿಸಿ ಅವರು ತಮ್ಮ ಕಲಾವಂತಿಕೆಯನ್ನು ಮೆರೆದಿದ್ದಾರೆ. ಅವು ಬೃಹತ್ ಆದಿಶಿಲಾಯುಗಕ್ಕೆ ಸಂಬAಧಿಸಿದವುಗಳಾಗಿರುವುದರಿAದ ಇವುಗಳ ಕಾಲ ಕ್ರಿ.ಪೂ. ಸುಮಾರು ೧೦೦೦ ರಿಂದ ೫೦೦ ವರ್ಷಗಳಕ್ಕೂ ಹಿಂದಿನವುಗಳೆAದು ಸಂಶೋಧಕರು ಊಹಿಸಿದ್ದಾರೆ.
ಈ ಗ್ರಾಮವನ್ನು ಹಿರೇಬೆಣಕಲ್, ಹಿರೇಬೆಣಕಲ್ಲು ಎಂಬ ಹೆಸರುಗಳಿಂದ ಸಂಭೋದಿಸಲಾಗುತ್ತಿದೆ. ಆದರೆ ಶಾಸನಗಳಲ್ಲಿ ಈ ಗ್ರಾಮವನ್ನು ‘ಬೆಣ್ಣೆಕಲ್ಲು’ ಎಂದು ಉಲ್ಲೇಖಿಸಲಾಗಿದೆ. ಇದೇ ಗ್ರಾಮದಲ್ಲಿ ದೊರೆತ ಕ್ರಿ.ಶ ಸುಮಾರು ೧೭ನೇ ಶತಮಾನದ ಲಿಪಿಯುಳ್ಳ ಶಾಸನದಲ್ಲಿ ಬೆಣ್ಣೆಕಲ್ಲಿನಲ್ಲಿದ್ದ ಯಾವುದೋ ಒಂದು ದೇವರ ಮಠಕ್ಕೆ ದಾನ ನೀಡಿದಂತೆ ತಿಳಿಸುತ್ತದೆ. ಅದೇ ರೀತಿ ವಿಪ್ರದಲ್ಲಿ ದೊರೆತ ಕ್ರಿ.ಶ. ೧೦೫೯ರ ಶಾಸನದಲ್ಲಿ ಒಂದನೇ ಸೋಮೇಶ್ವರನು ಬೆಣ್ಣೆಕಲ್ಲು ನೆಲೆವೀಡಿನಲ್ಲಿದ್ದಾಗ ವಿಪ್ರದ ಶಿವ ದೇವಾಲಯಕ್ಕೆ ದಾನ ನೀಡಿದ ವಿವರವಿದೆ. ಪ್ರಸ್ತುತ ಶಾಸನದಿಂದ ಈ ಬೆಣ್ಣೆಕಲ್ಲು ಗ್ರಾಮವು ಪ್ರಾಚೀನ ಕಾಲದಲ್ಲಿ ನೆಲೆವೀಡಾಗಿತ್ತೆಂದು ತಿಳಿದುಬರುತ್ತದೆ. ಅರಸರು, ಮಂತ್ರಿ-ಮಾAಡಳಿಕರು ಪ್ರವಾಸದ ಸಂದರ್ಭದಲ್ಲಿ ಉಳಿದುಕೊಳ್ಳುವ ತಾಣಗಳನ್ನು ಸಾಮಾನ್ಯವಾಗಿ ನೆಲೆವೀಡು ಅಥವಾ ನೆಲೆಬೀಡು ಎಂಬ ಉಲ್ಲೇಖಗಳು ಶಾಸನದಿಂದ ತಿಳಿದುಬರುತ್ತದೆ. ಹೀಗಾಗಿ ಚಾಲುಕ್ಯದೊರೆ ಸೋಮೇಶ್ವರನು ಈ ಹಿರೇಬೆಣಕಲ್ ಗ್ರಾಮದಲ್ಲಿ ಉಳಿದಿದ್ದನೆಂದು ಪ್ರಸ್ತುತ ಶಾಸನದಿಂದ ತಿಳಿದುಬರುತ್ತದೆ. ಈ ಗ್ರಾಮವನ್ನು ಶಾಸನದಲ್ಲಿ ಬೆಣ್ಣೆಕಲ್ಲು ಎಂದು ಸಂಭೋದಿಸಿರುವುದರಿAದ ಇಲ್ಲಿನ ಕಲ್ಲುಗಳು ಬೆಣ್ಣೆಯಂತೆ ಇದ್ದಿರಬೇಕು ಎಂದೆನಿಸುತ್ತದೆ. ಆಕೃತಿಗೆ ತಕ್ಕಂತೆ ಇಲಿನ ಕಲ್ಲುಗಳು ಒಗ್ಗುತ್ತಿರಬೇಕು, ಆದ್ದರಿಂದಲೇ ಇಲ್ಲಿ ಕಲ್ಲಿನಲ್ಲಿ ಆಕೃತಿ-ಆಕೃತಿಯಾಗಿ ನೂರಾರು ಶಿಲಾಸಮಾಧಿಗಳನ್ನು ನಿರ್ಮಿಸಿರಬೇಕು ಎನಿಸುವುದು ಸಹಜ. ಬಹುತೇಕವಾಗಿ ಗ್ರಾಮನಾಮಗಳ ಹೆಸರುಗಳು ಪ್ರಾಕೃತಿಕವಾಗಿಯೇ ಇರುವ ಬೆಟ್ಟ-ಗುಡ್ಡ, ಹಳ್ಳ-ನದಿಗಳ, ತಗ್ಗು-ದಿನ್ನೆಗಳ ಮೇಲೆ ಗುರುತಿಸಿಕೊಳ್ಳುತ್ತವೆ ಮತ್ತು ಹಾಗೇಯೇ ಕರೆಸಿಕೊಳ್ಳುತ್ತವೆ. ಹೀಗಾಗಿಯೇ ಈ ಗಾಮದ ಹೆಸರು ಬೆಣ್ಣೆಕಲ್ಲು ಮತ್ತು ಆ ಕಲ್ಲುಗಳಿಂದಲೇ ಶಿಲಾಸಮಾಧಿಗಳ ನಿರ್ಮಾಣದ ಕೆಲಸ ಸಹಜವಾಗಿ ನಡೆದುಕೊಂಡು ಬಂದಿರಬೇಕು ಎನಿಸುತ್ತದೆ.
ಈ ಹಿರೇಬೆಣಕಲ್ ಗ್ರಾಮದ ಬೆಟ್ಟದ ಮೇಲೆ ಸುಮಾರು ೫೦೦ ಶಿಲಾಸಮಾಧಿಗಳು ಉಳಿದಿರಬಹುದೆಂದು ಅಂದಾಜಿಸಲಾಗಿದೆ. ಉಳಿದವುಗಳಲ್ಲಿಯೂ ಸಹ ಬಹುತೇಕ ನಾಶವಾದ ಸ್ಥಿತಿಯಲ್ಲಿರುವಂತೆ ಕಂಡುಬAದರೂ ಸಹ ಅವು ತಮ್ಮ ಒಡಲೊಳಗೆ ಇಟ್ಟುಕೊಂಡಿರುವ ಇತಿಹಾಸವನ್ನು ಸಾರಿ ಸಾರಿ ಹೇಳುತ್ತವೆ. ಈ ಶಿಲಾಸಮಾಧಿಗಳನ್ನು ಕಲ್ಲುಗೋರಿಗಳು, ಕಲ್ಗೋರಿಗಳು, ಕಲ್‌ಗೋರಿಗಳು. ಮೋರೆರ್ ಮನೆಗಳು, ಮೌರೆರ್ ಮನೆಗಳು, ಮೌರ್ಯರ ಮನೆಗಳು, ಡಾಲ್ಮನ್ಸ್ಗಳು, ಆಂತ್ರೋಪಮೆಟ್ರಿಕ್ ಎಂಬ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಈ ಶಿಲಾಸಮಾಧಿಗಳು ವಾಸ್ತವದಲ್ಲಿ ಸತ್ತವರ ಸಮಾಧಿಗಳೇ ಹೌದು. ಪ್ರಾಚೀನ ಕಾಲದಲ್ಲಿ ಮೋರೆರ್ ಎಂಬ ಒಂದು ಬುಡಕಟ್ಟು ಸಮುದಾಯವಿತ್ತು. ಅವರು ಸತ್ತ ಬಳಿಕ ಇಂತಹ ಬೃಹತ್ ಶಿಲಾಸಮಾಧಿಗಳನ್ನು ನಿರ್ಮಿಸುತ್ತಿದ್ದರು. ಅದಕ್ಕಾಗಿಯೇ ಆ ಸಮಾಧಿಗಳಿಗೆ ಮೋರೇರ್ ಸಮಾಧಿಗಳು ಅಥವಾ ಮೋರೇರ್ ಮನೆಗಳು ಎಂದು ಕರೆಯಲಾಗಿತ್ತಿದೆ ಎಂದು ಹೇಳಲಾಗುತ್ತಿದೆ. ಆದಿಕಾಲದಲ್ಲಿ ಮಾನವರು ಸತ್ತಬಳಿಕ ವಿಧಿವತ್ತಾಗಿ ಇಲ್ಲಿ ಶವಸಂಸ್ಕಾರ ಮಾಡುತ್ತಿದ್ದರು. ಅವರು ಸತ್ತಬಳಿಕ ಅವರ ಆತ್ಮಗಳು ಇಲ್ಲೇ ಉಳಿದುಕೊಳ್ಳುತ್ತವೆ, ಇಲ್ಲಿಯೇ ತಿರುಗಾಡುತ್ತಿರುತ್ತವೆ ಎಂದು ಭಾವಿಸುತ್ತಿದ್ದರು. ಅದಕ್ಕಾಗಿಯೇ ಸತ್ತವರಿಗೆ ಸುಸಜ್ಜಿತ ಮತ್ತು ಸುವ್ಯವಸ್ಥಿತವಾಗಿ ಕಲ್ಲಿನ ಶಿಲಾಸಮಾಧಿಗಳನ್ನು ನಿರ್ಮಿಸುತ್ತಿದ್ದರು. ಸಂಶೋಧಕರರಾದ ಡಾ.ಶರಣಬಸಪ್ಪ ಕೋಲ್ಕಾರ್ ಅವರ ಸಂಶೋಧನೆಯAತೆ ಇಲ್ಲಿ ಎಂಟು ರೀತಿಯ ಶಿಲಾಸಮಾಧಿಗಳನ್ನು ಕಾಣಬಹುದಾಗಿದೆ. ಅವು ಕೋಣೆಯಂತೆ (ವೃತ್ತಾಕಾರದಲ್ಲಿರುತ್ತವೆ) ಕಂಡಿ (ಕಿಂಡಿ) ಸಹಿತ ಅಥವಾ ರಹಿತ ಪೆಟ್ಟಿಗೆಯಾಕಾರದ ಸಮಾಧಿಗಳು ಬಹು ಸಂಖ್ಯೆಯಲ್ಲಿವೆ. ಅವು ಸುಮಾರು ೨೫ ಅಡಿಯ ಅಸಮಭುಜ ಶಿಲಾಕೋಣೆಗಳು ಅಚ್ಚರಿಯ ನಿರ್ಮಿತಿಗಳಾಗಿವೆ. ನೈಸರ್ಗಿಕ ದೊಡ್ಡ ಬಂಡೆಯ ಹಲಗೆಗಳನ್ನು ಚಚ್ಚೌಕಾಕಾರದಲ್ಲಿ ಒಂದಕ್ಕೊAದು ಪೂರಕವಾಗಿ ನಿಲ್ಲಿಸಿ ಮೇಲೆ (ಚತ್ತು) ಚಪ್ಪಡಿಯ ಕಲ್ಲನ್ನು ಹಾಕಲಾಗಿದೆ. ಇವು ಸುಮಾರು ೯ ಅಡಿ ಎತ್ತರವಾಗಿ ನಿರ್ಮಾಣಗೊಂಡಿವೆ ಎಂದು ಡಾ.ಶರಣಬಸಪ್ಪ ಕೋಲ್ಕಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿರುವ ಶಿಲಾಸಮಾಧಿಗಳು ಸುಮಾರು ೭-೮ ಅಡಿಯ ಚಚ್ಚೌಕಾಕಾರದಲ್ಲಿ ನಿರ್ಮಾಣಗೊಂಡ ಮನೆಯಂತೆ ಕಾಣುತ್ತವೆ. ಅದರಲ್ಲಿ ಕೆಲವೊಂದು ಒಂದು, ಎರಡು ಮತ್ತು ಮೂರು ಚಪ್ಪಟೆ ಬಂಡೆಗಳಿAದ ನಿಲಾಕಾರದಲ್ಲಿ ನಿಂತಿದ್ದರೆ; ಇನ್ನು ಕೆಲವು ಸುತ್ತಲೂ ನಾಲ್ಕು ನೀಳ ಕಲ್ಲುಗಳಿಂದ ನಿಂತು, ಮೇಲೆ ಒಂದು ಹಾಸುಬಂಡೆ (ಚತ್ತು) ಇರುವುದು ಕಂಡುಬರುತ್ತದೆ. ಅವುಗಳನ್ನು ನೋಡಿದರೆ ಸಹಜವಾಗಿಯೇ ಅವು ಮನೆಯ ಆಕಾರದಂತೆ ಕಂಡುಬರುತ್ತವೆ. ಕೆಲವೊಂದು ಸಮಾಧಿಗಳು ನಿಲಾಕಾರದಲ್ಲಿ ನಿಲ್ಲಿಸಿದ ನಿಲಾಬಂಡೆಗಳಲ್ಲಿ ಸುಮಾರು ೧-೨ ಅಡಿಯ ವೃತ್ತಾಕಾರದಲ್ಲಿ ಕಿಂಡಿ (ಕಂಡಿ)ಗಳನ್ನು ಕೊರೆಯಲಾಗಿದೆ. ಅವರು ಸತ್ತ ಬಳಿಕ ಶವಸಂಸ್ಕಾರದ ನಂತರ ಅವರ ಆತ್ಮಗಳು ಈ ಕಿಂಡಿಗಳ ಮೂಲಕವೇ ಹೊರಬಂದು ತಮ್ಮ ಇಷ್ಟ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಿದ್ದವೆಂದು ನಂಬಲಾಗಿತ್ತು. ಆದ್ದರಿಂದಲೇ ಆದಿಮಾನವರು ಇಂತಹ ಶಿಲಾಸಮಾಧಿಗಳನ್ನು ನಿರ್ಮಿಸಿ ಅವುಗಳಲ್ಲಿ ಕಿಂಡಿಗಳನ್ನು ಬಿಡುತ್ತಿದ್ದರು. ಆ ಶಿಲಾಸಮಾಧಿಗಳ ಮುಂದೆ ಅವರು ಇಷ್ಟಪಡುತ್ತಿದ್ದ ವಸ್ತುಗಳನ್ನು ಇಡುತ್ತಿದ್ದರಂತೆ. ಅವರ ಆತ್ಮಗಳು ಬಂದು ಆ ವಸ್ತುಗಳನ್ನು ತಿಂದು ಹೋಗುತ್ತವೆ ಎಂದು ನಂಬಲಾಗಿದೆ. ಈ ಪದ್ಧತಿಯನ್ನು ಇಂದಿಗೂ ಸಹ ಕೆಲ ಸಮುದಾಯಗಳಲ್ಲಿ ಕಾಣಬಹುದಾಗಿದೆ. ಮೂರುದಿನದ ಕೂಳು ಎಂದು ಕರೆಯಲ್ಪಡುವ ಪದ್ಧತಿಯಲ್ಲಿ ಅವರು ಇಷ್ಟ ಪಡುತ್ತಿದ್ದ ಆಹಾರಾದಿಗಳ ವಸ್ತುಗಳನ್ನು ಸಮಾಧಿಯ ಮುಂದೆ ಇಡುವ ಸಂಪ್ರಾದಾಯ ಕಾಣಬಹುದಾಗಿದೆ. ಈ ನಂಬಿಕೆಗಳ ಸಂಪ್ರದಾಯವು ಸಾವಿರಾರು ವರ್ಷಗಳಿಂದಲೂ ಮುಂದುವರೆದುಕೊAಡು ಬಂದಿರಿವುದು ವಿಶೇಷ.
ಇಲ್ಲಿರುವ ಅಷ್ಟೂ ಶಿಲಾಸಮಾಧಿಗಳು ಒಂದೇ ಸಂದರ್ಭದಲ್ಲಿ ನಿರ್ಮಾಣವಾದವುಗಳಲ್ಲಾ. ಅವು ಹಂತ ಹಂತವಾಗಿ ನಿರ್ಮಾಣವಾದ ಸ್ಮಾರಕಗಳಾಗಿವೆ. ಅವು ಯಾವ ಕಾಲದಲ್ಲಿ ನಿರ್ಮಾಣವಾದವೆಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೂ ಸಂಶೋಧಕರು ಹೇಳುವಂತೆ ಅವು ಕ್ರಿ.ಪೂ ಸುಮಾರು ೧೨೦೦ ರಿಂದ ೫೦೦ರ ಅವಧಿಯಲ್ಲಿ ನಿರ್ಮಾಣವಾಗಿರಬೇಕೇಂದು ಅಂದಾಜಿಸಲಾಗಿದೆ. ಆ ಬೆಟ್ಟದ ಮೇಲೆಯೇ ಆದಿಮಾನವರು ವಾಸವಾಗಿದ್ದರು. ಅವರು ಸತ್ತ ಬಳಿಕ ಅಲ್ಲಿ ವಿಧಿವತ್ತಾಗಿ ಶವ ಸಂಸ್ಕಾರ ಮಾಡಿ, ಶಿಲಾಸಮಾಧಿಗಳನ್ನು ನಿರ್ಮಿಸಿರುವುದು ತಿಳಿದುಬರುತ್ತದೆ. ಸಾವುಗಳು ಹಂತ ಹಂತವಾಗಿ ಸಂಭವಿಸಿರುವುದರಿAದ ಸಹಜವಾಗಿಯೇ ಆ ಶಿಲಾಸಮಾಧಿಗಳು ಹಂತ ಹಂತವಾಗಿ ನಿರ್ಮಾಣಗೊಂಡಿವೆ. ಈ ಸಮಾಧಿಗಳು ಸುಮಾರು ಒಂದು ಸಾವಿರ ವರ್ಷಗಳಕಾಲ ಒಂದೊAದು ಸಂದರ್ಭದಲ್ಲಿ ಒಂದೊAದರAತೆ ನಿರ್ಮಾಣವಾಗಿರುವುದಂತೂ ಸತ್ಯ.
ಹಿರೇಬೆಣಕಲ್ ಗ್ರಾಮದಲ್ಲಿರುವಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿಯೂ ಸಹ ಇಂತಹ ಶಿಲಾಸಮಾಧಿಗಳು ಕಂಡುಬರುತ್ತವೆ. ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಕಾಣಬಹುದಾಗಿದೆ. ಆದರೆ ಕರ್ನಾಟಕದ ಹಿರೇಬೆಣಕಲ್ ಗ್ರಾಮದಲ್ಲಿ ಇರುವಷ್ಟು ಸಂಖ್ಯೆ ದೇಶದ ಯಾವುದೇ ಭಾಗದಲ್ಲಿ ಇಲ್ಲಿಯವರೆಗೂ ಕಾಣಲು ಸಾಧ್ಯವಾಗಿಲ್ಲ. ಅಲ್ಲದೇ ಇಷ್ಟು ಬೃಹತ್ ಆಕಾರದ ಶಿಲಾಸಮಾಧಿಗಳು ಸಹ ಇಲ್ಲಿಯೇ ಕಾಣಲು ಸಾಧ್ಯ. ಹೀಗಾಗಿಯೇ ಹಿರೇಬೆಣಕಲ್ ಗ್ರಾಮದಲ್ಲಿರುವ ಶಿಲಾಸಮಾಧಿಗಳಿಗೆ ದೇಶದಲ್ಲೇ ಹೆಚ್ಚಿನ ಪ್ರಾಧಾನ್ಯತೆ ದೊರಕಿರುವುದು.
ಕೊಪ್ಪಳ ಜಿಲ್ಲೆಯ ಕೆಲ ಗ್ರಾಮಗಳಲ್ಲಿಯೂ ಸಹ ಶಿಲಾಸಮಾಧಿಗಳು ಕಂಡುಬರುತ್ತವೆ. ಚಿಕ್ಕಬೆಣಕಲ್, ಚಿಕ್ಕಮಲ್ಲಾಪುರ, ಘಟ್ಟ, ಮಳೆಮಲ್ಲೇಶ್ವರ ಪರ್ವತದ ಮೇಲೆ ಕೂಡಾ ಕಾಣಬಹುದಾಗಿದೆ. ಆ ಗ್ರಾಮಗಳಲ್ಲಿಯೂ ಸಹ ಚಿಕ್ಕ ಚಿಕ್ಕ ಗಾತ್ರದ ಮತ್ತು ಬೆರಳೆಣಿಕೆಯಷ್ಟು ಶಿಲಾಸಮಾಧಿಗಳು ಕಂಡುಬರುತ್ತವೆ. ಹೀಗಾಗಿಯೇ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೆಬೆಣಕಲ್ ಗ್ರಾಮದ ಬೆಟ್ಟದ ಮೇಲಿರುವ ಶಿಲಾಸಮಾಧಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರಕಿದೆ. ಹೀಗಾಗಿಯೇ ವಿಶ್ವಸಂಸ್ಥೆಯ UಓಇSಅಔ (ಯುನೆಸ್ಕೋ) ಅಂಗ ಸಂಸ್ಥೆಯು ತಾತ್ಕಾಲಿಕ ಮಾನ್ಯತೆ ನೀಡಿದೆ. ಅದನ್ನು ಖಾಯಂ ಆಗಿ ನೀಡಿದಾಗಲೇ ಅದಕ್ಕೆ ನ್ಯಾಯ ಒದಗಿಸಿದಂತೆ ಮತ್ತು ಅವುಗಳ ಮಹತ್ವ ವಿಶ್ವಕ್ಕೆ ಪರಿಚಯಿಸಿದಂತೆ ಆಗುತ್ತದೆ.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ : ೯೪೪೮೫೭೦೩೪೦EMail : skotnekal@gmail.com

Please follow and like us:
error