ಮೋದಿ ಸಮಾಜಕ್ಕೆ ಸ್ಲೋಪಾಯಜನ್ ಕೊಡುವ ರೀತಿ ಮಾಡುತ್ತಿದ್ದಾರೆ- ಬಯ್ಯಾಪೂರ ಆಕ್ರೋಶ

ಕೊಪ್ಪಳ :  ದೇಶಕ್ಕೆ ಪ್ರದಾನಿ ನರೇಂದ್ರ ಮೋದಿಯವರ ಕೊಡುಗೆ ಏನು ? ಅವರು ಸಮಾಜಕ್ಕೆ ಸ್ಲೋಪಾಯಜನ್ ಕೊಡುವ ರೀತಿ ಮಾಡುತ್ತಿದ್ದಾರೆ ಎಂದು  ಪ್ರದಾನಿ ನರೇಂದ್ರ ಮೋದಿಯವರ ವಿರುದ್ದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ  ಆಕ್ರೋಶ ವ್ಯಕ್ತಪಡಿಸಿದರು.

http://Click for video

https://www.facebook.com/kannadanet/videos/823754388263905/

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣಿಗಳಿಗೆ ನೈತಿಕತೆ ಇಲ್ಲ, ನೈತಿಕತೆ ಇದ್ದರೆ ಇಂತಹ ಸರಕಾರಗಳು ಬರುತ್ತಿರಲಿಲ್ಲ  ರಮೇಶ ಜಾರಕಿಹೊಳಿ ಮತ್ತಿ ಮಂತ್ರಿಯಾಗಬಹುದು   ಅವರಷ್ಟೇ ಯಾಕೆ ಹಾದಿಬೀದಿಯಲ್ಲಿ ಹೋಗುವವರು ಯಾರಾದರೂ ಮಂತ್ರಿಯಾಗಬಹುದು.  ಕಾಲ ಬದಲಾಗಿದೆ ಮುಸ್ಲಿಂರೂ ಬಿಜೆಪಿಗೆ ಓಟಾಕುವುದಿಲ್ಲವೇ, ನಮ್ಮಲ್ಲಿಯೇ ನಾಲ್ವರು ಪಟ್ಟಣ ಪಂಚಾಯತ್ ಸದಸ್ಯರಿದ್ದಾರೆ. ಹಾಗೆ ನೋಡಿದರೆ ನಾವು ಕಾಂಗ್ರೆಸ್ ನವರೇ ನಿರಂತರವಾಗಿ ಅಧಿಕಾರದಲ್ಲಿರಬೇಕಿತ್ತು.  ಯಾರು ಕೆಲಸ ಮಾಡುತ್ತಾರೋ ಅಂತಹ ಒಳ್ಳೆಯವರನ್ನು ಆಯ್ಕೆ ಮಾಡುತ್ತಾರೆ.  ಕುಷ್ಟಗಿಯ ಮಾಜಿ ಶಾಸಕರು ಅಮರೇಗೌಡರಿಗೆ ಮೋದಿಯವರನ್ನು ಬಯ್ಯುವದನ್ನು ಬಿಟ್ಟರೆ ಬೇರೆ ಕೆಲಸ  ಇಲ್ಲ ಅನ್ನುತ್ತಾರೆ.  ಬಿಜೆಪಿಗೆ ಹಿಂದುತ್ವ ಬಿಟ್ಟರೆ ಬೇರೆ ಕೆಲಸವಿಲ್ಲ ಅವರಿಗೆ ಕೆಲಸ ಮಾಡುವುದು ಗೊತ್ತಿಲ್ಲ , ಭ್ರಷ್ಟಾಚಾರದ ಆಗರವಾಗಿರುವ ಪಕ್ಷ ಕೊಪ್ಪಳದಿಂದ ದಿಲ್ಲಿಯವರೆಗೆ  ಅವರು ಮಾಡಿರುವ ಹಗರಣಗಳನ್ನು ಬಯಲಿಗೆ ತರುವ ಕೆಲಸವಾಗುತ್ತಿಲ್ಲ ಈ ದೇಶಕ್ಕೆ ಮೋದಿ ಕೊಡುಗೆಯೇನು ? ಯಾರಿಗೂ ಗೊತ್ತಾಗದ ರೀತಿಯಲ್ಲಿ ಸಮಾಜಕ್ಕೆ ಸ್ಲೋಪಾಯಜನ್ ಕೊಡುವ ರೀತಿ ಮಾಡುತ್ತಿದ್ದಾರೆ ದಲಿತರಿಗೆ, ಮೈನಾರಿಟಿಯವರಿಗೆ ಹಣ ಕೊಡುತ್ತಿಲ್ಲ  ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ಸಮುದಾಯಗಳನ್ನು ಮೇಲೆ ಎತ್ತುಕ ಕೆಲಸವಾಗಬೇಕು ಆ ಕೆಲಸ ಕಾಂಗ್ರೆಸ್ ಮಾಡಿತ್ತು. ಅದನ್ನು ಕಡಿಮೆ ಮಾಡುತ್ತಾ ಬರುತ್ತಿದ್ದಾರೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಕುರಿತು ಚರ್ಚೆ ಮಾಡುವುದು ಅಪ್ರಸ್ತುತ ಎಂದು ಹೇಳಿದರು.  ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಉಪಸ್ಥಿತರಿದ್ದರು.

Please follow and like us: