ಅಂತರ ರಾಷ್ಟ್ರೀಯ ಮಾದಕ ವಸ್ತು ದಿನಾಚರಣೆ : ಮಾದಕ ವಸ್ತುಗಳ ನಾಶ

Kannadanet ಅಂತರ್‌ರಾಷ್ಟ್ರೀಯ ಮಾದಕ ವಸ್ತು ದಿನಾಚರಣೆ ಪ್ರಯುಕ್ತ ಕೊಪ್ಪಳ ಜಿಲ್ಲೆಯಲ್ಲಿ 2014 ರಿಂದ ರವರೆಗೆ ವಿವಿಧ ಪೊಲೀಸ್ ಠಾಣೆಗಳಿಂದ 14 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಸುಮಾರು 118 Kg , 890 GramsCannabis Plants and Ganja and 3 Kg Dry Poppy Straw ಜಪ್ತಿಪಡಿಸಿಕೊಂಡಿದ್ದು , ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರಾದ ಟಿ . ಶ್ರೀಧರ , ಐ.ಪಿ.ಎಸ್ . ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸದಸ್ಯರಾದ ಶ್ರೀಮತಿ ಗೀತಾ ಬೇನಹಾಳ ಡಿ.ಎಸ್.ಪಿ. ಕೊಪ್ಪಳ ಹಾಗೂ ಆರ್.ಎಸ್ . ಉಜ್ಜನಕೊಪ್ಪ ಡಿ.ಎಸ್.ಪಿ ಗಂಗಾವತಿ , ವಾಯು ಮಾಲಿನ್ಯದ ಅಧಿಕಾರಿಗಳು , ಜೈವಿಕ ವೈದ್ಯಕೀಯ ವಿಲೇವಾರಿ ಘಟಕದ ಮುಖ್ಯಸ್ಥರು , ಪರಿಸರ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರ ರವರ ಸಮಕ್ಷಮದಲ್ಲಿ ಕುಮಾರರಾಮ ಕಮ್ಮಟ ( ಹಳೇಕುಮಟಾ ) ಗ್ರಾಮ ಹತ್ತಿರದ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪರಿಸರ ಮಾಲಿನ್ಯವಾಗದಂತೆ ವೈಜ್ಞಾನಿಕ ತಂತ್ರಜ್ಞಾನದ ಮೂಲಕ ವಿಲೇವಾರಿ ಮಾಡಲಾಯಿತು . ಈ ಸಮಯದಲ್ಲಿ ಜಿಲ್ಲಾ ಅಪರಾಧ ದಾಖಲಾತಿ ವಿಭಾಗದ ಪಿ.ಐ , ಅಯ್ಯನಗೌಡ ಪಾಟೀಲ್ , ಸಿ.ಇ.ಎನ್ ಠಾಣೆಯ ಪಿ.ಐ , ಚಂದ್ರಶೇಖರ , ಪಿ.ಎಸ್.ಎ. ರವರಾದ ಸುಪ್ರೀತ್ , ಶೀಲಾ ಮೂಗನಗೌಡರ , ಶಿವಶಂಕರಪ್ಪ ಹಾಗೂ ಡಿ.ಸಿ.ಆರ್.ಬಿ ಘಟಕದ ಸಿಬ್ಬಂದಿಯವರು , ಪರಿಸರ ಅಧಿಕಾರಿಗಳು , ಜೈವಿಕ ವೈದ್ಯಕೀಯ ವಿಲೇವಾರಿ ಘಟಕದ ಮುಖ್ಯಸ್ಥರಾದ ಚಂದ್ರು ಗಡಾದ ಹಾಜರಿದ್ದರು .

Please follow and like us: