ಹಣ ತುಂಬಿದ ಎಲ್ಲ ರೈತರಿಗೆ ಬೆಳೆ ವಿಮೆ ಸಿಗಬೇಕು-DC ವಿಕಾಸ್ ಕಿಶೋರ್ ಸುರಳ್ಕರ್

ಹಣ ತುಂಬಿದ ಎಲ್ಲ ರೈತರಿಗೂ ಬೆಳೆ ವಿಮೆ ದೊರಕಿಸಿ :


ಕೊಪ್ಪಳ, : ಹಣ ತುಂಬಿದ ಎಲ್ಲ ರೈತರಿಗೆ ಬೆಳೆ ವಿಮೆ ಸಿಗಬೇಕು. ಆಧಾರ್ ಸೇರಿದಂತೆ ಎಲ್ಲ ದಾಖಲೆಗಳು ಹೊಂದಾಣಿಕೆ ಆಗುವಂತೆ ಮಾಡಿ, ಇದರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಜೂ. 25) ಆಯೋಜಿಸಿದ್ದ ಬೆಳೆ ವಿಮೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ವಿಮೆ ನೀಡುವ ವಿಮಾ ಸಂಸ್ಥೆಗಳು ರೈತರಿಂದ ವಿಮೆ ಕಂತು ಪಾವತಿಗೆ ತೋರುವ ಆಸಕ್ತಿಯನ್ನು ರೈತರಿಗೆ ಬೆಳೆ ವಿಮೆ ನೀಡುವಲ್ಲಿ ತೋರಿಸುವುದಿಲ್ಲ. ಆದ್ದರಿಂದ ವಿಮಾ ಸಂಸ್ಥೆಗಳು ವಿಮೆ ಪಡೆಯುವ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು.  ಆಗ ಮಾತ್ರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುತ್ತಾರೆ.  ವಿಮಾ ಕಂತನ್ನು ಸಹ ಪಾವತಿ ಮಾಡುತ್ತಾರೆ.  ಆದರೆ ಬೆಳೆ ನಷ್ಟವಾದಾಗ ಅದಕ್ಕೆ ತಕ್ಕ ಬೆಳೆ ವಿಮೆಯನ್ನು ಬಹಳಷ್ಟು ರೈತರು ಪಡೆಯುವುದಿಲ್ಲ. ವಿಮಾ ಕಂಪನಿಗಳು ರೈತರಿಂದ ಬೆಳೆ ವಿಮೆ ಕಂತು ಪಾವತಿ ನಂತರ ಬೆಳೆ ವಿಮೆ ಪಡೆಯುವ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡುವುದಿಲ್ಲ.  ಕೃಷಿ ಇಲಾಖೆ ಸಿಬ್ಬಂದಿ, ತಹಶೀಲ್ದಾರರು ಕೂಡ ಈ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಿ, ವಿಮೆ ಮೊತ್ತ ಪಡೆಯಲು ಸಹಾಯ ಮಾಡಬೇಕು ಎಂದು ಅವರು ಹೇಳಿದರು.
ಬೆಳೆ ವಿಮೆ ಕುರಿತಾಗಿ ಬೆಳೆ ಸಮೀಕ್ಷೆಗೆ ನಿಯೋಜಿಸಿದ ಮೂಲ ಕಾರ್ಯಕರ್ತರೇ ಕಡ್ಡಾಯವಾಗಿ ಜಮೀನುಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ತಂತ್ರಾAಶದಲ್ಲಿ ದಾಖಲಿಸಬೇಕು.  ಈ ಸಂದರ್ಭ ವಿಮಾ ಕಂಪನಿಗಳ ಪ್ರತಿನಿಧಿಗಳೂ ಹಾಜರಿರಬೇಕು. ಗ್ರಾಮದ ರೈತ ಮುಖಂಡರು ಸಮೀಕ್ಷೆಯ ಮೂಲ ಕಾರ್ಯಕರ್ತರೊಂದಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ, ಬೆಳೆ ವಿಮೆ ಪಡೆಯುವ ವಿಧಾನದ ಕುರಿತು ರೈತರಿಗೆ ಅರಿವು ಮೂಡಿಸಬೇಕು. ಬೆಳೆ ಸಮೀಕ್ಷೆಗೆ ಹೋದಾಗ ಕನಿಷ್ಠ ಸೌಲಭ್ಯಗಳನ್ನು ಬಳಸಿಕೊಂಡು ಸಾಧಾರಣ ಬೆಳೆ ಬೆಳೆಯುವ ರೈತರನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸಬೇಕು. ಅರ್ಹ ರೈತರಿಗೆ ಬೆಳೆ ವಿಮೆ ಲಾಭ ದೊರೆಯುವಂತಾಗಬೇಕು ಎಂದು ಅವರು ಹೇಳಿದರು.
ಸಮೀಕ್ಷೆಯ ಮೂಲ ಕಾರ್ಯಕರ್ತರು ಮಳೆ ಆಶ್ರಿತ ಬೆಳೆಗಳು, ನೀರಾವರಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ಕೃಷಿ ಬೆಳೆಗಳ ನಡುವಿನ ವ್ಯತ್ಯಾಸವರಿತು ಸಂಬAಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ತಂತ್ರಾAಶದಲ್ಲಿ ದಾಖಲಿಸಬೇಕು. ಬೆಳೆ ಕಟಾವು ಸಮೀಕ್ಷೆಯಲ್ಲಿ ಕಟಾವಾದ ಬೆಳೆಯನ್ನು ಸಂಬAಧಿಸಿದ ರೈತರ ಸಮ್ಮುಖದಲ್ಲೇ ದಾಖಲಿಸಬೇಕು. ಸಮೀಕ್ಷೆಯ ಉದ್ದೇಶದಿಂದ ಬೆಳೆ ಕಟಾವು ಮಾಡುವಂತೆ ರೈತರಿಗೆ ಒತ್ತಾಯ ಮಾಡುವಂತಿಲ್ಲ. ಬೆಳೆ ವಿಮೆ ಕುರಿತು ಗೊಂದಲ, ದೂರುಗಳನ್ನು ಹೊತ್ತು ಬರುವ ರೈತರಿಗೆ ಕೃಷಿ ಇಲಾಖೆ, ವಿಮಾ ಕಂಪನಿಗಳು ಸೂಕ್ತ ಮಾರ್ಗದರ್ಶನ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಬೆಳೆ ವಿಮೆ ಮೊತ್ತವನ್ನು ಅದೇ ವರ್ಷದಲ್ಲಿ ರೈತರಿಗೆ ನೀಡುವಂತಾಗಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಬೆಳೆ ವಿಮೆಗಾಗಿ ಫ್ಯೂಚರ್ ಜನರಲ್ ವಿಮಾ ಸಂಸ್ಥೆಯು ಆಯ್ಕೆಯಾಗಿದ್ದು, ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಮೂಲ ಕಾರ್ಯಕರ್ತರು, ಕೃಷಿ ಇಲಾಖೆ, ಕಂದಾಯ ಇಲಾಖೆ, ಗ್ರಾಮ/ಹೋಬಳಿ ಮಟ್ಟದ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆಯಲ್ಲಿ ವಿಮಾ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಬೇಕು. ವಿಮೆ ಕುರಿತು ಯಾವುದೇ ಗೊಂದಲಗಳಿಗೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು.  ಬೆಳೆ ವಿಮೆ ಪಡೆಯಲು ರೈತರಿಗೆ ಜಾಗೃತಿ ಮೂಡಿಸಬೇಕು ಹಾಗೂ ರೈತರಿಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಲಭ್ಯವಿರಬೇಕು ಎಂದು ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಶಿವಕುಮಾರ ಮಾತನಾಡಿ, ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕಳೆದ ವರ್ಷ 83 ಸಾವಿರ ಜನರು ಪ್ರಿಮಿಯಂ ಹಣ ತುಂಬಿದ್ದರು. ಈ ವರ್ಷ ಜೂ. 25 ರವರೆಗೆ 3,103 ರೈತರು ಪ್ರಿಮಿಯಂ ಹಣ ತುಂಬಿದ್ದಾರೆ.  ಬೆಳೆ ವಿಮೆ ನೋಂದಾಯಿಸಲು ಇನ್ನೂ ಕಾಲವಕಾಶವಿದ್ದು, ರೈತರು ಬೆಳೆ ವಿಮೆ ನೋಂದಾಯಿಸಿಕೊಳ್ಳಬೇಕು.  ಫ್ಯೂಚರ್ ಜನರಲ್ ವಿಮಾ ಸಂಸ್ಥೆಯು ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ನಸ್ವಾಲೆ ಬಿಲ್ಡಿಂಗ್‌ನ ಮೊದಲನೇ ಮಹಡಿಯಲ್ಲಿ (ಮೊ.ಸಂ. 9591238940) ಕಾರ್ಯನಿರ್ವಹಿಸುತ್ತಿದ್ದು ರೈತರು ಈ ವಿಳಾಸದಲ್ಲಿ ವಿಮಾ ಸಂಸ್ಥೆ ಪ್ರತಿನಿಧಿಗಳನ್ನು ಭೇಟಿ ಮಾಡಬಹುದು ಎಂದರು.
ಬೆಳೆ ಕಟಾವು ಸಮೀಕ್ಷಾ ಕಾರ್ಯಕರ್ತರಿಗೆ ಮೊಬೈಲ್;
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಸಂಬAಧಿಸಿಸAತೆ ಬೆಳೆ ಕಟಾವು ಸಮೀಕ್ಷೆ ಕೈಗೊಳ್ಳುವ ಮೂಲ ಕಾರ್ಯಕರ್ತರಿಗೆ ಸಭೆಯಲ್ಲಿ ಮೊಬೈಲ್ ವಿತರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರ, ವಿವಿಧ ತಾಲ್ಲೂಕುಗಳ ತಹಶೀಲ್ದಾರರು, ವಿಮಾ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರು, ಸಂಯೋಜಕರು, ತಾಲ್ಲೂಕು ಕೃಷಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us: