ಹುಣ್ಣಿಮೆ ಹಾಗೂ ವಾರದ ದಿನಗಳಲ್ಲಿ ಹುಲಿಗಿ ದೇವಸ್ಥಾನ ಸುತ್ತಮುತ್ತ ನಿಷೇದಾಜ್ಞೆ ಜಾರಿ

ಕೊಪ್ಪಳ,

: ಕೋವಿಡ್-19 ಸೋಂಕು ತಡೆಯಲು ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಿನಗಳಂದು ಹಾಗೂ ಹುಣ್ಣಿಮೆ ದಿನದಂದು ಮುನಿರಾಬಾದ್ ಠಾಣಾ ವ್ಯಾಪ್ತಿಯ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭಕ್ತಾಧಿಗಳ ಪ್ರವೇಶ ನಿಷೇಧಿಸಲು ಹಾಗೂ ಹುಲಿಗಿ ಗ್ರಾಮದ ನದಿದಡ, ದೇವಸ್ಥಾನ, ರೈಲುನಿಲ್ದಾಣ ಸೇರಿದಂತೆ ಸುತ್ತಲು 02 ಕಿ.ಮೀ. ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. 1973ರ ಕಲಂ 144ರನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಕೊಪ್ಪಳ ಉಪವಿಭಾಗಧಿಕಾರಿ ಹಾಗೂ ಉಪವಿಭಾಗ ದಂಡಾಧಿಕಾರಿಯಾದ ನಾರಾಯಣರೆಡ್ಡಿ ಕನಕರೆಡ್ಡಿ ಅವರು ಆದೇಸ ಹೊರಡಿಸಿದ್ದಾರೆ.
ಸಾರ್ವಜನಿಕರ ಹಾಗೂ ಭಕ್ತಧಿಗಳ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-19 ಸೋಂಕು ಹರಡುವಿಕೆ ತಡೆಯುವ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ 1973ರ ಕಲಂ 144ರಲ್ಲಿ ಸರ್ಕಾರದಿಂದ ದೇವಸ್ಥಾನವನ್ನು ತೆರೆದು ದರ್ಶನಕ್ಕೆ ಅವಕಾಶ ಕಲ್ಪಿಸುವ ಆದೇಶ ಬರುವವರೆಗೆ ಹಾಗೂ ಮುಂದಿನ ಆದೇಶದವರೆಗೆ ವಾರದ ದಿನಗಳಾದ ಸೋಮವಾರ ಸಂಜೆ 5 ಗಂಟೆಯಿAದ ಮಂಗಳವಾರ ರಾತ್ರಿ 12 ಗಂಟೆಯವರೆಗೆ, ಪ್ರತಿ ಗುರುವಾರ ಸಾಯಂಕಾಲ 5 ಗಂಟೆಯಿAದ ಶುಕ್ರವಾರ ರಾತ್ರಿ 12 ಗಂಟೆಯವರೆಗೆ ಹಾಗೂ ಪ್ರತಿ ಹುಣ್ಣಿಮೆಯ ಹಿಂದಿನ ದಿನ ಸಾಯಂಕಾಲ 5 ಗಂಟೆಯಿAದ ಹುಣ್ಣಿಮೆ ದಿನ ರಾತ್ರಿ 12 ಗಂಟೆಯವರೆಗೆ ಹುಲಿಗಿ ಗ್ರಾಮದ ನದಿದಡ, ದೇವಸ್ಥಾನ, ರೈಲುನಿಲ್ದಾಣ ಸೇರಿದಂತೆ ಸುತ್ತಲು 02 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.
ದೇವಸ್ಥಾನ ಆಡಳಿತ ಮಂಡಳಿಯವರು ದೇವಸ್ಥಾನದಲ್ಲಿ ನಡೆಯುವ ದಿನನಿತ್ಯದ ದಾರ್ಮಿಕ ವಿಧಿ-ವಿಧಾನಗಳನ್ನು ಎಲ್ಲ ಮುಂಜಾಗ್ರತಾ ಕ್ರಮವಹಿಸಿ ನಡೆಸಲು ವಿನಾಯತಿ ನೀಡಿದೆ.  ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು.  ಆದೇಶವನ್ನು ಜಾರಿಗೊಳಿಸಲು ಹುಲಿಗೆಮ್ಮದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಉಪಾಧೀಕ್ಷಕರು ಕೊಪ್ಪಳ, ತಹಶೀಲ್ದಾರ್ ಕೊಪ್ಪಳ ಮತ್ತು ಸಂಬAಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Please follow and like us: