ಯಲಬುರ್ಗಾ ಸಿಪಿಐ ನಾಗರೆಡ್ಡಿ ವಿಡಿಯೋ ವೈರಲ್

 

 

ಜೀಪ್ ನ್ನು ಏಕಾಂಗಿಯಾಗಿ ಎಳೆದು ಪಕ್ಕಕ್ಕೆ ನಿಲ್ಲಿಸಿದ ಪೋಲಿಸ್ ಅಧಿಕಾರಿ . ಗುರುವಾರ ಯಲಬುರ್ಗಾದ ಸಾರ್ವಜನಿಕರ ಆಸ್ಪತ್ರೆ ಬಳಿ ನಡೆದಿದೆ. ಯಲಬುರ್ಗಾ ಸಿಪಿಐ ಸಾಹೇಬ್ರು ಕರ್ತವ್ಯದ ಮೇಲೆ ಆಸ್ಪತ್ರೆಯ ಶವಾಗಾರದ ಬಳಿ ಬಂದಿದ್ದಾರೆ. ಕೆಲಸ ಮುಗಿಸಿಕೊಂಡು ಜೀಪ್ನಲ್ಲಿ ಹೊರಡುವ ವೇಳೆ ವಾಹನ ಕೈ ಕೊಟ್ಟಿದೆ. ವಾಹನ ಚಾಲಕ ಮೆಕಾನಿಕ್ ಕರೆದುಕೊಂಡು ಬರಲು ಹೋಗಿದ್ದಾನೆ. ರಸ್ತೆ ನಡುವೆ ಇದ್ದ ಜೀಪ್ನ್ನು ಪಕ್ಕಕ್ಕೆ ನಿಲ್ಲಿಸಬೇಕೆಂದರೆ ವಾಹನ ತಳ್ಳಲು ಸುತ್ತ ಮುತ್ತ ಯಾರೂ ಇರಲಿಲ್ಲ. ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಆಗದಿರಲೆಂದು ಸಿಪಿಐ ನಾಗರೆಡ್ಡಿ ಅವರೊಬ್ಬರೇ ಬಾಹುಬಲಿ ಸಿನಿಮಾದಲ್ಲಿ ಆನೆ ರಥ ಎಳೆದಂತೆ ತಮ್ಮ ವಾಹನದ ಮುಂಭಾಗವನ್ನು ಹಿಡಿದೆಳೆದು ಪಕ್ಕಕ್ಕೆ ನಿಲ್ಲಿಸಿದ್ದಾರೆ