ವಿದ್ಯಾರ್ಥಿಗಳಿಗೆ ಐ.ಎ.ಎಸ್ , ಐ.ಪಿ.ಎಸ್ , ಕೆ.ಎ.ಎಸ್ ಪರೀಕ್ಷೆಗಳ ಕುರಿತು ಜಿಲ್ಲಾಧಿಕಾರಿಗಳಿಂದ ತರಬೇತಿ,ಮಾಹಿತಿ

ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳಾದ  ವಿಕಾಸ್ ಕಿಶೋರ್ ಸುರಳ್ಕರ್ ಐ.ಎ.ಎಸ್ ಹಾಗೂ  ಹೇಮಂತ್ ಎನ್ , ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ( 2020 ನೇ ಬ್ಯಾಚ್ )  ಆಸಕ್ತ ಅಭ್ಯರ್ಥಿಗಳಿಗೆ ನಾಗರಿಕ ಸೇವೆಗಳ ಪರೀಕ್ಷೆ ಕುರಿತಾದ ಮಾಹಿತಿ

ದ್ವಿತೀಯ ಪಿಯುಸಿ ಓದುತ್ತಿರುವ ಹಾಗೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ ವಿದ್ಯಾರ್ಥಿಗಳ ಬೇಡಿಕೆ ಮೇರೆಗೆ ಜಿಲ್ಲಾಡಳಿತದ ವತಿಯಿಂದ ಐ.ಎ.ಎಸ್ , ಐ.ಪಿ.ಎಸ್ , ಕೆ.ಎ.ಎಸ್ ಸೇರಿದಂತೆ ವಿವಿಧ ನಾಗರಿಕ ಸೇವೆಗಳ ಪರೀಕ್ಷೆಗಳ ಕುರಿತು ದಿ 19-06-2021 ರಂದು ವಿಡಿಯೋ ಸಂವಾದದ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ . ದಿ 19-06-2021 ರಂದು ಮಧ್ಯಾಹ್ನ 03.30 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ನಡೆಯಲಿರುವ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳಾದ  ವಿಕಾಸ್ ಕಿಶೋರ್ ಸುರಳ್ಕರ್ ಐ.ಎ.ಎಸ್ ಹಾಗೂ  ಹೇಮಂತ್ ಎನ್ , ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ( 2020 ನೇ ಬ್ಯಾಚ್ ) ಇವರು ಆಸಕ್ತ ಅಭ್ಯರ್ಥಿಗಳಿಗೆ ನಾಗರಿಕ ಸೇವೆಗಳ ಪರೀಕ್ಷೆ ಕುರಿತಾದ ಮಾಹಿತಿಯನ್ನು ನೀಡುವರು . ದ್ವಿತೀಯ ಪಿಯುಸಿ ಓದುತ್ತಿರುವ ಮತ್ತು ಪೂರ್ಣಗೊಳಿಸಿದ , ಪದವಿ ಕೊನೆಯ ವರ್ಷ ಓದುತ್ತಿರುವ ಹಾಗೂ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ದಿನಾಂಕ : 18-06-2021 ರ ಸಾಯಂಕಾಲ 05.00 ಗಂಟೆಯ ಒಳಗೆ ತಮ್ಮ ಹೆಸರು , ವಿಳಾಸ , ಮೊಬೈಲ್ ಸಂಖ್ಯೆ , ವಯಸ್ಸು , ವಿದ್ಯಾರ್ಹತೆಯ ಮಾಹಿತಿಯೊಂದಿಗೆ ಮೊ.ಸಂ. 87920-11835 ಗೆ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಳ್ಳುವುದು . ನೋಂದಣಿ ಮಾಡಿಕೊಂಡವರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಮತ್ತು ಲಿಂಕ್ ಅನ್ನು ನೋಂದಣಿ ಮಾಡಿಕೊಂಡವರ ವಾಟ್ಸಪ್ ನಂಬರ್‌ಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ