ಹಸಿದ ಕಾರ್ಮಿಕರಿಗೆ ಊಟ ನೀರು ಕೊಟ್ಟು ಮಾದರಿಯಾದ ಪೊಲೀಸ್ ಅಧಿಕಾರಿ‌ ಉಮೇರಾಬಾನು

 

ಕೊಪ್ಪಳ : ಕೊರೊನಾ ಸಂದರ್ಭದಲ್ಲಿನ ಲಾಕ್ ಡೌನ್ ಹಾಗೂ ಜನತಾ ಕರ್ಫ್ಯೂ ಅದೇಷ್ಟೋ ಬಡ ಕೂಲಿಕಾರ್ಮಿಕರನ್ನು ಬೀದಿಗೆ ಬೀಳುವಂತೆ ಮಾಡಿದೆ. ಇದ್ರಿಂದ ಅದೇಷ್ಟೋ ಜನರು ಮಾನವೀಯತೆ ದೃಷ್ಟಿಯಿಂದ ಕೂಲಿಕಾರ್ಮಿಕರು ನೆರವಾಗುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಕಾರ್ಯ ನೋಡ್ತಾ ಇದ್ದರೆ ಶಹಬ್ಬಾಸ್ ಎನ್ನದೇ ಇರಲಾರರು. ಹೌದು ಕೊಪ್ಪಳ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಸಂಪೂರ್ಣವಾಗಿ ಸ್ತಬ್ಧವಾಗಿದೆ.ಇದರ ನಡುವೆ ಟ್ರಾಫಿಕ್ ಎಎಸ್ ಐ ಆಗಿರುವ ಉಮೇರಾ ಬಾನು

ಅವರು, ಮಾಸ್ಕ್ ಹಾಕದವರಿಗೆ ಮಾಸ್ಕ್ ನೀಡಿ, ಮಾಸ್ಕ್ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಇಲ್ದೆ ಓಡಾಡುವ ಬಾಲಕರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿ ಹೇಳುವ ಮೂಲಕ ಪೊಲೀಸರು ಸಹ ಸರಳ ವ್ಯಕ್ತಿತ್ವದ ಹೊಂದಿರುತ್ತಾರೆ ಎನ್ನುವುದು ಸಾಬೀತುಪಡಿಸಿದ್ದಾರೆ.
ಟ್ರಾಫಿಕ್ ಎಎಸ್ ಐ ಉಮೇರಾ ಬಾನು, ಹೋಂ ಗಾರ್ಡ್ ಪೊಲೀಸ್ ಅಧಿಕಾರಿ ವೈ ಬಿ ದೊಡ್ಡಮನಿ, ಟ್ರಾಫಿಕ್ ಪೊಲೀಸ್ ಬಸವರಾಜರಿಂದ ಇಂತಹ ಕಾರ್ಯ ನಡೆಯುತ್ತಿದ್ದು, ಕೊಪ್ಪಳದ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಅಗತ್ಯ ವಸ್ತು ಖರೀದಿಗೆ ಬಂದ ಗ್ರಾಮೀಣ ಹಾಗೂ ನಗರ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.ಇನ್ನು ಕಟ್ಟಡ ಕಾರ್ಮಿಕರಿಗೂ ಮಾಸ್ಕ್‌ ನೀಡಿ ನಿತ್ಯ ಧರಿಸಲು ಸೂಚನೆ ನೀಡುತ್ತಾ ಇದ್ದು, ಇದರ ಜೊತೆ ಹಸಿದ ಕಾರ್ಮಿಕರಿಗೆ ಊಟ ನೀರು ಕೊಟ್ಟು ಮಾನವೀಯತೆಯನ್ನು ಸಹ ಎಎಸ್ ಐ ಉಮೇರಾ ಬಾನು ಮೆರೆಯುತ್ತಿದ್ದಾರೆ

Please follow and like us: