ಮೂಗಿನಲ್ಲಿ ನಿಂಬೆ ಹಣ್ಣಿನ ರಸ ಹಾಕಿಕೊಂಡ ಶಿಕ್ಷಕ ಸಾವು!

Kannadanet ರಾಯಚೂರು :

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಶಿಕ್ಷಕರೊಬ್ಬರು ನಿಂಬೆ ಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಂಡಿದ್ದಾರೆ. ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ನಡೆದಿದೆ.

ಸಿಂಧನೂರಿನ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ(43) ಎನ್ನುವರು ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ .ಬೆಳಗ್ಗೆ ಆರೋಗ್ಯವಾಗಿಯೇ ಇದ್ದ ಅವರು, ನಿಂಬೆರಸ ಹಾಕಿಕೊಂಡ ಬಳಿಕ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Please follow and like us:
error