ಖ್ಯಾತ ನಿರ್ಮಾಪಕ ರಾಮು ಕೋವಿಡ್ ನಿಂದ ನಿಧನ

ಬೆಂಗಳೂರು : ಕೊರೋನ ಸೋಂಕಿಗೆ ತುತ್ತಾಗಿದ್ದ ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ  ‘ಕೋಟಿ ರಾಮು ಅವರು ಇಂದು ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ನಟಿ ಮಾಲಾಶ್ರೀ ಅವರ ಪತಿ ರಾಮು ಅವರಿಗೆ ವಾರದ ಹಿಂದೆ ಕೊರೋನ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ

ದಾಖಲಿಸಲಾಗಿತ್ತು. ಆದರೆ ಸೋಮವಾರ ಸಂಜೆ ಅವರು ಮೃತಪಟ್ಟಿದ್ದಾರೆ.ಅವರು ಲಾಕಪ್ ಡೆತ್, ಕಲಾಸಿಪಾಳ್ಯ ಸೇರಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅವರು ‘ಕೋಟಿ ರಾಮು’ ಎಂದೇ ಖ್ಯಾತಿಗಳಿಸಿದ್ದರು.

ಕೊರೋನಾದಿಂದ ಸಾವನ್ನಪ್ಪಿದ ರಾಮು ಈ ಹಿಂದೆ ಹೈದರಾಬಾದ್ ಕರ್ನಾಟಕಕ್ಕೆ ‘ಸಂತ ಶಿಶುನಾಳ ಶರೀಫ ‘ ಚಿತ್ರದ ಹಂಚಿಕೆದಾರರಾಗಿ ಬಂದು ಇಂದು ಚಿತ್ರ ರಂಗದಲ್ಲಿ ದೊಡ್ಡ ದೊಡ್ಡ ಚಿತ್ರಗಳ ನಿರ್ಮಾಪಕರಾಗಿದ್ದ ರಾಮು , ಕ್ರೂರಿ ಕರೊನ ಗೆ ಬಲಿಯಾಗಿದ್ದಾರೆ ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ- ಶಿವರಾಮಗೌಡ ಮಾಜಿ ಸಂಸದರು

Please follow and like us: