ಕೊಪ್ಪಳ, 

: ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ದ್ರಾಕ್ಷಿ ಕಟಾವು ಮುಗಿದಿದ್ದು, ಕಟಾವಿನ ನಂತರ ನಿರ್ವಹಣೆ ಕೂಡ ಬಹುಮುಖ್ಯವಾಗಿದೆ. ಕೊಪ್ಪಳದ ಹಾರ್ಟಿಕ್ಲಿನಿಕ್ ವಿಷಯತಜ್ಞರು ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್ ರವರು ಜಂಟಿಯಾಗಿ ಏಪ್ರಿಲ್‌ನಲ್ಲಿ ದ್ರಾಕ್ಷಿ ಹಿಂಬಡ್ತಿ ಕಟಾವು ಮಾಡುವ ಬಗ್ಗೆ ಹಾಗೂ ನಂತರದ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಚಾಟ್ನಿ ಪ್ರಮುಖವಾಗಿದ್ದು, ಮುಖ್ಯವಾಗಿ ದ್ರಾಕ್ಷಿ ಬೆಳೆಗಳಿಗೆ ವಿಶ್ರಾಂತಿ ಕೊಡುವುದಲ್ಲದೇ ರೋಗಗ್ರಸ್ತ ಕೀಟದಿಂದ ಹಾನಿಗೊಳಗಾದ ರೆಂಬೆ, ಕೊಂಬೆಗಳನ್ನು ಕತ್ತರಿಸಿ ಹಾಕಿ ಇಲಾಖೆಯ ಸಲಹೆಯಂತೆ ಚಾಟ್ನಿ ಮಾಡಬೇಕು.  ಚಾಟ್ನಿಯನ್ನು ಏಪ್ರಿಲ್ ಮೊದಲ ವಾರದಿಂದ ಕೊನೆ ವಾರದೊಳಗೆ ಮಾಡಿ ಮುಗಿಸಬೇಕು. ಏಕೆಂದರೆ ವಾತಾವರಣದಲ್ಲಿ ಪೂರಕವಾದ ಉಷ್ಣತೆ ಮತ್ತು ಸಾಪೇಕ್ಷ ಆರ್ದ್ರತೆ ಇರುವುದರಿಂದ ಈ ಸಮಯ ಅತ್ಯಂತ ಸೂಕ್ತ.  ಚಾಟ್ನಿ ನಂತರದ ಮುಖ್ಯ ಕೀಟಗಳು ಚಿಕ್ಕುಟದುಂಬಿ, ಮೈಟನುಸಿ, ಥ್ರೀಪ್ಸ್ನುಸಿ, ಹಿಟ್ಟು ತಿಗಣೆ ಇತ್ಯಾದಿ, ಈ ಕೀಟಗಳ ಹತೋಟಿಗೆ ತಂಪಾದ (ಬೆಳಗ್ಗೆ/ಸಾಯಂಕಾಲ) ಸಮಯದಲ್ಲಿ ಮೆಲಾಥೀಯಾನ 50 ಇ.ಸಿ. 2 ಮಿ.ಲೀ. ಅಥವಾ ಇಮಿಡಾಕ್ಲೋಪ್ರಿಡ್ 70 ಡಬ್ಲೂö್ಯ.ಜಿ. (ಅಡ್ಮೆöÊಯರ್) 0.25 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಪ್ರಮುಖ ರೋಗಗಳು ಚಿಬ್ಬು ರೋಗ, ದುಂಡಾಣು ರೋಗ, ಪೋಷಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ. ರೋಗಗಳ ಹತೋಟಿಗೆ ಮ್ಯಾಂಕೋಜೆಬ್ ಶಿಲಿಂಧ್ರನಾಶಕವನ್ನು 2.50 ಗ್ರಾಂ. ಪ್ರತಿ 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಗಿಣಗೇರಾದಲ್ಲಿರುವ ತೋಟಗಾರಿಕೆ ಇಲಾಖೆಯ ಅಥವಾ ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್‌ನಲ್ಲಿರುವ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪೋಷಕಾಂಶಗಳ ನಿರ್ವಹಣೆ ಕೈಗೊಳ್ಳಬೇಕು. 4 ರಿಂದ 5 ಎಲೆಗಳ ಹಂತದಲ್ಲಿ ಚಿಗುರುಗಳನ್ನು ವಿರಳಗೊಳಿಸುವುದು. ಸಾಮಾನ್ಯವಾಗಿ ಪ್ರತಿ 2 ಚದರ ಅಡಿಗೆ 1 ಕಡ್ಡಿಯನ್ನು ಕಾಯ್ದುಕೊಂಡು ಉಳಿದವುಗಳನ್ನು ತೆಗೆದು ಹಾಕಬೇಕು.  ಕೇವಲ ಸಮನಾದ ಗಾತ್ರದ ಆರೋಗ್ಯವಂತ ಮತ್ತು ನೇರವಾದ ಬೆಳೆಯುವ ಚಿಗುರುಗಳನ್ನು ಚಿವುಟಿ ತೆಗೆಯಬೇಕು.
ಸಬ್‌ಕೇನ್ ಮಾಡುವುದಕೋಸ್ಕರ 9 ಎಲೆಗಳ ಹಂತದಲ್ಲಿ ಕಡ್ಡಿಗಳ ಮೇಲೆ 7 ಕಣ್ಣುಗಳನ್ನು ಬಿಟ್ಟು ನಂತರದ ಎರಡು ಎಲೆ ಮತ್ತು ಚಿಗುರುಗಳನ್ನು ಚಿವುಟಿ ತೆಗೆಯಬೇಕು.  ಏಪ್ರಿಲ್ ಚಾಟನಿ ಮಾಡಿದ 30 ದಿನದೊಳಗಾಗಿ ಶಿಫಾರಸ್ಸು ಮಾಡಿದ ಸಾರಜನಿಕ ಗೊಬ್ಬರವನ್ನು ಪೂರೈಸಿ ನೀರನ್ನು ಒದಗಿಸುವುದು.  ಚಿವುಟಿದ ಕಡ್ಡಿಗಳಿಂದ ಬಂದAತಹ ಚಿಗುರುಗಳನ್ನು ಮತ್ತೇ ಅವುಗಳ 7 ಎಲೆಗಳ ಹಂತ ತಲುಪಿದಾಗ ಮತ್ತೋಮ್ಮೆ ಚಿವುಟಿ ಎಲೆಗಳಿಗೆ ನಿಯಂತ್ರಿಸಬೇಕು.  ಏಪ್ರಿಲ್ ಚಾಟನಿ ಆದ ನಂತರ 40 ದಿನಗಳ ನಂತರ 6 ಬಿ.ಎ. ರಾಸಾಯನಿಕವನ್ನು 10 ಪಿ.ಪಿ.ಎಂ. ಪ್ರಮಾಣದಲ್ಲಿ ಸಿಂಪರಣೆ ಮಾಡುವುದರಿಂದ ಕಡ್ಡಿಗಳಲ್ಲಿ ಗರ್ಭಕಟ್ಟುವಿಕೆಯನ್ನು ಹೆಚ್ಚಿಸಬಹುದು.
ಏಪ್ರಿಲ್‌ನಲ್ಲಿ ಚಾಟನಿ ಆದ 45 ದಿನಗಳ ನಂತರ ಯುರಾಸಿಲ್ ರಾಸಾಯನಿಕವನ್ನು 50 ಪಿ.ಪಿ.ಎಂ. ಪ್ರಮಾಣದಲ್ಲಿ ಸಿಂಪರಣೆ ಮಾಡುವುದರಿಂದ ಬಳ್ಳಿಗಳಲ್ಲಿ ಆರ್.ಎನ್.ಎ:ಡಿ.ಎನ್.ಎ ಅನುಪಾತ ಹೆಚ್ಚಾಗಿ ಕಡ್ಡಿಗಳಲ್ಲಿ ಫಲಪ್ರದ ಗೆಣ್ಣುಗಳ ಸಂಖ್ಯೆ ಹೆಚ್ಚುತ್ತದೆ.  ಚಾಟನಿ ಮಾಡಿದ 50 ದಿನಗಳ ನಂತರ 6 ಬಿ.ಎ. ರಾಸಾಯನಿಕವನ್ನು 10 ಪಿ.ಪಿ.ಎಂ. ಪ್ರಮಾಣದಲ್ಲಿ ಸಿಂಪರಣೆಯನ್ನು ಪುನರಾವರ್ತಿಸುವುದು. ಏಪ್ರಿಲ್ ಚಾಟನಿ ಮಾಡಿದ 45 ದಿನಗಳ ನಂತರ 0:52:34 (ಮೋನೊ ಪೋಟ್ಯಾಷಿಯಂ ಪಾಸ್ಪೇಟ್) ಸಿಂಪರಣೆಯನ್ನು 2 ಗ್ರಾಂ. ಪ್ರತಿ ಲೀ. ನೀರಿಗೆ 2 ಗ್ರಾಂ. ನಂತೆ ಬೆರೆಸಿ 5 ರಿಂದ 6 ಸಲ 3 ರಿಂದ 4 ದಿನಗಳ ಅಂತರದಲ್ಲಿ ಸಿಂಪರಣೆ ಮಾಡುವುದರಿಂದ ಗರ್ಭಕಟ್ಟುವಿಕೆ ಪ್ರಮಾಣ ಹೆಚ್ಚಾಗುತ್ತದೆ.  ಏಪ್ರಿಲ್ ಚಾಟನಿ ಮಾಡಿದ 31 ರಿಂದ 60 ದಿನಗಳ ಅಂತರದಲ್ಲಿ ಪ್ರತಿ ಎಕರೆಗೆ 18 ಕಿ.ಗ್ರಾಂ. ಡಿ.ಎ.ಪಿ. (18:46:0) ರಂಜಕದ ಗೊಬ್ಬರವನ್ನು ಒದಗಿಸುವುದರಿಂದಲೂ ಕೂಡಾ ಕಡ್ಡಿಗಳಲ್ಲಿ ಗರ್ಭಕಟ್ಟುವಿಕೆ ಹೆಚ್ಚಿಸಬಹುದು.
ಬಳ್ಳಿಯ ಬೆಳವಣಿಗೆ ಮತ್ತು ಹವಾಮಾನ ಆಧರಿಸಿ ಬಳ್ಳಿಯ 7+5+3 ಅಥವಾ 6+4+3 ಎಲೆಗಳ ಹಂತ ಅಥವಾ 16 ರಿಂದ 17 ಎಲೆಗಳ ಹಂತದಲ್ಲಿ ಬಳ್ಳಿಯ ಚಿಗುರನ್ನು ಚಿವುಟಬೇಕು.  ಕಡ್ಡಿಗಳ ಬೆವಣಿಗೆಯನ್ನು ನಿಯಂತ್ರಿಸುವುದರಿAದ ಬೂಜು ತುಪ್ಪಟ ರೋಗ, ಬೂದಿರೋಗ ಹಾಗೂ ಅಂತ್ರಾಕ್ನೋಸ್ ರೋಗಗಳ ಬೆಳವಣಿಗೆಯನ್ನು ಕಡಿಮೆ ಮಾಡಬಹುದು.  ಚಾಟನಿ ಮಾಡಿದ 60 ದಿನಗಳ ನಂತರ ಪ್ರತಿ ಎಕರೆಗೆ 87 ಕಿ.ಗ್ರಾಂ. ಸಲ್ಫೇಟ್ ಆಪ್ ಪೋಟ್ಯಾಷ ಗೊಬ್ಬರವನ್ನು ಹನಿ ನೀರಾವರಿ ಮುಖಾಂತರ ಅಥವಾ ಮಣ್ಣಿಗೆ ಸೇರಿಸುವುದರಿಂದ ಕಡ್ಡಿಗಳು ಬೇಗ ಬಲಿಯುತ್ತವೆ. ಅದೇ ರೀತಿ ಚಿಗುರುಗಳನ್ನು ಆಗಾಗ ಚಿವುಟುತ್ತಿರುವುದರಿಂದ ಸಹ ಕಡ್ಡಿಗಳು ಬೇಗ ಬಲಿಯುತ್ತವೆ.  ಈ ಹಂತದಲ್ಲಿ ಶೇ. 1ರ ಬೋರ್ಡೊ ದ್ರಾವಣವನ್ನು ಸಿಂಪಡಿಸುವುರಿAದ ರೋಗಗಳನ್ನು ಹತೋಟಿಯಲ್ಲಿಡಬಹುದು.  ಆಗಷ್ಟ್ನಿಂದ ಸಪ್ಟಂಬರ್ ತಿಂಗಳಲ್ಲಿ ಕಾಂಡ ಮತ್ತು ಕಾರ್ಡನಗಳ ಮೇಲಿನ ಸಡಿಲವಾದ ತೊಗಟೆಯನ್ನು ತಿಕ್ಕಿ ತೆಗೆದು ಕಾಹುವುದರಿಂದ ಹಿಟ್ಟು ತಿಗಣೆ ಕೀಟದ ಭಾಧೆಯನ್ನು ಕಡಿಮೆ ಮಾಡಬಹುದು. ಏಪ್ರೀಲ್ ಚಾಟನಿ ಮಾಡಿದ 31 ರಿಂದ 90 ದಿನಗಳ ಅಂತರದಲ್ಲಿ ನೀರಿನ ಪೂರೈಕೆಯನ್ನು ನಿಯಂತ್ರಿಸುವುದನ್ನು ಫಲಪ್ರದ ಗೆಣ್ಣುಗಳ ಸಂಖ್ಯೆ ಮತ್ತು ಫಲಪ್ರದ ಕಡ್ಡಿಗಳ ಸಂಖ್ಯೆ ಹೆಚ್ಚಾಗುತ್ತದೆ.
ಹವಾಮಾನ ಆಧಾರಿತವಾಗಿ ಕಾಲಕಾಲಕ್ಕೆ ಬರಬಹುದಾದ ರೋಗ ಅಥವಾ ಕೀಟಗಳ ನಿರ್ವಹಣೆಗೆ ತಜ್ಞರ ಸಲಹೆ ಪಡೆಯಬೇಕು.  ಹೆಚ್ಚಿನ ಮಾಹಿತಿಗಾಗಿ  ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಕೀಟ ಶಾಸ್ರö್ತ ವಿಭಾಗದ ಸಹ ಪ್ರಾಧ್ಯಪಾಕರಾದ  ಡಾ. ರಾಘವೇಂದ್ರ ಆಚಾರಿ ಮೊ.ಸಂ. 9449876730, ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಛೇರಿ (ಜಿಪಂ) ದೂ.ಸಂ. 08539-231530, ಇಲಾಖೆಯ ವಿಷಯ ತಜ್ಞರ ಮೊ.ಸಂ. 9482672039 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Please follow and like us: