ಮತ್ತೊಮ್ಮೆ ಒಂದಾದ 29 ಜೋಡಿಗಳು : ಮರು ಜೀವನಕ್ಕೆ ಅನುವು ಮಾಡಿಕೊಟ್ಟ ಲೋಕ ಅದಾಲತ್

ಮೈಸೂರು : ರಾಷ್ಟ್ರೀಯ ಲೋಕ ಅದಾಲತ್ ದಿನದ ವಿಶೇಷವಾಗಿ 14,237 ಪ್ರಕರಣಗಳನ್ನ ಇತ್ಯಾರ್ಥಮಾಡುವ ಮೂಲಕ ವರ್ಷಗಟ್ಟಲೆ ನ್ಯಾಯಾಲಯಕ್ಕೆ ಅಲೆದು ಸುಸ್ತಾಗಿದ್ದ ಕಕ್ಷಿದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ ಮೈಸೂರು ಜಿಲ್ಲೆಯ ನ್ಯಾಯಾದೀಶರು. ಇದರಲ್ಲಿ ಪ್ರಮುಖವಾಗಿ 137 ಕೌಟುಂಬಿಕ ಪ್ರಕರಣಗಳು ಕೂಡ ಸೇರ್ಪಡೆಯಾಗಿರುವುದು ವಿಷೇಶವಾಗಿದೆ. ಅದರಲ್ಲೂ ಸಂಸಾರಿಕ ಜೀವನದಿಂದ ಬೇಸತ್ತು ವಿವಾಹ ವಿಚ್ಚೇದನಕ್ಕೆ ಅರ್ಜಿಸಲ್ಲಿಸಿದ್ದ 29 ಕುಟುಂಬಗಳಿಗೆ ಸಂಸಾರದ ಗುಟ್ಟನ್ನ ತಿಳಿಹೇಳಿ ಮತ್ತೆ ದಂಪತ್ತ್ಯ ಸುಖ ಅನುಭವಿಸಲು ಅನುವುಮಾಡಿಕೊಟ್ಟಿದ್ದಾರೆ ಇಲ್ಲಿನ ನ್ಯಾಯಾದೀಶರು.ಇಂತದ್ದೊಂದು ಅಪರೂಪದ ಘಳಿಗೆಗೆ ಸಾಕ್ಷಿ ಆದದ್ದು ಮೈಸೂರು ಜಿಲ್ಲಾ ಕೌಟುಂಭಿಕ ನ್ಯಾಯಾಲಯ. ಮೈಸೂರು ಜಿಲ್ಲಾ ಮುಖ್ಯ ನ್ಯಾಯಾದೀಶರಾದ ಎ.ವಿಜಯನ್ ಅವರ ನೇತ್ರತ್ವದಲ್ಲಿ 29 ಜೋಡಿಗಳ ಮರು ಜೀವನಕ್ಕೆ ಅನುವುಮಾಡಿಕೊಡಲಾಯಿತು. ಜಿಲ್ಲಾ ಕೌಟುಂಭಿಕ ನ್ಯಾಯಾಲದ ನ್ಯಾಯಾದೀಶರಾದ ಎನ್.ಎಸ್.ಪಾಟೀಲ್.ಹಾಗೂ ವಿರುಪಾಕ್ಷಯ್ಯ ಪಂಚಾಕ್ಷರಯ್ಯ ಹಿರೇಮಠ ಇವರ ಸಮ್ಮುಖದಲ್ಲಿ 29 ಜೋಡಿಗಳು ಪರಸ್ಪರ ಸಿಹಿ ಹಂಚುವ ಮೂಲಕ ನ್ಯಾಯಾದೀಶರ ಮುಂದೆ ಪ್ರಮಾಣಮಾಡಿ ಸಂಸಾರದಲ್ಲಿ ಒಂದಾಗಿ ಮುಂದುವರೆಯುವ ಬರವಸೆ ನೀಡಿದರು. ಇನ್ನು ಈ ಸಂಭಂದ ಜಿಲ್ಲಾ ಕೌಟುಂಭಿಕ ನ್ಯಾಯಾಲಯದಲ್ಲಿ ಸಮಾರಂಭವೊಂದನ್ನ ನೆರವೇರಿಸಿದ ಇಲ್ಲಿನ ನ್ಯಾಯಾದೀಶರು 29 ಜೋಡಿಗಳನ್ನ ಒಂದೆಡೆ ಸೇರಿಸಿ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ಪತಿ ಪತ್ನಿ ಇಬ್ಬರಿಗೂ ಸಂಸಾರಿಕ ಗುಟ್ಟುಗಳನ್ನ ತಿಳಿ ಹೇಳಿದರು, ಒಟ್ಟಿನಲ್ಲಿ ಮೈಸೂರು ಕೌಟುಂಬಿಕ ನ್ಯಾಯಾಲಯದ ನ್ಯಾಯಾದೀಶರು ನಡೆಸಿಕೊಟ್ಟ ಈ ಕಾರ್ಯಕ್ರಮ ನೊಂದ ಜೀವಿಗಳ ಮನ ಮುಟ್ಟುವಂತಿತ್ತು. ಇನ್ನು ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದ ಈ 29 ಜೋಡಿಗಳು ಮುಂದೆಂದೂ ನಾವಿಬ್ಬರು ಒಂದಾಗುವುದೇ ಬೇಡ ಎಂದು ತೀರ್ಮಾನಿಸಿ ಐದಾರು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದಾಡಿದ್ದರು. ಆದರೆ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಒಂದಾಗಿ ಸಂಸಾರಿಕ ಜೀವನದಲ್ಲಿ ಮತ್ತೆ ಮುಂದುವರೆದಿದ್ದಾರೆ, ಅದಕ್ಕೆ ಕಾರಣ ಇಲ್ಲಿನ ನ್ಯಾಯಾದೀಶರು ಮತ್ತು ಈ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ. ಒಟ್ಟಿನಲ್ಲಿ ಮನಸ್ತಾಪಗಳಿಂದ ಐದಾರು ವರ್ಷಗಳಿಂದ ದೂರ ಇದ್ದು ಸಂಸಾರ ಸುಖ ಕಳೆದುಕೊಂಡಿದ್ದ ಈ ಜೋಡಿಗಳ ಮದ್ಯ ಮತ್ತೆಂದು ವೈ ಮನಸ್ಸು ಮೂಡದಿರಲಿ ಎಂಬುದೇ ಎಲ್ಲರ ಆಶಯ

Please follow and like us: