ಎಸಿಬಿ ಬಲೆಗೆ ಬಿದ್ದ  ಸ್ಮಾರ್ಟ್ ಸಿಟಿಯ ಮುಖ್ಯ ಇಂಜನಿಯರ್

ಅಕ್ರಮವಾಗಿ ಕೂಡಿಟ್ಟಿದ್ದ ನಗದು ರೂ. 23,56,000/-ಗಳು ಪತ್ತೆ

ಸ್ಮಾಟ್ ಸಿಟಿ ಬೆಳಗಾವಿಯ ಮುಖ್ಯ ಇಂಜಿನೀಯರ್ ಎಸಿಬಿ ಬಲೆಗೆ”

ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಳಗಾವಿ ಸ್ಮಾರ್ಟ್ ಸಿಟಿಯ ಸಣ್ಣ ತಿಮಿಂಗಲವಾಗಿ ಗುರುತಿಸಿಕೊಂಡಿದ್ದ ಬೆಳಗಾವಿ ಸ್ಮಾರ್ಟ್ ಸಿಟಿಯ ಮುಖ್ಯ ಇಂಜಿನಿಯರ್ ಸಿದ್ದನಾಯ್ಕ್ ದೊಡ್ಡಬಸಪ್ಪ ನಾಯ್ಕ್ ಎಂಬಾತನನ್ನು ಬೆಳಗಾವಿ ಎಸಿಬಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಸಂಜೀವ ಕುಮಾರ ನವಲಗುಂದ ಎಂಬ ವ್ಯಕ್ತಿಯಿಂದ ಅಪೂರ್ವಾ ಕನ್ಸಟ್ರಕ್ಷನ ಕಂ. ವತಿಯಿಂದ ಬೆಳಗಾವಿ ಸ್ಮಾರ್ಟ ಸಿಟಿ ಲಿ.ಯೋಜನೆಯಡಿ ನಿರ್ವಹಿಸಿದ ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿಯ ಆರ್.ಎ-13 ಬಿಲ್ ಮಂಜೂರು ಮಾಡಲು, ಆರೋಪಿ ನೌಕರ ಶ್ರೀ ಸಿದ್ದನಾಯ್ಕ ದೊಡ್ಡಬಸಪ್ಪ ನಾಯ್ಕರ್, ಆರ್.ಎ-12 ರ ಬಿಲ್ಲಿನ ಶೇಕಡಾ. 0.5 ರಷ್ಟು ಅಂದರೆ ರೂ.60.000/- ಲಂಚದ ಹಣವನ್ನ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ದಿನಾಂಕ. 18.03.2021 ಲಂಚದ ಹಣವನ್ನು ರೂ.60,000/- ಗಳನ್ನು ಆರೋಪಿ ಶ್ರೀ ಸಿದ್ದನಾಯ್ಕ ದೂಡಬಸಪ್ಪ ನಾಯ್ಕರ್ ಮನೆಯಲ್ಲಿ ಸ್ವೀಕರಿಸುತ್ತಿರುವ ವೇಳೆಯಲ್ಲಿ ರೆಟ್ ಹ್ಯಾಂಡ್ ಆಗಿ ಸಿಕಿಬಿದ್ದಿದ್ದು ಆರೋಪಿಯ ಮನೆ ಶೋಧ ನಡೆಸಿದಾಗ ಅಕ್ರಮವಾಗಿ ಕೂಡಿಟ್ಟಿದ್ದ ನಗದು ರೂ. 23,56,000/-ಗಳು ಪತ್ತೆಯಾಗಿದೆ. ಆರೋಪಿ ಇಂಜಿನಿಯರ್ ನನ್ನು ವಶಕ್ಕೆ ಪಡೆದಿರುವ ಎಸಿಬಿ ಪೋಲಿಸರು ಪ್ರಕರಣದ ತನಿಖೆಯನ್ನು ನಡೆಸಿದ್ದಾರೆ.

ಸದರಿ ಪ್ರಕರಣವನ್ನು ಶ್ರೀ. ಬಿ. ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಶ್ರೀ ಜೆ.ಎಮ್.ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಠಾಣೆ, ಬೆಳಗಾವಿ ರವರು ದಾಖಲಿಸಿಕೊಂಡಿರುತ್ತಾರೆ. ಶ್ರೀ.ಎ.ಎಸ್ ಗುದಿಗೊಪ್ಪ, ಪೊಲೀಸ್ ಇನ್ಸ್ಪೆಕ್ಟರ್, ಹಾಗೂ ಶ್ರೀ ಹೆಚ್.ಸುನೀಲ್‍ಕುಮಾರ, ಪೊಲೀಸ್ ಇನ್ಸ್ಪೆಕ್ಟರ್, ಮತ್ತು ಬೆಳಗಾವಿ ಎಸಿಬಿ ಪೊಲೀಸ್ ಠಾಣೆ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

 

Please follow and like us: