ವಿಜ್ಞಾನ ವಿಭಾಗದಿಂದ ರಸ ಪ್ರಶ್ನೆ ಕಾರ್ಯಕ್ರಮ


ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ಆರು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಚಂದುಸಾಬ್, ಶಂಕರನಾಗ್, ಮೇಘಾ ಹಾಗೂ ಅಭಿಷೇಕ್ ಇವರನ್ನೊಳಗೊಂಡ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಆಯ್ಕೆಯಾದ ಇತರ ಎರಡು ತಂಡಗಳಿಗೂ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ನೀಡಲಾಯಿತು. ವಿಜೇತ ತಂಡಗಳಿಗೆ ಪ್ರಾಚಾರ್ಯರಾದ ಡಾ.ವಿರೇಶ್‌ಕುಮಾರ್, ಶೈಕ್ಷಣಿಕ ಸಂಯೋಜಕರಾದ ಪರೀಕ್ಷಿತರಾಜ್, ಆಡಳಿತಾಧಿಕಾರಿಗಳಾದ ಡಾ. ಶಿವಕುಮಾರಹಿರೇಮಠ ಇವರುಗಳು ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು. ವಿಜ್ಞಾನ ವಿಭಾಗದ ಸಂತೋಷಗೌಡ , ವಿನಾಯಕ್, ಪ್ರತಾಪ್, ವಾಸನಗೌಡ, ದರ್ಶನ್, ಮಂಜುನಾಥ ಬಡಿಗೇರ್, ಹನುಮಪ್ಪಶೆಲೋಡಿ, ಕುಬೇರ, ಶ್ರೀಧರ, ಭವಾನಿ, ಮಧು ಬಳ್ಳೊಳ್ಳಿ ಇತರರು ಹಾಗೂ ವಿದ್ಯಾರ್ಥಿಗಳು ಇದ್ದರು.

Please follow and like us: