ಪ್ರವಾಸಿ ಟ್ಯಾಕ್ಸಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ,  : ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
2013-14 ರಿಂದ 2017-18 ರವರೆಗೆ ಸಾಲ ಮಂಜೂರಾತಿಯಾಗದೇ ಬಾಕಿ ಉಳಿದಿರುವ ಪರಿಶಿಷ್ಟ ಜಾತಿಯ 10, ಪರಿಶಿಷ್ಟ ಪಂಗಡದ 02 ಮತ್ತು ಹಿಂದುಳಿದ ವರ್ಗಗಳ 06 ಮತ್ತು ಅಲ್ಪಸಂಖ್ಯಾತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 40 ವರ್ಷ ವಯೋಮಿತಿಯೊಳಗಿದ್ದು, ಕನಿಷ್ಠ ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು.


ಅರ್ಜಿ ಸಲ್ಲಿಸಲು ಮಾರ್ಚ್.25 ಕೊನೆಯ ದಿನವಾಗಿದೆ. ಮಾರ್ಚ್.27 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಘೋಷಿಸಲಾಗುವುದು. ಆಯ್ಕೆ ಪಟ್ಟಿ ಕುರಿತಂತೆ ಮಾರ್ಚ್.29 ರಿಂದ 31 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಏಪ್ರಿಲ್.01 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ಏಪ್ರಿಲ್.03 ರಿಂದ 30 ರವರೆಗೆ ಬ್ಯಾಂಕಿನಿAದ ಸಾಲ ಮಂಜೂರಾತಿ ಹಾಗೂ ಪೊಲೀಸ್ ಠಾಣೆಯಿಂದ ದೃಢೀಕರಣ ಪಡೆಯಬೇಕು.
ಅರ್ಜಿಯೊಂದಿಗೆ ಆರ್‌ಟಿಒ ರವರಿಂದ ಪಡೆದಿರುವ ಬ್ಯಾಡ್ಜ್ ಹೊಂದಿರುವ ಖಾಯಂ ಲಘು ವಾಹನ ಚಾಲನಾ ಪರವಾನಗಿ ಪತ್ರದ ಪ್ರತಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಇತ್ತೀಚಿನ 2 ಭಾವಚಿತ್ರಗಳು, ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸಬೇಕು.
ಫಲಾನುಭವಿಗಳ ಆಯ್ಕೆಯನ್ನು ಅಭ್ಯರ್ಥಿಯ ವಯಸ್ಸಿಗೆ ಶೇ.60 ಹಾಗೂ ಎಸ್.ಎಸ್.ಎಲ್‌ಸಿ ಯಲ್ಲಿ ಪಡೆದ ಅಂಕಗಳ ಶೇ. 40 ರಷ್ಟು ಆಧಾರದಲ್ಲಿ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು. ಸಮಾನತೆ ಕಂಡು ಬಂದಲ್ಲಿ ಲಾಟರಿ ಮೂಲಕ ಅಂತಿಮಗೊಳಿಸಲಾಗುವುದು. ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಸಬೇಕಿದ್ದು ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ. ಪ್ರಭಾವ ಬೀರಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ನಮೂನೆ, ಅರ್ಹತೆಗಳು, ಷರತ್ತುಗಳು ಹಾಗೂ ಮುಂತಾದ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಕೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಶಾಂತ ಪಿ.   ತಿಳಿಸಿದ್ದಾರೆ.

Please follow and like us: