ಎಸಿಬಿ ಬಲೆಗೆ ಬಿದ್ದ ಕೊಪ್ಪಳ ಬಿಇಓ ಹಾಗೂ ಎಸ್ಡಿಎ

Koppal ಬಂದ್ ಆಗಿರುವ ಶಾಲೆಯ ಡಿಪಾಜಿಟ್ ವಾಪಸ್ ಪಡೆಯಲು ಮೂರುವರೆ ಸಾವಿರ ಕೇಳಿದ್ದ ಬಿಇಓ , ಎಪ್ಡಿಎ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕೊಪ್ಪಳ ಬಿಇಓ ಹಾಗೂ ಎಸ್ಡಿಎ ಬಲೆಗೆ ಬಿದ್ದವರು. ಭಾಗ್ಯನಗರದ SSK ಶಾಲೆಯ ಬಾಲಚಂದ್ರ ಕಬಾಡೆ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಮೂರೂವರೆ ಸಾವಿರ ಕೊಡುವಾಗ ದಾಳಿ ಮಾಡಲಾಗಿದೆ.ಬಿಇಓ ಶ್ರೀಮತಿ ಉಮಾದೇವಿ ಸೊನ್ನದ, ಎಸ್ಡಿಎ ಆರುಂಧತಿ ಬಲೆಗೆ ಬಿದ್ದಿದ್ದಾರೆ. ಶಾಲೆ ೨೦೦೨ರಲ್ಲಿ ಆರಂಭವಾಗಿದ್ದು ೨೦೦೯ ರಲ್ಲಿ ಬಂದಾಗಿತ್ತು.

ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ
ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡದಿಂದ ದಾಳಿ ನಡೆದಿದೆ‌

Please follow and like us: